alex Certify India | Kannada Dunia | Kannada News | Karnataka News | India News - Part 1125
ಕನ್ನಡ ದುನಿಯಾ
    Dailyhunt JioNews

Kannada Duniya

ʼರಾಮಮಂದಿರʼಕ್ಕೆ ಶ್ರೀಲಂಕಾದಿಂದ ಕಲ್ಲು ತರುತ್ತಿರುವುದರ ಹಿಂದಿದೆ ಈ ಕಾರಣ

ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ದೇವಸ್ಥಾನದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಇದೇ ವೇಳೆ ನಿರ್ಮಾಣ ಕಾರ್ಯಕ್ಕೆ ಬಹಳ ಅಮೂಲ್ಯವಾದ ವಸ್ತುವೊಂದನ್ನು ಬಳಸುತ್ತಿದ್ದು, ಶ್ರೀರಾಮ ಭಕ್ತರಿಗೆ ಭಾರೀ ಖುಷಿ ನೀಡುವ Read more…

ಸ್ಟೀಫನ್ ಹಾಕಿಂಗ್ ಜೊತೆಗಿನ ಥ್ರೋಬ್ಯಾಕ್ ಚಿತ್ರ ಶೇರ್‌ ಮಾಡಿಕೊಂಡ ಆನಂದ್ ಮಹಿಂದ್ರಾ

ಉದ್ಯಮಿ ಆನಂದ್ ಮಹಿಂದ್ರಾ ಯಾವಾಗಲೂ ದೇಶದ ಯುವಜನರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಟಚ್‌ನಲ್ಲಿ ಇರುತ್ತಾರೆ. ವಿಶ್ವಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಜೊತೆಗಿರುವ ತಮ್ಮ ಚಿತ್ರವೊಂದನ್ನು ಹಂಚಿಕೊಂಡಿರುವ ಆನಂದ್, “ಸವಿನೆನಪು…! Read more…

ಮಕ್ಕಳಿಗೆ ʼಕೊರೊನಾʼ ಹರಡುವ ಸಾಧ್ಯತೆ ಕುರಿತು ಕೇಂದ್ರ ಸಚಿವರಿಂದ ಮಹತ್ವದ ಮಾಹಿತಿ

14 ವರ್ಷದ ಒಳಗಿನ ಮಕ್ಕಳಿಗೆ ಕೊರೊನಾ ಹರಡುವ ಸಾಧ್ಯತೆ ಕಡಿಮೆ ಇದೆ ಎಂದು ಅಧ್ಯಯನ ತಿಳಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​​ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಮಕ್ಕಳ Read more…

‘ಕೊರೊನಾ’ ಏರಿಕೆ ಹಿನ್ನೆಲೆಯಲ್ಲಿ ಮತ್ತೆ ಜಾರಿಯಾಗುತ್ತಾ ಲಾಕ್ ಡೌನ್…?

ಕಳೆದ ವರ್ಷಾರಂಭದಲ್ಲಿ ಕಾಣಿಸಿಕೊಂಡ ಕೊರೊನಾ ಸಾರ್ವಜನಿಕರ ಜೀವನವನ್ನು ಕಡು ಸಂಕಷ್ಟಕ್ಕೆ ಸಿಲುಕಿಸಿತ್ತು. ಕೊರೊನಾ ನಿಯಂತ್ರಣಕ್ಕೆ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ್ದ ಜನತೆ Read more…

ಶಾಕಿಂಗ್ ನ್ಯೂಸ್: ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲು ಪಶು ಆಹಾರ ಕಳಿಸಿದ ಪಾಲಿಕೆ

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲಿಗೆ ಪಶುಗಳಿಗೆ ನೀಡುವ ಪೌಷ್ಟಿಕಾಂಶ ಆಹಾರ ಕಳುಹಿಸಿದ ಘಟನೆ ಪುಣೆಯಲ್ಲಿ ನಡೆದಿದೆ. ಶ್ರೀಮಂತ ಮಹಾನಗರ ಪಾಲಿಕೆಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದ ಪುಣೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ Read more…

BIG NEWS: ಇನ್ನೂ ಎಷ್ಟು ತಲೆಮಾರಿಗೆ ಮೀಸಲಾತಿ ಕೊಡ್ತೀರಾ..? ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆ

ನವದೆಹಲಿ: ಮೀಸಲಾತಿಯನ್ನು ಇನ್ನು ಎಷ್ಟು ತಲೆಮಾರಿಗೆ ಕೊಡುತ್ತೀರಿ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದಿದ್ದು, ರಾಜ್ಯ ಸರ್ಕಾರಗಳು ಇಷ್ಟೆಲ್ಲಾ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವೆ. ಹೀಗಿರುವಾಗ Read more…

BIG NEWS: ಏರುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ, ಮತ್ತೆ ಲಾಕ್ಡೌನ್ ಜಾರಿ ಬಗ್ಗೆ ಜನರಲ್ಲಿ ಹೆಚ್ಚಾಗ್ತಿದೆ ಆತಂಕ

ಮತ್ತೊಮ್ಮೆ ಲಾಕ್ಡೌನ್ ಜಾರಿಯಾಗುತ್ತದೆಯೇ ಎನ್ನುವ ಆತಂಕ ಜನರಲ್ಲಿ ಮೂಡಿದೆ. ಇದಕ್ಕೆ ಕಾರಣ ದೇಶದೆಲ್ಲೆಡೆ ಕೊರೋನಾ ಎರಡನೇ ಅಲೆ ಶುರುವಾಗಿರುವುದು. ದೇಶದ ಅನೇಕ ರಾಜ್ಯಗಳಲ್ಲಿ ಕೊರೋನಾ ಎರಡನೇ ಆಲೆ ಆತಂಕ Read more…

ಶಾಸಕ ಜಿಗ್ನೇಶ್​ ಮೇವಾನಿಯನ್ನ ಸದನದಿಂದ ಹೊರ ಕಳುಹಿಸಿದ ಸಭಾಪತಿ..!

ಗುಜರಾತ್​​ನ ಪಕ್ಷೇತರ ಶಾಸಕ ಜಿಗ್ನೇಶ್​ ಮೇವಾನಿಯನ್ನ ಅಶಿಸ್ತು ತೋರಿದ ಆರೋಪದ ಹಿನ್ನೆಲೆಯಲ್ಲಿ ಸದನದಿಂದ ಅಮಾನತು ಮಾಡಲಾಗಿದೆ. ಸದನದಲ್ಲಿ ಸ್ಪೀಕರ್​ ಅನುಮತಿ ಕೇಳದೆಯೇ ದಲಿತ ವ್ಯಕ್ತಿಯ ಕೊಲೆಯ ವಿಚಾರವನ್ನ ಸದನದಲ್ಲಿ Read more…

ಖಾಕಿ ಚಡ್ಡಿ ಧರಿಸಿರುವ ಪ್ರಧಾನಿ ಮೋದಿ ಫೋಟೋ ಶೇರ್‌ ಮಾಡಿ ವ್ಯಂಗ್ಯವಾಡಿದ ಪ್ರಿಯಾಂಕಾ

ಹರಿದ ಜೀನ್ಸ್​ಗಳ ಬಗ್ಗೆ ಉತ್ತರಾಖಂಡ್​ ಸಿಎಂ ತಿರಥ್ ಸಿಂಗ್​​ ರಾವತ್​ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗ್ತಿದೆ. ಟ್ವಿಟರ್ ಅಭಿಯಾನಗಳ ಮೂಲಕ ಮಹಿಳೆಯರು, Read more…

ಹೆಲ್ಮೆಟ್‌ ಧರಿಸಿಲ್ಲ ಅಂತ ‘ಟ್ರಕ್’ ಚಾಲಕನಿಗೆ 1000 ರೂ. ದಂಡ

ಹೆಲ್ಮೆಟ್ ಧರಿಸದೇ ಟ್ರಕ್ ಚಾಲನೆ ಮಾಡಿದ ಕಾರಣಕ್ಕೆ ಚಾಲಕನಿಗೆ 1000 ರೂ. ದಂಡ ವಿಧಿಸಿದ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಘಟಿಸಿದೆ. ಟ್ರಕ್‌ ಚಲಿಸುವಾಗ ಹೆಲ್ಮೆಟ್ ಧರಿಸುವ ಅಗತ್ಯ Read more…

ಒಂದೇ ದಿನ ದಾಖಲೆ ಸಂಖ್ಯೆ ಜನರಿಗೆ ಕೊರೋನಾ ಸೋಂಕು: ಲಾಕ್ಡೌನ್ ಬಗ್ಗೆ ಉದ್ಧವ್ ಠಾಕ್ರೆ ಮಹತ್ವದ ಹೇಳಿಕೆ

ಮುಂಬೈ: ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 25,833 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಅತಿ ಹೆಚ್ಚು ಏಕದಿನದ ಏರಿಕೆ ಕಂಡ ಒಂದು ದಿನದ ನಂತರ ಮುಖ್ಯಮಂತ್ರಿ ಉದ್ಧವ್ Read more…

ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಿಗೆ ಉಚಿತ ಸೇವೆ ನೀಡಲಿದೆ ಉಬರ್

ದೇಶದಲ್ಲಿ ಕೊರೊನಾ ಲಸಿಕೆಯ ಎರಡನೇ ಅಭಿಯಾನ ನಡೆಯುತ್ತಿದೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಿಗೆ ಉಬರ್ ಖುಷಿ ಸುದ್ದಿಯೊಂದನ್ನು ನೀಡಿದೆ. ಉಬರ್, ಲಸಿಕೆ ಹಾಕಿಸಿಕೊಳ್ಳುವವರಿಗೆ ಉಚಿತ ಸವಾರಿ ಸೌಲಭ್ಯ ನೀಡ್ತಿದೆ. ಉಬರ್, Read more…

BIG NEWS: ಕಠಿಣವಾಗಲಿದೆ ಚಾಲನಾ ಪರವಾನಗಿ ಪಡೆಯುವ ನಿಯಮ – ಪರೀಕ್ಷೆಗೂ ಮುನ್ನ ವಿಡಿಯೋ ಟ್ಯುಟೋರಿಯಲ್‌ ಕಡ್ಡಾಯ

ಚಾಲನಾ ಪರವಾನಗಿ ಪಡೆಯುವುದು ಇನ್ಮುಂದೆ ಮತ್ತಷ್ಟು ಕಠಿಣವಾಗಲಿದೆ. ಚಾಲನಾ ಪರವಾನಗಿ ಪಡೆಯಲು ಒಂದು ತಿಂಗಳ ಮೊದಲೇ ಸಿದ್ಧತೆ ನಡೆಸಬೇಕಾಗುತ್ತದೆ. ಚಾಲನಾ ಪರವಾನಗಿ ಅಗತ್ಯವಿರುವವರು ಒಂದು ತಿಂಗಳ ಮುಂಚಿತವಾಗಿ ವಿಡಿಯೊ Read more…

BIG NEWS: ತಂದೆಯ 2ನೇ ಮದುವೆ ಸಿಂಧುತ್ವ ಪ್ರಶ್ನಿಸುವ ಪುತ್ರಿ ಅಧಿಕಾರದ ಕುರಿತು ಹೈಕೋರ್ಟ್ ಮಹತ್ವದ ತೀರ್ಪು

ಬಾಂಬೆ ಹೈಕೋರ್ಟ್​ ಬುಧವಾರ ಕೌಟುಂಬಿಕ ನ್ಯಾಯಾಲಯದ ಆದೇಶವನ್ನ ಬದಿಗಿಟ್ಟು, 2003ರಲ್ಲಿ ತಾಯಿಯ ಮರಣದ ಬಳಿಕ ತಂದೆಯ ಎರಡನೇ ಮದುವೆಯ ಸಿಂಧುತ್ವವನ್ನ ಪ್ರಶ್ನಿಸಿದ ಕೈಗಾರಿಕೋದ್ಯಮಿಯೊಬ್ಬರ ಪುತ್ರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ Read more…

ವಿಶ್ವದ ಅತಿ ‘ಡೇಂಜರ್​ ರೋಡ್’​ ಪಟ್ಟಿಯಲ್ಲಿ ಇಷ್ಟನೇ ಸ್ಥಾನದಲ್ಲಿದೆ ಭಾರತ..!

ಅಂತಾರಾಷ್ಟ್ರೀಯ ಡ್ರೈವರ್ ಎಜುಕೇಶನ್​ ಕಂಪನಿ ಝುಟೋಬಿ ವಿಶ್ವದಲ್ಲಿ ಸರ್ವೇ ಒಂದನ್ನ ನಡೆಸಿದ್ದು ಇದರ ಅನ್ವಯ ದಕ್ಷಿಣ ಆಫ್ರಿಕಾ ವಿಶ್ವದಲ್ಲೇ ಅತ್ಯಂತ ಭಯಾನಕ ರಸ್ತೆಯನ್ನ ಹೊಂದಿದೆ ಎಂದು ಹೇಳಿದೆ. ಈ Read more…

ಮದುವೆಗೆ ಮೊದಲು ಇದನ್ನು ಮಾಡದೆ ಹೋದ್ರೆ ‘ದುಃಸ್ವಪ್ನ’ವಾಗಲಿದೆ ಮೊದಲ ರಾತ್ರಿ

ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದು ಸವಾಲಿನ ಕೆಲಸವಾಗಿದೆ. ಮಧ್ಯಮ ವರ್ಗದ ಹುಡುಗರನ್ನು ಮದುವೆಯಾಗಲು ಹುಡುಗಿಯರು ಒಪ್ಪುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಹುಡುಗಿಯರು, ಮದುವೆ ಹೆಸರಿನಲ್ಲಿ ಮೋಸ ಮಾಡ್ತಿದ್ದಾರೆ. ಮೊದಲ Read more…

ವಲಸೆ ಕಾರ್ಮಿಕರಿಗೆ ನೆರವಾಗ್ತಿದೆ ‘ಒನ್ ನೇಷನ್ ಒನ್ ರೇಷನ್’ ಕಾರ್ಡ್ ಯೋಜನೆ

ದೇಶದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಸಾಕಷ್ಟಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೆಲಸ ಅರಸಿ ಬರುವ ಕೋಟ್ಯಾಂತರ ಕಾರ್ಮಿಕರು ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಕಾರ್ಮಿಕರ Read more…

ತಿಂಗಳ ಹಿಂದೆ ಶುರುವಾಗಿದ್ದ ದೇಶದ ಮೊದಲ ಸೆಕ್ಸ್ ಟಾಯ್ಸ್ ಅಂಗಡಿ ʼಬಂದ್ʼ

ಉತ್ತರ ಗೋವಾದ ಜನಪ್ರಿಯ ಕಲಂಗುಟ್ ಬೀಚ್ ಬಳಿ ಪ್ರಾರಂಭವಾಗಿದ್ದ ಸೆಕ್ಸ್ ಟಾಯ್ಸ್ ಮಳಿಗೆ ಬಾಗಿಲು ಮುಚ್ಚಲಾಗಿದೆ. ಕಾಮ ಗಿಜ್ಮೋಸ್  ಹೆಸರಿನಲ್ಲಿ ಪ್ರಾರಂಭವಾಗಿದ್ದ ಮಳಿಗೆ, ಒಂದು ತಿಂಗಳು ಪೂರ್ಣಗೊಳ್ಳುವ ಮೊದಲೇ Read more…

ʼಕೊರೊನಾʼ ಲಸಿಕೆ ನಂತ್ರದ ಅನಾರೋಗ್ಯ: ವಿಮಾ ಕಂಪನಿಗಳಿಗೆ IRDA ಮಹತ್ವದ ಸೂಚನೆ

ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಆರೋಗ್ಯ ಕಾರ್ಯಕರ್ತರ ನಂತ್ರ 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಇದ್ರ ಜೊತೆ 45 ವರ್ಷ ಮೇಲ್ಪಟ್ಟ, ಕೆಲ ಖಾಯಿಲೆಯಿಂದ ಬಳಲುತ್ತಿರುವವರಿಗೂ Read more…

BIG NEWS: ಬಿಜೆಪಿ ಸರ್ಕಾರಕ್ಕೆ ತಗುಲಿರುವ ʼಭ್ರಷ್ಟಾಚಾರʼದ ವೈರಸ್ ಗೆ ಲಸಿಕೆ ತರುವುದು ಎಲ್ಲಿಂದ….? ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೊರೊನಾ ವೈರಸ್‌ಗೆ ಲಸಿಕೆ ಬಂದಿದೆ, ಆದರೆ ಬಿಜೆಪಿ ಸರ್ಕಾರಕ್ಕೆ ತಗುಲಿರುವ ಭ್ರಷ್ಟಾಚಾರದ ವೈರಸ್ ಗೆ ಎಲ್ಲಿಂದ Read more…

ಪ್ರತಿಭಟನಾ ವೇದಿಕೆಯೇ ಮದುವೆ ಮಂಟಪ – ಫೋಟೋ ಪ್ರದಕ್ಷಿಣೆಯೇ ಸಪ್ತಪದಿ: ರೈತರ ಧರಣಿ ಸ್ಥಳದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಈ ನಡುವೆ ರೈತರ ಪ್ರತಿಭಟನಾ ನಿರತ ವೇದಿಕೆ ಮೇಲೆಯೇ ರೈತಮುಖಂಡನ ಮಗನೊಬ್ಬ ವೈವಾಹಿಕ ಜೀವನಕ್ಕೆ ಕಾಲಿಟ್ಟ ಘಟನೆ Read more…

ಮಾಜಿ ಪ್ರಿಯಕರನ ನಿಶ್ಚಿತಾರ್ಥಕ್ಕೆ ಬೌನ್ಸರ್ ಜೊತೆ ಬಂದ ಬೆಡಗಿ ಹೇಳಿದ ರಹಸ್ಯ ಕೇಳಿದವರಿಗೆಲ್ಲ ಬಿಗ್ ಶಾಕ್

ಬರೇಲಿ: ತನ್ನ ಮಾಜಿ ಪ್ರಿಯಕರನ ನಿಶ್ಚಿತಾರ್ಥಕ್ಕೆ ಬಂದಿದ್ದ ಯುವತಿ, ಯುವಕ ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ. ಬೌನ್ಸರ್ ಗಳ ಜೊತೆಗೆ ಆಗಮಿಸಿದ ಯುವತಿ Read more…

BIG NEWS: ಇನ್ನಷ್ಟು ಏರಿಕೆಯಾದ ಕೊರೊನಾ – ಬೆಚ್ಚಿಬೀಳಿಸುವಂತಿದೆ ಒಂದೇ ದಿನದಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 39,726 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,15,14,331ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕ್ಯಾಡ್ಬರಿ ಜಾಹೀರಾತಿನ ವಿರುದ್ಧ ನ್ಯಾಯಾಲಯದ ಮೊರೆ ಹೋದ ವಕೀಲ

ಭಾರತೀಯ ಸಂಸ್ಕೃತಿ ಹಾಗೂ ಮೌಲ್ಯಗಳಿಗೆ ವಿರೋಧವಾದ ರೀತಿಯಲ್ಲಿ ಜಾಹೀರಾತು ನೀಡುತ್ತಿರುವ ಕಾರಣ ಕ್ಯಾಡ್ಬರಿ ಮೊಂಡೆಲೆಝ್ ಇಂಡಿಯಾ ಫುಡ್ಸ್‌ ಪ್ರೈ.ಲಿ.ನ ಜಾಹೀರಾತಿನ ಮೇಲೆ ನಿಷೇಧ ಹೇರಬೇಕೆಂದು ಆಗ್ರಹಿಸಿ ಅಜ್ಮೇರ್‌ ವಕೀಲ Read more…

ಮಾಜಿ ಮುಖ್ಯಮಂತ್ರಿಗೆ ಬಿಗ್ ಶಾಕ್: ಕೈತಪ್ಪಿದ ಕಾಂಗ್ರೆಸ್ ಟಿಕೆಟ್ – ಚುನಾವಣೆ ಉಸ್ತುವಾರಿಯಾದ ಹಿರಿಯ ನಾಯಕ

ಪುದುಚೇರಿ: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಕೈ ತಪ್ಪಿದೆ. ಕಾಂಗ್ರೆಸ್ ಸರ್ಕಾರ ಉಳಿಸಿಕೊಳ್ಳಲು ನಾರಾಯಣಸ್ವಾಮಿ ವಿಫಲರಾಗಿದ್ದಾರೆ. ಅಲ್ಲದೆ Read more…

ಕೋವಿಡ್‌ ಲಸಿಕೆ: ದೇಶವಾಸಿಗಳಿಗಿಂತ ರಫ್ತು ಮಾಡಲು ಹೆಚ್ಚು ಆದ್ಯತೆ….?

ಭಾರತವು 70 ದೇಶಗಳಿಗೆ ಒಟ್ಟು 5.84 ಕೋಟಿ ಕೋವಿಡ್-19 ಲಸಿಕೆಗಳನ್ನು ರಫ್ತು ಮಾಡಿದೆ. ಇದೇ ವೇಳೆ ದೇಶದೊಳಗಿನ ಮಂದಿಗೆ 3.48 ಕೋಟಿಯಷ್ಟು ಲಸಿಕೆಗಳನ್ನು ಹಾಕಿದೆ. ಕೇಂದ್ರ ಆರೋಗ್ಯ ಹಾಗೂ Read more…

ಅವಧಿಪೂರ್ವ ಹೆರಿಗೆ: ಶೌಚಾಲಯದಲ್ಲಿ ಅವಳಿ ಮಗುವಿಗೆ ಜನ್ಮವಿತ್ತ ಮಹಿಳೆ

ನತದೃಷ್ಟ ಘಟನೆಯೊಂದರಲ್ಲಿ, ದೆಹಲಿಯ ಸಾರ್ವಜನಿಕ ಶೌಚಾಲಯವೊಂದರಲ್ಲಿ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮವಿತ್ತಿದ್ದು, ಒಂದು ಮಗು ಮೃತಪಟ್ಟು ಮತ್ತೊಂದು ಕ್ರಿಟಿಕಲ್ ಪರಿಸ್ಥಿತಿಯಲ್ಲಿದೆ. ಇಲ್ಲಿನ ವಿಜಯ್‌ನಗರದಲ್ಲಿ ಈ ಘಟನೆ ಜರುಗಿದ್ದು, 32 Read more…

BIG NEWS: ಲೈಂಗಿಕ ಅಪರಾಧಗಳ ವಿಚಾರಣೆ ಮಾಡಲು ’ಸುಪ್ರಿಂ’ ಮಾರ್ಗಸೂಚಿ

ಲೈಂಗಿಕವಾಗಿ ಹಲ್ಲೆ ಮಾಡಿದ ಪುರುಷನಿಗೆ ರಾಖಿ ಕಟ್ಟಲು ಸಂತ್ರಸ್ತೆಗೆ ಸೂಚಿಸಿದ ಮಧ್ಯ ಪ್ರದೇಶ ಹೈಕೋರ್ಟ್‌ನ ಆದೇಶವನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್, ಲೈಂಗಿಕ ಅಪರಾಧಗಳ ಪ್ರಕರಣಗಳ ಆಲಿಕೆ ನಡೆಸಲು ಹೊಸ Read more…

ಖೈದಿಗಳಲ್ಲೂ ಜಾತಿ ತಾರತಮ್ಯ ಮಾಡುತ್ತಿದ್ದ 120 ವರ್ಷ ಹಳೆ ಕಾಯಿದೆಗೆ ರಾಜಸ್ಥಾನ ಸರ್ಕಾರದ ತಿಲಾಂಜಲಿ

ಹಿಂದುಳಿದ ವರ್ಗಗಳಿಗೆ ಸೇರಿದ ಖೈದಿಗಳನ್ನು ಅಡುಗೆ ಮಾಡಲು ಅವಕಾಶ ಕೊಡದೇ ಇದ್ದ 120 ವರ್ಷ ಹಳೆಯ ಕಾಯಿದೆಯೊಂದನ್ನು ರಾಜಸ್ಥಾನ ಸರ್ಕಾರ ಸರಿಪಡಿಸಿದೆ. ಬ್ರಿಟಿಷ್‌ ರಾಜ್ ಕಾಲದಲ್ಲಿ ತರಲಾಗಿದ್ದ ಈ Read more…

BIG NEWS: ನಾಮಪತ್ರ ಸಲ್ಲಿಸುವಾಗಲೇ ಮನಗೆದ್ದ ‘ಕರ್ನಾಟಕ ಸಿಂಗಂ’ ಅಣ್ಣಾಮಲೈ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ‘ಕರ್ನಾಟಕ ಸಿಂಗಂ’ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅರವಕುರಿಚಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇಂದು ನಾಮಪತ್ರ ಸಲ್ಲಿಸಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...