alex Certify ‘ಕೊರೊನಾ’ ಏರಿಕೆ ಹಿನ್ನೆಲೆಯಲ್ಲಿ ಮತ್ತೆ ಜಾರಿಯಾಗುತ್ತಾ ಲಾಕ್ ಡೌನ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಏರಿಕೆ ಹಿನ್ನೆಲೆಯಲ್ಲಿ ಮತ್ತೆ ಜಾರಿಯಾಗುತ್ತಾ ಲಾಕ್ ಡೌನ್…?

ಕಳೆದ ವರ್ಷಾರಂಭದಲ್ಲಿ ಕಾಣಿಸಿಕೊಂಡ ಕೊರೊನಾ ಸಾರ್ವಜನಿಕರ ಜೀವನವನ್ನು ಕಡು ಸಂಕಷ್ಟಕ್ಕೆ ಸಿಲುಕಿಸಿತ್ತು. ಕೊರೊನಾ ನಿಯಂತ್ರಣಕ್ಕೆ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ್ದ ಜನತೆ ಈಗಲೂ ಅದರಿಂದ ಹೊರ ಬಂದಿಲ್ಲ. ಇದರ ಮಧ್ಯೆ ದೇಶದಲ್ಲಿ ಈಗ ಕೊರೊನಾ ಎರಡನೇ ಅಲೆ ಆರಂಭವಾಗಿದೆ.

ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಕಾರಣ ದೇಶದ ಕೆಲವು ಪ್ರಮುಖ ನಗರಗಳಲ್ಲಿ ಈಗಾಗಲೇ ಲಾಕ್ ಡೌನ್, ರಾತ್ರಿ ಕರ್ಫ್ಯೂ ಹಾಗೂ ಕೆಲವೊಂದು ನಿರ್ಬಂಧಗಳನ್ನು ಹೇರುವ ಮೂಲಕ ಕೊರೊನಾಗೆ ಕಡಿವಾಣ ಹಾಕುವ ಪ್ರಯತ್ನ ನಡೆಯುತ್ತಿದೆ. ಇಷ್ಟಾದರೂ ಕೂಡ ಸೋಂಕಿತರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

ಸಮೀಕ್ಷೆಯಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ: ಭಾರತದ ಮಧ್ಯಮ ವರ್ಗ ಜನತೆ ಆದಾಯದಲ್ಲಿ ಭಾರೀ ಕುಸಿತ

ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲದೆ ಕೊರೊನಾ ನಿಯಂತ್ರಣಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಇದರ ಮಧ್ಯೆ ದೇಶದಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗಲಿದೆಯಾ ಎಂಬ ಆತಂಕ ಸಾರ್ವಜನಿಕರನ್ನು ಕಾಡತೊಡಗಿದೆ.

ಒಂದೊಮ್ಮೆ ಈ ಬಾರಿ ಲಾಕ್ ಡೌನ್ ಮಾಡಿದರೆ ಜನತೆಯ ಬದುಕು ಮೂರಾಬಟ್ಟೆಯಾಗುವುದು ಖಚಿತ. ಬೆಲೆಯೇರಿಕೆಯಿಂದ ಈಗಾಗಲೇ ಕಂಗೆಟ್ಟಿರುವ ಸಾರ್ವಜನಿಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ಕಾರಣಕ್ಕೂ ಲಾಕ್ ಡೌನ್ ನಂತಹ ಕ್ರಮಗಳಿಗೆ ಮುಂದಾಗಬಾರದು ಎಂದು ಆಗ್ರಹಿಸುತ್ತಿದ್ದಾರೆ. ಈ ಮೊದಲು ಜೀವ ಇದ್ದರೆ ಜೀವನ ಎಂಬ ಕಾರಣಕ್ಕೆ ಲಾಕ್ ಡೌನ್ ಗೆ ಬೆಂಬಲಿಸಿದ್ದ ಬಹುತೇಕರು ಜೀವನ ನಡೆದರೆ ಸಾಕು ಎಂಬಂತಾಗಿದ್ದಾರೆ. ಲಾಕ್ಡೌನ್ ಆದರೆ ಸರ್ಕಾರಗಳು ಕೂಡ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿದ್ದು, ಹೀಗಾಗಿ ಅಂತಹ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇಲ್ಲ ಎಂಬ ವಿಶ್ವಾಸ ಸಾರ್ವಜನಿಕರದ್ದಾಗಿದೆ. ಆದರೆ ಒಂದೊಮ್ಮೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡು ಬಂದರೆ ಹಲವು ನಿರ್ಬಂಧಗಳನ್ನು ಹೇರುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...