alex Certify ಮಕ್ಕಳಿಗೆ ʼಕೊರೊನಾʼ ಹರಡುವ ಸಾಧ್ಯತೆ ಕುರಿತು ಕೇಂದ್ರ ಸಚಿವರಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ʼಕೊರೊನಾʼ ಹರಡುವ ಸಾಧ್ಯತೆ ಕುರಿತು ಕೇಂದ್ರ ಸಚಿವರಿಂದ ಮಹತ್ವದ ಮಾಹಿತಿ

14 ವರ್ಷದ ಒಳಗಿನ ಮಕ್ಕಳಿಗೆ ಕೊರೊನಾ ಹರಡುವ ಸಾಧ್ಯತೆ ಕಡಿಮೆ ಇದೆ ಎಂದು ಅಧ್ಯಯನ ತಿಳಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​​ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಮಕ್ಕಳ ಮೇಲೆ ಕೊರೊನಾ ವೈರಸ್​ ಬೀರುವ ಪರಿಣಾಮಗಳನ್ನ ಕಡಿಮೆ ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಿಯಾ ಯೋಜನೆಯನ್ನ ಸರ್ಕಾರ ಇಲ್ಲಿಯವರೆಗೆ ರೂಪಿಸಿಲ್ಲ ಎಂದು ಲೋಕಸಭೆಗೆ ಮಾಹಿತಿ ನೀಡಿದ್ರು.

ಅತ್ಯಂತ ವಿರಳ ಪ್ರಕರಣಗಳಲ್ಲಿ ಮಾತ್ರ ತೀವ್ರ ಅನಾರೋಗ್ಯವನ್ನ ಗುರುತಿಸಲಾಗಿದೆ. ಇದು ಸಾಮಾನ್ಯವಾಗಿ ಸೋಂಕಿಗೊಳಗಾದ ಮೂರರಿಂದ ಆರು ವಾರಗಳ ಬಳಿಕ ಉಂಟಾಗುತ್ತೆ ಎಂದು ಹೇಳಿದ್ರು.

ಮಕ್ಕಳ ಮೇಲೆ ಕೊರೊನಾ ಬೀರುವ ದೀರ್ಘಕಾಲದ ಪರಿಣಾಮದ ಮೇಲೆ ಏಮ್ಸ್​ನ ಮಕ್ಕಳ ತಜ್ಞರು ಡಾಕ್ಯೂಮೆಂಟ್​ ತಯಾರಿಸುತ್ತಿದ್ದಾರೆ ಎಂದು ಹರ್ಷವರ್ಧನ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...