alex Certify ವಿಶ್ವದ ಅತಿ ‘ಡೇಂಜರ್​ ರೋಡ್’​ ಪಟ್ಟಿಯಲ್ಲಿ ಇಷ್ಟನೇ ಸ್ಥಾನದಲ್ಲಿದೆ ಭಾರತ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತಿ ‘ಡೇಂಜರ್​ ರೋಡ್’​ ಪಟ್ಟಿಯಲ್ಲಿ ಇಷ್ಟನೇ ಸ್ಥಾನದಲ್ಲಿದೆ ಭಾರತ..!

ಅಂತಾರಾಷ್ಟ್ರೀಯ ಡ್ರೈವರ್ ಎಜುಕೇಶನ್​ ಕಂಪನಿ ಝುಟೋಬಿ ವಿಶ್ವದಲ್ಲಿ ಸರ್ವೇ ಒಂದನ್ನ ನಡೆಸಿದ್ದು ಇದರ ಅನ್ವಯ ದಕ್ಷಿಣ ಆಫ್ರಿಕಾ ವಿಶ್ವದಲ್ಲೇ ಅತ್ಯಂತ ಭಯಾನಕ ರಸ್ತೆಯನ್ನ ಹೊಂದಿದೆ ಎಂದು ಹೇಳಿದೆ. ಈ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನವನ್ನ ಪಡೆದಿದೆ.

56 ದೇಶಗಳಲ್ಲಿ ನಡೆಸಲಾದ ಸರ್ವೇಯಲ್ಲಿ ಥೈಲಾಂಡ್​​ 2ನೇ ಸ್ಥಾನವನ್ನ ಪಡೆದಿದ್ರೆ ಅಮೆರಿಕ ಮೂರನೇ ಸ್ಥಾನದಲ್ಲಿದೆ.

ಇನ್ನು ವಿಶ್ವದಲ್ಲಿ ಅತ್ಯಂತ ಸುರಕ್ಷಿತ ರಸ್ತೆಯನ್ನ ಹೊಂದಿರುವವರ ಪಟ್ಟಿಯಲ್ಲಿ ಯುರೋಪ್​ನ ನಾರ್ವೆ ಮೊದಲ ಸ್ಥಾನದಲ್ಲಿದೆ. ಹಾಗೂ ನಾರ್ವೆಯ ನೆರೆಯ ರಾಷ್ಟ್ರ ಸ್ವೀಡನ್​ ಮೂರನೇ ಸ್ಥಾನದಲ್ಲಿದೆ. ಎರಡನೇ ಸ್ಥಾನವನ್ನ ಜಪಾನ್​ ಪಡೆದುಕೊಂಡಿದೆ.

ದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತ, ಸೀಟ್​ ಬೆಲ್ಟ್ ಬಳಕೆ, ಮದ್ಯಪಾನ ಸೇವಿಸಿ ನಡೆದ ಅಪಘಾತ ಸೇರಿದಂತೆ ಅನೇಕ ವಿಚಾರಗಳನ್ನ ಗಮನದಲ್ಲಿ ಇಟ್ಟುಕೊಂಡು ಝುಟೋಬಿ ಈ ಸ್ಥಾನಗಳನ್ನ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...