alex Certify ಅವಧಿಪೂರ್ವ ಹೆರಿಗೆ: ಶೌಚಾಲಯದಲ್ಲಿ ಅವಳಿ ಮಗುವಿಗೆ ಜನ್ಮವಿತ್ತ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಧಿಪೂರ್ವ ಹೆರಿಗೆ: ಶೌಚಾಲಯದಲ್ಲಿ ಅವಳಿ ಮಗುವಿಗೆ ಜನ್ಮವಿತ್ತ ಮಹಿಳೆ

Woman Prematurely Delivers Twins in Delhi Public Toilet, One Passed Away While Other is Critical

ನತದೃಷ್ಟ ಘಟನೆಯೊಂದರಲ್ಲಿ, ದೆಹಲಿಯ ಸಾರ್ವಜನಿಕ ಶೌಚಾಲಯವೊಂದರಲ್ಲಿ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮವಿತ್ತಿದ್ದು, ಒಂದು ಮಗು ಮೃತಪಟ್ಟು ಮತ್ತೊಂದು ಕ್ರಿಟಿಕಲ್ ಪರಿಸ್ಥಿತಿಯಲ್ಲಿದೆ.

ಇಲ್ಲಿನ ವಿಜಯ್‌ನಗರದಲ್ಲಿ ಈ ಘಟನೆ ಜರುಗಿದ್ದು, 32 ವರ್ಷದ ಮಹಿಳೆ ಪಾರ್ವತಿ ಹಾಗೂ ಆಕೆಯ ಪತಿ ಉತ್ತರಪ್ರದೇಶದ ಬುಲಂದ್ ಶಹರ್‌ ನಿಂದ ದೆಹಲಿಗೆ ತುರ್ತು ಕೆಲಸಕ್ಕೆ ಬಂದಿದ್ದರು. ಈ ವೇಳೆ ಬಸ್‌ನಲ್ಲೇ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.

ಚೇಂಬರ್ ನಲ್ಲೇ ವಿದ್ಯಾರ್ಥಿನಿ ಮೇಲೆ ಅಧ್ಯಾಪಕನಿಂದ ಅತ್ಯಾಚಾರ: ಫೇಲ್ ಮಾಡುವುದಾಗಿ ಬೆದರಿಸಿ ಕೃತ್ಯ

ಕೂಡಲೇ ಬಸ್‌ನಿಂದ ಇಳಿದ ದಂಪತಿ ಅಲ್ಲೇ ಪೊಲೀಸ್ ಠಾಣೆಯ ಬಳಿ ಇದ್ದ ಶೌಚಾಲಯವೊಂದಕ್ಕೆ ಧಾವಿಸಿದ್ದಾರೆ. ಮಹಿಳೆಯ ಆಕ್ರಂದನ ಕೇಳಿಸಿಕೊಂಡ ಪೊಲೀಸ್ ಸಿಬ್ಬಂದಿಯೊಬ್ಬರು ಕೂಡಲೇ ಅಲ್ಲಿಗೆ ಮಹಿಳಾ ಪೇದೆಯೊಬ್ಬರನ್ನು ಕಳುಹಿಸಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಶೌಚಾಲಯದಲ್ಲಿದ್ದಾಗಲೇ ಮೊದಲ ಮಗುವಿಗೆ ಜನ್ಮವಿತ್ತ ಮಹಿಳೆ ಆಸ್ಪತ್ರೆಯ ಮಾರ್ಗಮಧ್ಯೆ ಮತ್ತೊಂದು ಮಗುವಿಗೆ ಜನ್ಮವಿತ್ತಿದ್ದಾರೆ. ಇದು ಅವಧಿಪೂರ್ವ ಹೆರಿಗೆಯಾಗಿದೆ.

ತಾಯಿ ಹಾಗೂ ಮಕ್ಕಳ ನಡುವೆ ಕರುಳ ಬಳ್ಳಿ ಇನ್ನೂ ಅಂಟಿಕೊಂಡಿರುವಂತೆಯೇ ಅವರನ್ನು ಆಸ್ಪತ್ರೆಗೆ ಒಯ್ಯಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...