alex Certify BIG NEWS: ತಂದೆಯ 2ನೇ ಮದುವೆ ಸಿಂಧುತ್ವ ಪ್ರಶ್ನಿಸುವ ಪುತ್ರಿ ಅಧಿಕಾರದ ಕುರಿತು ಹೈಕೋರ್ಟ್ ಮಹತ್ವದ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಂದೆಯ 2ನೇ ಮದುವೆ ಸಿಂಧುತ್ವ ಪ್ರಶ್ನಿಸುವ ಪುತ್ರಿ ಅಧಿಕಾರದ ಕುರಿತು ಹೈಕೋರ್ಟ್ ಮಹತ್ವದ ತೀರ್ಪು

ಬಾಂಬೆ ಹೈಕೋರ್ಟ್​ ಬುಧವಾರ ಕೌಟುಂಬಿಕ ನ್ಯಾಯಾಲಯದ ಆದೇಶವನ್ನ ಬದಿಗಿಟ್ಟು, 2003ರಲ್ಲಿ ತಾಯಿಯ ಮರಣದ ಬಳಿಕ ತಂದೆಯ ಎರಡನೇ ಮದುವೆಯ ಸಿಂಧುತ್ವವನ್ನ ಪ್ರಶ್ನಿಸಿದ ಕೈಗಾರಿಕೋದ್ಯಮಿಯೊಬ್ಬರ ಪುತ್ರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ತೀರ್ಮಾನಿಸಿದೆ.

ಎರಡನೆ ಪತ್ನಿ ಈ ಹಿಂದೆ ಬೇರೆ ಮದುವೆಯಾಗಿದ್ದು ವಿಚ್ಛೇದನವನ್ನೂ ಪಡೆದಿಲ್ಲ ಎಂದು ಕೈಗಾರಿಕೋದ್ಯಮಿಯ ಪುತ್ರಿ ಆರೋಪಿಸಿದ್ದರು. ಆದರೆ ಮಹಿಳೆ ಈ ಆರೋಪವನ್ನ ತಳ್ಳಿ ಹಾಕಿದ್ದು ತಾನು 1984ರಲ್ಲೇ ತಲಾಕ್​​ ರೂಪದಲ್ಲಿ ವಿಚ್ಚೇದನ ಪಡೆದಿದ್ದು ಈ ಮದುವೆ ಮಾನ್ಯವಾಗಿದೆ ಎಂದು ಹೇಳಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ್ದ ಆರ್​ ಡಿ ಧನುಕಾ ಹಾಗೂ ವಿಜಿ ಭಿಶ್ತ್ ನೇತೃತ್ವದ ಕುಟುಂಬ ನ್ಯಾಯಾಲಯದ ನ್ಯಾಯಪೀಠ ಪುತ್ರಿಗೆ ತನ್ನ ತಂದೆಯ ಮದುವೆಯ ಸಿಂಧುತ್ವವನ್ನ ಪ್ರಶ್ನಿಸುವ ಅಧಿಕಾರವಿಲ್ಲ ಎಂದು ಹೇಳಿತ್ತು.

ಆದರೆ ಕುಟುಂಬ ನ್ಯಾಯಾಲಯದ ಈ ತೀರ್ಪನ್ನ ಪ್ರಶ್ನಿಸಿ 66 ವರ್ಷದ ಪುತ್ರಿ 2019ರಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಎರಡನೆ ಪತ್ನಿ ಪರ ವಕೀಲರು ತಂದೆಯ ವಿವಾಹದ ಸಿಂಧುತ್ವವನ್ನ ಪ್ರಶ್ನಿಸುವ ಅಧಿಕಾರ ಪುತ್ರಿಗೆ ಇರಲ್ಲ ಎಂದು ಕೋರ್ಟ್​ ಮುಂದೆ ಬಲವಾಗಿ ವಾದಿಸಿದ್ದರು.

ಆದರೆ ಕುಟುಂಬ ನ್ಯಾಯಾಲಯದ ತೀರ್ಪನ್ನ ಮರುಪರಿಶೀಲಿಸಿದ ಮುಂಬೈ ಹೈಕೋರ್ಟ್​ ‘ಪುತ್ರಿ ತನ್ನ ತಂದೆಯ ಎರಡನೇ ವಿವಾಹದ ಸಿಂಧುತ್ವದ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರ ಹೊಂದಿದ್ದಾಳೆ’ ಎಂದು ಹೇಳಿದೆ. ಅಲ್ಲದೇ ಈಕೆಯ ಅರ್ಜಿಯನ್ನ 6 ತಿಂಗಳೊಳಗಾಗಿ ವಿಚಾರಣೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...