alex Certify ಸ್ಟೀಫನ್ ಹಾಕಿಂಗ್ ಜೊತೆಗಿನ ಥ್ರೋಬ್ಯಾಕ್ ಚಿತ್ರ ಶೇರ್‌ ಮಾಡಿಕೊಂಡ ಆನಂದ್ ಮಹಿಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟೀಫನ್ ಹಾಕಿಂಗ್ ಜೊತೆಗಿನ ಥ್ರೋಬ್ಯಾಕ್ ಚಿತ್ರ ಶೇರ್‌ ಮಾಡಿಕೊಂಡ ಆನಂದ್ ಮಹಿಂದ್ರಾ

Anand Mahindra Shares Throwback Pic With Stephen Hawking in Viral 'Blast from the Past'

ಉದ್ಯಮಿ ಆನಂದ್ ಮಹಿಂದ್ರಾ ಯಾವಾಗಲೂ ದೇಶದ ಯುವಜನರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಟಚ್‌ನಲ್ಲಿ ಇರುತ್ತಾರೆ.

ವಿಶ್ವಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಜೊತೆಗಿರುವ ತಮ್ಮ ಚಿತ್ರವೊಂದನ್ನು ಹಂಚಿಕೊಂಡಿರುವ ಆನಂದ್, “ಸವಿನೆನಪು…! ತನ್ನ ಆರ್ಕೈವ್ಸ್‌ನಿಂದ ಈ ಚಿತ್ರವನ್ನು ಶೇರ್‌ ಮಾಡಿಕೊಂಡ ನನ್ನ ಸ್ನೇಹಿತೆಯೊಬ್ಬರಿಗೆ ಧನ್ಯವಾದ; 2001ರಲ್ಲಿ ಸ್ಟೀಫನ್ ಹಾಕಿಂಗ್‌ ಮುಂಬಯಿಗೆ ಭೇಟಿ ಕೊಟ್ಟ ಕ್ಷಣ. ವಿಶೇಷವಾಗಿ ತಯಾರಿಸಲಾದ ಮಿನಿ ವ್ಯಾನ್ ಒಂದನ್ನು ಅವರಿಗಾಗಿ ಸಿದ್ಧಪಡಿಸಿದ ನನ್ನ ಆಟೋ ತಂಡದ ಬಗ್ಗೆ ಹೆಮ್ಮೆ ಇದೆ, ಇದರಿಂದಾಗಿ ಅವರು ನಗರದಲ್ಲಿ ಆರಾಮವಾಗಿ ಓಡಾಡುವ ವ್ಯವಸ್ಥೆ ಆಗಿತ್ತು” ಎಂದು ತಿಳಿಸಿದ್ದಾರೆ.

ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಿಗೆ ಉಚಿತ ಸೇವೆ ನೀಡಲಿದೆ ಉಬರ್

2001ರೆಲ್ಲಿ ಭಾರತಕ್ಕೆ ಆಗಮಿಸಿದ್ದ ವೇಳೆ ಹಾಕಿಂಗ್‌ಗೆ ತಮ್ಮನ್ನು ಗಾಲಿಕುರ್ಚಿ ಮೇಲೆ ಕೂರಿಸಿಕೊಂಡು ಓಡಾಡುವಂತೆ ಅನುಕೂಲ ಮಾಡಿಕೊಡಲು ವಿಶೇಷ ವಾಹನವೊಂದು ಬೇಕಿತ್ತು.

ಮುಂಬೈಯಲ್ಲಿರುವ ಟಾಟಾ ಸಂಶೋಧನಾ ಸಂಸ್ಥೆಯ ಪ್ರತಿಷ್ಠಿತ ಸರೋಜಿನಿ ದಾಮೋದರನ್ ಫೆಲೋಶಿಪ್ ಗೌರವ ಸ್ವೀಕರಿಸಲು ಹಾಕಿಂಗ್ ಭಾರತಕ್ಕೆ ಬಂದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...