alex Certify ಹೆಲ್ಮೆಟ್‌ ಧರಿಸಿಲ್ಲ ಅಂತ ‘ಟ್ರಕ್’ ಚಾಲಕನಿಗೆ 1000 ರೂ. ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಲ್ಮೆಟ್‌ ಧರಿಸಿಲ್ಲ ಅಂತ ‘ಟ್ರಕ್’ ಚಾಲಕನಿಗೆ 1000 ರೂ. ದಂಡ

ಹೆಲ್ಮೆಟ್ ಧರಿಸದೇ ಟ್ರಕ್ ಚಾಲನೆ ಮಾಡಿದ ಕಾರಣಕ್ಕೆ ಚಾಲಕನಿಗೆ 1000 ರೂ. ದಂಡ ವಿಧಿಸಿದ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಘಟಿಸಿದೆ. ಟ್ರಕ್‌ ಚಲಿಸುವಾಗ ಹೆಲ್ಮೆಟ್ ಧರಿಸುವ ಅಗತ್ಯ ಇಲ್ಲದೇ ಇದ್ದರೂ ಸಹ ಈ ಚಾಲಕನಿಗೆ ಅಧಿಕಾರಿಗಳು ಚಲನ್ ವಿತರಿಸಿದ್ದಾರೆ.

ಪ್ರಮೋದ್ ಕುಮಾರ್‌ ಸ್ವಾಯ್ನ್ ಎಂಬ ಚಾಲಕನಿಗೆ ಈ ಚಲನ್‌ ಅನ್ನು ಡಿಸೆಂಬರ್‌ 24, 2020ರಲ್ಲಿ ವಿತರಿಸಲಾಗಿತ್ತು. ಆದರೆ ಈ ಕುರಿತು ಅವರಿಗೇ ಅರಿವಿರಲಿಲ್ಲ. ತಮ್ಮ ವಾಹನದ ಪರ್ಮಿಟ್‌ ಮರುನವೀಕರಣ ಮಾಡಿಸಿಕೊಳ್ಳಲು ಆರ್‌ಟಿಓ ಕಚೇರಿಗೆ ಹೋದಾಗ ಅವರಿಗೆ ಈ ವಿಷಯ ತಿಳಿದಿದೆ.

ಎದೆ ನಡುಗಿಸುವಂತಿದೆ ಹೆಲಿಕಾಪ್ಟರ್‌ ರೋಟರ್‌ ನಲ್ಲಿ ನೇತಾಡುತ್ತಿದ್ದವನ ವಿಡಿಯೋ

“ನನ್ನ ಟ್ರಕ್‌ ಪರ್ಮಿಟ್‌‌ ಶುಲ್ಕ ಪಾವತಿ ಮಾಡಲು ಆರ್‌ಟಿಓ ಕಚೇರಿಗೆ ಹೋಗಿದ್ದೆ. ಆಗ ನನ್ನ ಹೆಸರಿನಲ್ಲಿ ಮೂರು ಬಾರಿ ದಂಡ ಪಾವತಿ ಮಾಡಬೇಕಿದೆ ಎಂದು ತಿಳಿಸಿದರು. ದುಡ್ಡು ಪಾವತಿ ಮಾಡಿ ಚಲನ್ ಸ್ವೀಕರಿಸಿದೆ. ಚಲನ್ ನೋಡಿದ ಬಳಿಕ, ಹೆಲ್ಮೆಟ್ ಧರಿಸದೇ ಇದ್ದ ಕಾರಣ ನನಗೆ ದಂಡ ಹಾಕಲಾಗಿದೆ ಎಂದು ತಿಳಿಯಿತು” ಎಂದು ಪ್ರಮೋದ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...