alex Certify 14 ವರ್ಷದ ಹಿಂದೆ ಕಳೆದುಕೊಂಡಿದ್ದ ಉಡುಪನ್ನ ಈಗ ಹುಡುಕ್ತಿದ್ದಾಳೆ ಈ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

14 ವರ್ಷದ ಹಿಂದೆ ಕಳೆದುಕೊಂಡಿದ್ದ ಉಡುಪನ್ನ ಈಗ ಹುಡುಕ್ತಿದ್ದಾಳೆ ಈ ಮಹಿಳೆ..!

ವಿಚಿತ್ರ ಘಟನೆಯೊಂದರಲ್ಲಿ ಮದುವೆಯಾಗಿ 14 ವರ್ಷಗಳ ಬಳಿಕ ಮಿನ್ನೆಸೋಟಾದಲ್ಲಿರುವ ಮಹಿಳೆಗೆ ತಾನು ಇಷ್ಟು ವರ್ಷಗಳ ಕಾಲ ಜೋಪಾನವಾಗಿ ಕಾಯ್ದುಕೊಂಡ ಬಂದ ಮದುವೆ ಉಡುಪು ತನ್ನದಲ್ಲ ಎಂಬ ವಿಚಾರ ಗೊತ್ತಾಗಿದೆ.

ವೆಂಡೀ ಟೇಲರ್​ ಹಾಗೂ ಆಕೆಯ 12 ವರ್ಷದ ಮಗಳು ಪ್ರಸಿದ್ಧ ನಾಟಕ ಸರಣಿಯೊಂದರಲ್ಲಿ ಮದುವೆಯ ಸಂಚಿಕೆಯನ್ನ ನೋಡುತ್ತಿದ್ದ ವೇಳೆ ಟೇಲರ್​ಗೆ ತನ್ನ ಮದುವೆ ಕೆಲ ವಿಶೇಷ ಅನುಭವವನ್ನ ಮೆಲಕು ಹಾಕುವ ಮನಸ್ಸಾಗಿದೆ. ಕೂಡಲೇ ತಾಯಿ – ಮಗಳು ಮದುವೆ ದಿನ ಟೇಲರ್​ ಧರಿಸಿದ್ದ ಉಡುಪನ್ನ ನೋಡೋಕೆ ನಿರ್ಧರಿಸಿದ್ದಾರೆ.

ಒಂದೇ ಒಂದು ಟ್ವೀಟ್​ ಮೂಲಕ ಹಲವರ ಮನಗೆದ್ದ ಪಾಪ್​ ಗಾಯಕಿ..!

ಈವರೆಗೆ ಟೇಲರ್​ ಮದುವೆ ದಿನ ಧರಿಸಿದ್ದ ಉಡುಗೆಯನ್ನ ಫೋಟೋಗಳಲ್ಲಿ ಮಾತ್ರ ಕಂಡಿದ್ದ ಆಕೆಯ ಪುತ್ರಿ ಈ ಬಾರಿ ನಿಜವಾಗಿಯೂ ಆ ಡ್ರೆಸ್​ನ್ನು ನೋಡಲು ನಿರ್ಧರಿಸಿದ್ದಳು. ಹೀಗಾಗಿ ತಾಯಿ – ಮಗಳಿಬ್ಬರೂ ಸೇರಿ ಗೌನ್​ನ್ನು ಸುರಕ್ಷಿತವಾಗಿ ಇಡಲಾಗಿದ್ದ ಬಾಕ್ಸ್​ನ್ನು ತೆರೆದಿದ್ದಾರೆ. ಆದರೆ ಆ ಬಾಕ್ಸ್​ನಲ್ಲಿದ್ದ ಡ್ರೆಸ್​ ಆಕೆ ಮದುವೆ ದಿನ ಧರಿಸಿದ್ದ ಗೌನ್​ ಆಗಿರಲಿಲ್ಲ.

ತನ್ನ 14 ವರ್ಷದ ಹಿಂದಿನ ಗೌನ್​ ಹುಡುಕೋಕೆ ಇದೀಗ ಟೇಲರ್​ ಫೇಸ್​ಬುಕ್​ ಮೊರೆ ಹೋಗಿದ್ದಾಳೆ. ಯಾರ ಬಳಿಯಾದರೂ ನನ್ನ ಗೌನ್​ ಇದ್ದಲ್ಲಿ ದಯಮಾಡಿ ಹಿಂದಿರುಗಿಸಿ ಎಂದು ಮನವಿ ಮಾಡಿದ್ದಾಳೆ. ಪೋಸ್ಟ್​ನಲ್ಲಿ ತನ್ನ ಮದುವೆಯ ಫೋಟೋ ಹಾಗೂ ಈಗ ತನ್ನ ಬಳಿ ಮಿಸ್​ ಆಗಿ ಬಂದಿರುವ ಗೌನ್​ ಫೋಟೋವನ್ನೂ ಶೇರ್​ ಮಾಡಿದ್ದಾಳೆ.

HELP!!!! Please read, share, and help me recover my wedding dress and return the one I have to is owner!!! My dress was…

Posted by Wendie Marie on Wednesday, January 27, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...