alex Certify ಒಂದೇ ಒಂದು ಟ್ವೀಟ್​ ಮೂಲಕ ಹಲವರ ಮನಗೆದ್ದ ಪಾಪ್​ ಗಾಯಕಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಒಂದು ಟ್ವೀಟ್​ ಮೂಲಕ ಹಲವರ ಮನಗೆದ್ದ ಪಾಪ್​ ಗಾಯಕಿ..!

ತಮ್ಮ ಹಾಡುಗಳ ಮೂಲಕವೇ ಸುದ್ದಿಯಾಗಿದ್ದ ಅಂತಾರಾಷ್ಟ್ರೀಯ ಪಾಪ್​ ಗಾಯಕಿ ರಿಹಾನ್ನಾ ಈ ಬಾರಿ ಟ್ವಿಟರ್​ನಲ್ಲಿ ಕೃಷಿ ಮಸೂದೆಯ ಕಾರಣದಿಂದ ಫುಲ್​ ಫೇಮಸ್​ ಆಗಿದ್ದಾರೆ. ಅರೆ..! ವಿದೇಶಿ ಗಾಯಕಿಗೂ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೂ ಏನು ಸಂಬಂಧ ಎಂದು ನೀವು ತಲೆಗೆಡಿಸಿಕೊಳ್ಳುತ್ತಿರಬಹುದು. ಇದಕ್ಕೆ ಕಾರಣ ರೈತ ಪ್ರತಿಭಟನೆ ಬಗ್ಗೆ ಖ್ಯಾತ ಪಾಪ್​ ಗಾಯಕಿ ಮಾಡಿದ ಆ ಒಂದು ಟ್ವೀಟ್​..!

ಹರಿಯಾಣದಲ್ಲಿ ಇಂಟರ್ನೆಟ್​ ಸೌಕರ್ಯವನ್ನ ಸ್ಥಗಿತಗೊಳಿಸಿರುವ ಬಗ್ಗೆ ಸಿಎನ್​ಎನ್​ ತಯಾರಿಸಿದ ವರದಿಯನ್ನ ಶೇರ್​ ಮಾಡಿರುವ ಗಾಯಕಿ, ನಾವ್ಯಾಕೆ ಇದರ ಬಗ್ಗೆ ಮಾತನಾಡುತ್ತಿಲ್ಲ..? ಎಂದು ಪ್ರಶ್ನೆ ಮಾಡಿದ್ದಾಳೆ. ಫಾರ್ಮರ್​ ಪ್ರೊಟೆಸ್ಟ್ ಎಂಬ ಹ್ಯಾಶ್​ಟ್ಯಾಗ್​ನಡಿಯಲ್ಲಿ ಆಕೆ ಈ ಟ್ವೀಟ್​ ಮಾಡಿದ್ದಾಳೆ.

ಈ ಟ್ವೀಟ್​ ಭಾರತದಲ್ಲೇ ಕೆಲವೇ ಗಂಟೆಗಳಲ್ಲಿ ವೈರಲ್​ ಆಗಿಬಿಟ್ಟಿದೆ. ರಿಹಾನ್ನಾ ಭಾರತದ ಪ್ರತಿಭಟನೆ ಬಗ್ಗೆ ಮಾತನಾಡುತ್ತಿದ್ದಂತೆಯೇ ಅನೇಕರು ಈ ಟ್ವೀಟ್​ನ್ನು ಶೇರ್​ ಮಾಡಿದ್ದಾರೆ. ಇದಾದ ಬಳಿಕ ಸಾಕಷ್ಟು ಜೋಕ್​, ಮೀಮ್ಸ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

— Rihanna (@rihanna) February 2, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...