alex Certify ಸ್ವಚ್ಛತಾ ಸಿಬ್ಬಂದಿಯ ಕೆಲಸ ಮಾಡಿ ನೆಟ್ಟಿಗರ ಪ್ರಶಂಸೆಗೆ ಪಾತ್ರರಾದ ಶಾಲಾ ವಿದ್ಯಾರ್ಥಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಚ್ಛತಾ ಸಿಬ್ಬಂದಿಯ ಕೆಲಸ ಮಾಡಿ ನೆಟ್ಟಿಗರ ಪ್ರಶಂಸೆಗೆ ಪಾತ್ರರಾದ ಶಾಲಾ ವಿದ್ಯಾರ್ಥಿಗಳು

ಅಮೆರಿಕದ ಮಿನೆಸೋಟಾದ ಶಾಲೆಯೊಂದರ ಮಕ್ಕಳು ಅಲ್ಲಿನ ಸಹಾಯಕ ಸಿಬ್ಬಂದಿಯ ಪರವಾಗಿ ಕೆಲಸ ಮಾಡುವ ಮೂಲಕ ನೆಟ್ಟಿಗರಿಂದ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕೋವಿಡ್-19 ಕಾಲಘಟ್ಟದಲ್ಲಿ ಸ್ವಚ್ಛತಾ ಸಿಬ್ಬಂದಿಯ ಕೊರತೆ ಇರುವ ನಡುವೆ, ಖುದ್ದು ಮಕ್ಕಳಿಂದಲೇ ಈ ಕೆಲಸ ಮಾಡಲು ಪ್ರೇರೇಪಣೆ ಕೊಡುತ್ತಿದೆ ಹೆನ್ನೆಪಿನ್ ಸ್ಕೂಲ್ ಡಿಸ್ಟ್ರಿಕ್ಟ್‌. ಸ್ವಚ್ಛತಾ ಸಿಬ್ಬಂದಿಯ ಕೊರತೆಯ ಸುದ್ದಿ, ಕಟ್ಟಡಗಳು ಮತ್ತು ಮೈದಾನಗಳ ಜಿಲ್ಲಾ ಸಹಾಯಕ ನಿರ್ದೇಶಕ ಟಾಮ್ ಕಾರ್ಪ್ ಗಮನಕ್ಕೆ ಬಂದಿದೆ.

ಕೋವಿಡ್ ಸೋಂಕಿಗೊಳಗಾದ ಸಿಬ್ಬಂದಿಗೆ 7 ದಿನ ಸಂಬಳ ಸಹಿತ ಕಡ್ಡಾಯ ರಜೆ: ಉತ್ತರ ಪ್ರದೇಶ ಸರ್ಕಾರದ ಮಹತ್ವದ ಆದೇಶ

ಆ ಬಳಿಕ ಸ್ವಚ್ಛತಾ ಸಿಬ್ಬಂದಿಯ ಜಾಗದಲ್ಲಿ ವಿದ್ಯಾರ್ಥಿಗಳಿಗೆ ಒಂದಷ್ಟು ದಿನಗಳ ಮಟ್ಟಿಗೆ ಸ್ವಚ್ಛತಾ ಅರಿವು ಮೂಡಿಸಿ, ಅವರಿಂದಲೇ ಈ ಕೆಲಸಗಳನ್ನು ಮಾಡಿಸುವ ಆಸಕ್ತಿಕರ ಐಡಿಯಾ ಕಂಡುಕೊಂಡಿದ್ದಾರೆ ಟಾಮ್.

ಈ ಸಂಬಂಧ, ಮೇಲ್ಕಂಡ ಶಾಲಾ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಬ್ಲೇನ್ ಪ್ರೌಢಶಾಲೆಯ ಪ್ರಾಂಶುಪಾಲರಿಗೆ ಕರೆ ಮಾಡಿದ ಟಾಮ್, ಅದಕ್ಕೆ ಅವರಿಂದ ಸಮ್ಮತಿಯನ್ನೂ ಪಡೆದಿದ್ದಾರೆ.

ವಿದ್ಯಾರ್ಥಿಗಳು ಈ ಕೆಲಸಗಳನ್ನು ಮಾಡಲು ಪ್ರತಿ ಗಂಟೆಗೆ $15.3ಯಂತೆ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ. ತಮ್ಮ ಮನೆಗಳನ್ನು ತಲುಪಲು ಶಾಲಾ ಚಟುವಟಿಕೆಯ ಬಸ್‌ನ ಸೌಲಭ್ಯವನ್ನೂ ಸಹ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಈ ಅಭಿಯಾನ ಚಾಲ್ತಿಯಲ್ಲಿದ್ದು, ವಿದ್ಯಾರ್ಥಿಗಳು ತಮ್ಮ ಈ ಕೈಂಕರ್ಯಕ್ಕೆ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...