alex Certify ಮದುವೆ ಸಮಾರಂಭದಲ್ಲಿ ಐಸ್ ಕ್ರೀಂ ಸೇವಿಸಿದ ಮಕ್ಕಳು ಸೇರಿ 80 ಜನ ಅಸ್ವಸ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಸಮಾರಂಭದಲ್ಲಿ ಐಸ್ ಕ್ರೀಂ ಸೇವಿಸಿದ ಮಕ್ಕಳು ಸೇರಿ 80 ಜನ ಅಸ್ವಸ್ಥ

ರಾಮನಗರ: ಮದುವೆ ಸಮಾರಂಭದಲ್ಲಿ ಐಸ್ ಕ್ರೀಮ್ ಸೇವಿಸಿ 80 ಜನರು ಅಸ್ವಸ್ಥರಾದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ನಡೆದಿದೆ.

ಅಸ್ವಸ್ಥರಾದ 50 ಜನರನ್ನು ಮಾಗಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. 30 ಜನರಿಗೆ ಚನ್ನಪಟ್ಟಣ, ರಾಮನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಐಸ್ ಕ್ರೀಂ ಸೇವಿಸಿ ಅಸ್ವಸ್ಥಗೊಂಡವರ ಪೈಕಿ ಬಹುತೇಕರು ಮಕ್ಕಳಾಗಿದ್ದಾರೆ.

ಮದುವೆ ಸಮಾರಂಭದಲ್ಲಿ ಊಟವಾದ ಬಳಿಕ ಮಕ್ಕಳು ಐಸ್ ಕ್ರೀಮ್ ಸೇವಿಸಿದ್ದರು. ಮದುವೆ ಮುಗಿಸಿ ಹೊರಡುವಾಗ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಮದುವೆ ಸಮಾರಂಭದಲ್ಲಿ ಅವಧಿ ಮೀರಿದ ಐಸ್ ಕ್ರೀಂ ನೀಡಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...