alex Certify ಕಿಕ್ ಏರಿ ವಾಲಾಡಿದ ಅಳಿಲು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಕ್ ಏರಿ ವಾಲಾಡಿದ ಅಳಿಲು…..!

ಚೆನ್ನಾಗಿ ಕೊಳೆತ‌ ಹಣ್ಣು ತಿಂದ ಅಳಿಲೊಂದಕ್ಕೆ ಭಾರೀ ಕಿಕ್ ಏರಿ ಚೇಷ್ಟೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ನವೆಂಬರ್‌ 20ರಂದು ಈ ಫುಟೇಜ್ ‌ಅನ್ನು ಚಿತ್ರೀಕರಿಸಿದ ಕೇಟಿ ಮಾರ್ಲಕ್‌, ಮಿನೆಸ್ಸೋಟಾದ ಗ್ರೋವ್‌ ಹೈಟ್ಸ್‌ನ ಪಿಕ್‌ನಿಕ್ ಟೇಬಲ್ ಒಂದರ ಮೇಲೆ ಅಳಿಲು ಭಾರೀ ಚೇಷ್ಟೆ ಮಾಡುತ್ತಿರುವುದನ್ನು ತೋರಿದ್ದಾರೆ.

ಮಾರ್ಲಾಕ್‌ ತನ್ನ ಫ್ರಿಜ್‌ನಿಂದ ತೆಗೆದು ಹೊರಗೆ ಇಟ್ಟಿದ್ದ‌ ಹಣ್ಣನ್ನು ತಿಂದ ಒಂದು ಗಂಟೆಯ ಬಳಿಕ ಅಳಿಲಿಗೆ ಅರಿವು ತಪ್ಪಿದಂತಾಗಿ ತನ್ನ ಕಾಲುಗಳ ಮೇಲೆ ನಿಲ್ಲಲಾಗದೇ ವಾಲಾಡುತ್ತಿರುವುದನ್ನು ನೋಡಬಹುದಾಗಿದೆ.

ಕೆಲವೊಂದು ಆಹಾರ ಪದಾರ್ಥಗಳು ಕೊಳೆತಾಗ ಅವುಗಳಲ್ಲಿರುವ ಗ್ಲೂಕೋಸ್, ಸುಕ್ರೋಸ್‌ ಹಾಗೂ ಫ್ರುಕ್ಟೋಸ್‌ಗಳು ಆಲ್ಕೋಹಾಲ್‌ ಆಗಿ ಪರಿವರ್ತನೆಯಾಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...