alex Certify ಭಾರತದ ನಕಾಶೆಯನ್ನು ತಪ್ಪಾಗಿ ತೋರಿಸಿ ಸಂಕಷ್ಟಕ್ಕೆ ಸಿಲುಕಿದ ‘ಟ್ವಿಟರ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ನಕಾಶೆಯನ್ನು ತಪ್ಪಾಗಿ ತೋರಿಸಿ ಸಂಕಷ್ಟಕ್ಕೆ ಸಿಲುಕಿದ ‘ಟ್ವಿಟರ್’

ದೇಶದ ನಕ್ಷೆಯನ್ನು ತಪ್ಪಾಗಿ ತೋರಿಸಿದ ಮೈಕ್ರೋಬ್ಲಾಗಿಂಗ್ ದಿಗ್ಗಜ ಟ್ವಿಟರ್‌, ಜಮ್ಮು & ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳನ್ನು ಭಾರತದ ಹೊರಗೆ ತೋರಿ ಭಾರೀ ಟೀಕೆಗೆ ಗ್ರಾಸವಾಗಿದೆ.

ಹೊಸ ಐಟಿ ನಿಯಮಾವಳಿಗಳ ಅನುಸಾರ, ಸಾಮಾಜಿಕ ಜಾಲತಾಣಗಳಿಗೆ ಅನ್ವಯವಾಗುವ ಕಾನೂನುಗಳಿಗೆ ಬದ್ಧರಾಗಬೇಕಾದ ವಿಚಾರದಲ್ಲಿ ಕೇಂದ್ರ ಸರ್ಕಾರದೊಂದಿಗೆ ಭಾರೀ ತಿಕ್ಕಾಟದಲ್ಲಿರುವ ಟ್ವಿಟರ್‌, ಈ ಸಮಯದಲ್ಲೇ ಹೀಗೆ ಮಾಡಿದೆ.

ವಧುವಿಗೆ ವರಮಾಲೆ ಹಾಕಲು ನೆರವಾದ ವ್ಯಕ್ತಿಗೆ ಗೂಸಾ..!

ಟ್ವಿಟರ್‌ ಜಾಲತಾಣದ ’ಟ್ವೀಪ್ ಲೈಫ್’ ಹೆಸರಿನ ಹೆಡ್ಲೈನ್‌ ಅಡಿ ಇರುವ ಕಂಟೆಂಟ್‌ನಲ್ಲಿ ಈ ಪ್ರಮಾದ ಕಂಡುಬಂದಿದೆ. ಭಾರತದ ನಕಾಶೆಯನ್ನು ತಪ್ಪಾಗಿ ತೋರುವುದು ಟ್ವಿಟರ್‌ಗೆ ಚಾಳಿಯಾಗಿದೆ. ಕಳೆದ ವರ್ಷ ಲೆಹ್‌ಅನ್ನು ಚೀನಾದ ಭಾಗವಾಗಿ ಭಾರತೀಯ ನೆಟ್ಟಿಗರಿಗೆ ಪ್ರಸ್ತುತಪಡಿಸಿತ್ತು ಟ್ವಿಟರ್‌.

ತನ್ನ ಕ್ರಿಯೆಗಳ ಮೂಲಕ ಟ್ವಿಟರ್‌ ದೇಶದ ಕಾನೂನು ವ್ಯವಸ್ಥೆಯನ್ನೇ ಕಡೆಗಣಿಸುವ ಉದ್ದೇಶಪೂರಿತ ನಡೆಗೆ ಮುಂದಾಗಿದೆ ಎಂದು ತನ್ನ ಹೇಳಿಕೆಯೊಂದರಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ಬಾಲಕನ ಈ ಕಾರ್ಯಕ್ಕೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ತನ್ನ ಈ ನಡೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ತಪ್ಪನ್ನು ತಿದ್ದಿಕೊಂಡಿದೆ ಟ್ವಿಟರ್‌.

ಮೇ 25ರಿಂದ ಅನುಷ್ಠಾನಕ್ಕೆ ಬಂದಿರುವ ಹೊಸ ಐಟಿ ನಿಯಮಾವಳಿಗಳ ಅನುಸಾರ ಸಾಮಾಜಿಕ ಜಾಲತಾಣ ಕಂಪನಿಗಳು ತಮ್ಮ ಪೋರ್ಟಲ್‌ಗಳಲ್ಲಿ ಕಂಡುಬರುವ ಯಾವುದೇ ರೀತಿಯ ಆಕ್ಷೇಪಾರ್ಹ ಕಂಟೆಂಟ್‌ಗಳ ಬಗ್ಗೆ ದೂರು ಬಂದಲ್ಲಿ ಅವುಗಳನ್ನು ಸರಿಪಡಿಸಲು ಸೂಕ್ತ ವ್ಯವಸ್ಥೆಯೊಂದನ್ನು ಮಾಡಬೇಕಾಗಿದೆ. 50 ಲಕ್ಷಕ್ಕೂ ಹೆಚ್ಚು ಬಳಕೆದಾರರಿರುವ ಎಲ್ಲ ಸಾಮಾಜಿಕ ಜಾಲತಾಣ ಕಂಪನಿಗಳು ಈ ಕೆಲಸಕ್ಕೆಂದೇ ಅಧಿಕಾರಿಗಳನ್ನು ನೇಮಿಸಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...