alex Certify ವಧುವಿಗೆ ವರಮಾಲೆ ಹಾಕಲು ನೆರವಾದ ವ್ಯಕ್ತಿಗೆ ಗೂಸಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಧುವಿಗೆ ವರಮಾಲೆ ಹಾಕಲು ನೆರವಾದ ವ್ಯಕ್ತಿಗೆ ಗೂಸಾ..!

ಮದುವೆ ಅಂದಮೇಲೆ ನಾನಾ ಶಾಸ್ತ್ರಗಳು ಇರುತ್ತವೆ. ಈ ಶಾಸ್ತ್ರಗಳ ನಡುವೆ ಬೋರ್​ ಆಗಬಾರದು ಅಂತಾ ಕೆಲವೊಂದು ತಮಾಷೆಗಳನ್ನೂ ಮಾಡಲಾಗುತ್ತೆ. ಇದೇ ರೀತಿ ಕಲ್ಯಾಣ ಮಂಟಪದಲ್ಲಿ ತಮಾಷೆ ಮಾಡಲು ಹೋದ ವ್ಯಕ್ತಿಯೊಬ್ಬ ವಧುವಿನ ಕೈಯಲ್ಲಿ ಹೊಡೆತ ತಿಂದಿದ್ದಾನೆ.

ಅಂದಹಾಗೆ ಇದು ಮೂರು ವರ್ಷಗಳ ಹಿಂದಿನ ವಿಡಿಯೋ ಆಗಿದ್ದು ಈಗ ಮತ್ತೊಮ್ಮೆ ಟ್ವಿಟರ್​ನಲ್ಲಿ ವೈರಲ್​ ಆಗ್ತಿದೆ. ಈ ಘಟನೆಯು ಉತ್ತರ ಪ್ರದೇಶದ ಜೌನ್​ಪುರ ಜಿಲ್ಲೆಯ ಖುತಾಹನ್​ ಬ್ಲಾಕ್​​ನ ಲವಯೇನ್​ ಗ್ರಾಮದಲ್ಲಿ ನಡೆದಿದೆ.

ಮದುವೆಯಲ್ಲಿ ವರಮಾಲೆ ಹಾಕುವ ವೇಳೆಯಲ್ಲಿ ವಧು ಹಾಗೂ ವರರನ್ನ ಕುಟುಂಬಸ್ಥರು ಎತ್ತಿಕೊಳ್ತಾರೆ. ವಧು – ವರರಿಗೆ ಮಾಲೆ ಹಾಕುವಾಗ ಕೊಂಚ ಕಷ್ಟವಾಗಲಿ ಎಂದು ತಮಾಷೆಗೆ ಈ ರೀತಿ ಮಾಡ್ತಾರೆ.

ಇದೇ ವರನನ್ನ ಒಬ್ಬ ವ್ಯಕ್ತಿ ಬಂದು ಎತ್ತಿಕೊಳ್ತಾನೆ. ಅದಾದ ಬಳಿಕ ವಧುವನ್ನೂ ಇನ್ನೊಬ್ಬ ವ್ಯಕ್ತಿ ಎತ್ತಿಕೊಳ್ತಾನೆ. ಇಬ್ಬರೂ ಮಾಲೆ ಬದಲಾವಣೆ ಮಾಡಿದ ಬಳಿಕ ವಧು ತನ್ನನ್ನ ಎತ್ತಿಕೊಂಡಿದ್ದ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿದ್ದಾಳೆ.

ಈ ವಿಡಿಯೋ ಟ್ವಿಟರ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು 16,500ಕ್ಕೂ ಅಧಿಕ ವೀವ್ಸ್ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಈ ವಿಡಿಯೋವನ್ನ ಇದೀಗ ಇನ್​ಸ್ಟಾಗ್ರಾಂ ಹಾಗೂ ಫೇಸ್​ಬುಕ್​ನಲ್ಲಿಯೂ ಶೇರ್ ಮಾಡಲಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...