alex Certify ಬಾಲಕನ ಈ ಕಾರ್ಯಕ್ಕೆ ನೀವೂ ಹೇಳ್ತೀರಿ ಹ್ಯಾಟ್ಸಾಫ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕನ ಈ ಕಾರ್ಯಕ್ಕೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಕೊರೊನಾ ವೈರಸ್​ ಲಾಕ್​ಡೌನ್​ ಸಂದರ್ಭದಲ್ಲಿ ನೀಡಿದ ಸಮಾಜ ಸೇವೆಗಳನ್ನ ಪರಿಗಣಿಸಿ ಭಾರತೀಯ ಮೂಲದ ಬ್ರಿಟಿಷ್​ ಬಾಲಕನಿಗೆ ಪ್ರತಿಷ್ಠಿತ ಡಯಾನಾ ಅವಾರ್ಡ್​ ಮುಡಿಗೇರಿದೆ.

ಬ್ರಿಟನ್​​ನ ವೆಲ್ಲಿಂಗ್ಟನ್​ ಕಾಲೇಜಿನ 15 ವರ್ಷದ ಬಾಲಕ ಇಶಾನ್​ ಕಪೂರ್​ ಈ ಅತ್ಯುನ್ನತ ಪ್ರಶಸ್ತಿಯನ್ನ ಪಡೆದುಕೊಂಡಿದ್ದಾನೆ.

ದೆಹಲಿ ಮೂಲದ ಈ ಬಾಲಕ ಶ್ರೀ ರಾಮಕೃಷ್ಣ ಆಶ್ರಮದ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಹಾಗೂ ಬಾಲಕಿಯರಿಗೆ ಸಮವಸ್ತ್ರ ಖರೀದಿ ಮಾಡಲು ಸಹಾಯ ಮಾಡಿದ್ದಾನೆ.

ಕೊರೊನಾ ವೈರಸ್​ನಿಂದಾಗಿ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ತರಗತಿಗಳಲ್ಲಿ ನಡೆಯುತ್ತಿದ್ದ ಶಿಕ್ಷಣವು ಆನ್​ಲೈನ್ ಶಿಕ್ಷಣವಾಗಿ ಮಾರ್ಪಾಡಾಗಿದೆ. ದೇಶದಲ್ಲಿ ಡಿಜಿಟಲ್​ ಶಿಕ್ಷಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದೆ.

ಈ ಎಲ್ಲಾ ಅಂಶಗಳನ್ನ ಗಮನದಲ್ಲಿ ಇಟ್ಟುಕೊಂಡ ಇಶಾನ್​ ದೇಣಿಗೆ ಸಂಗ್ರಹದ ಮೂಲಕ ಬರೋಬ್ಬರಿ 51,57,499 ರೂಪಾಯಿ ಹಣವನ್ನ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ್ದಾನೆ. ಮಾತ್ರವಲ್ಲದೇ 100ಕ್ಕೂ ಅಧಿಕ ಲ್ಯಾಪ್​ಟಾಪ್​ಗಳನ್ನೂ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ್ದಾನೆ.

ವೇಲ್ಸ್​ ರಾಜಕುಮಾರಿಯಾದ ಡಯಾನಾ ಅವರ ಸವಿನೆನಪಿಗಾಗಿ 9 ರಿಂದ 25 ವರ್ಷದ ಯುವ ಜನತೆಗೆ ಅವರು ಮಾಡಿದ ಸಾಮಾಜಿಕ ಕಾರ್ಯವನ್ನ ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನ ನೀಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...