alex Certify ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ಲಕ್ಷುರಿ ಬೈಕ್‌ಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ಲಕ್ಷುರಿ ಬೈಕ್‌ಗಳು

Kawasaki Ninja® 650 | Motorcycle | Sporty & Nimble

ಈ ವರ್ಷ ಭಾರತೀಯ ಮಾರುಕಟ್ಟೆಗೆ ಹಲವು ಬೈಕ್‌ಗಳು ಲಗ್ಗೆ ಇಟ್ಟಿವೆ. ಇವುಗಳ ಬೆಲೆ 1 ಲಕ್ಷದಿಂದ 20 ಲಕ್ಷ ರೂಪಾಯಿವರೆಗಿದೆ. ಆಫ್-ರೋಡ್ ಮತ್ತು ಆನ್-ರೋಡ್ ಬೈಕುಗಳು ಕೂಡ ಈ ಪಟ್ಟಿಯಲ್ಲಿವೆ. ಇತ್ತೀಚೆಗೆ ಬಿಡುಗಡೆಯಾದ ಬೈಕ್‌ಗಳ ಪಟ್ಟಿಯಲ್ಲಿ ಎಪ್ರಿಲಿಯಾ, ಸುಜುಕಿ, ಕವಾಸಕಿ, ಟ್ರಯಂಫ್ ಮತ್ತು ಸಿಕಾ ಕಂಪನಿಗಳ ಮಾದರಿಗಳು ಸೇರಿವೆ.

ಎಪ್ರಿಲಿಯಾ ಟುವಾರೆಗ್‌ 660 – ಇದು 659 ಸಿಸಿ ಎಂಜಿನ್ ಹೊಂದಿದೆ. ಜೊತೆಗೆ 6 ಗೇರ್ ಬಾಕ್ಸ್ ಟ್ರಾನ್ಸ್ ಮಿಷನ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಈ ಎಂಜಿನ್ 9250 rpm ನಲ್ಲಿ 80 HP ಶಕ್ತಿಯನ್ನು ಒದಗಿಸುತ್ತದೆ ಮತ್ತು 6500 rpm ನಲ್ಲಿ 70.0 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್‌ನ ಎಕ್ಸ್ ಶೋ ರೂಂ ಬೆಲೆ 18.85 ಲಕ್ಷ ರೂಪಾಯಿಗಳಿಂದ ಆರಂಭ.

ಸೀಕಾ ಎಸ್‌ ಬೋಲ್ಟ್‌ – ಈ ಬೈಕ್‌ನಲ್ಲಿ 72 ವಿ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬೈಕ್ ಒಂದೇ ಚಾರ್ಜಿಂಗ್‌ನಲ್ಲಿ 90 ರಿಂದ 140 ಕಿಲೋಮೀಟರ್ ದೂರ ಕ್ರಮಿಸಬಲ್ಲದು. ಅಲ್ಲದೆ 3 ವರ್ಷಗಳ ಬ್ಯಾಟರಿ ವಾರಂಟಿಯನ್ನೂ ನೀಡಲಾಗುತ್ತಿದೆ. ಬೈಕ್‌ನ ಎಕ್ಸ್ ಶೋ ರೂಂ ಬೆಲೆ 1.69 ಲಕ್ಷ ರೂ.

ಕವಾಸಕಿ ನಿಂಜಾ 500 – ಇದು  4-ಸ್ಟ್ರೋಕ್, ಪ್ಯಾರಲಲ್ ಟ್ವಿನ್, DOHC, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಬೈಕ್‌ನ ಸರಾಸರಿ ಎಕ್ಸ್ ಶೋ ರೂಂ ಬೆಲೆ 5.24 ಲಕ್ಷ ರೂ.

ಟ್ರಯಂಫ್ ಟೈಗರ್ 900 – ಈ ಬೈಕ್‌ನ ಎರಡು ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಬೈಕ್ GT ಮತ್ತು Rally Pro ಆವೃತ್ತಿಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. ನ್ಯೂ ಟೈಗರ್ 900ನ Rally Pro ಎಕ್ಸ್ ಶೋ ರೂಂ ಬೆಲೆ 15.95 ಲಕ್ಷ ರೂ. ಅದರ ಜಿಟಿ ರೂಪಾಂತರದ ಬೆಲೆ 13.95 ಲಕ್ಷ ರೂ.

ಸುಜುಕಿ V-Strom 800DE – ಈ ಬೈಕ್‌ನಲ್ಲಿ 4-ಸ್ಟ್ರೋಕ್, 2-ಸಿಲಿಂಡರ್, ಲಿಕ್ವಿಡ್-ಕೂಲ್ಡ್, DOHC ಎಂಜಿನ್ ವ್ಯವಸ್ಥೆಯಿದೆ. ಬೈಕ್ 20 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ಈ ಸುಜುಕಿ ಬೈಕಿನ ಎಕ್ಸ್ ಶೋ ರೂಂ ಬೆಲೆ 10.30 ಲಕ್ಷ ರೂಪಾಯಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...