alex Certify ಹಿಂದೆಂದೂ ನಡೆದಿರದ ಘಟನೆಗೆ ಸಾಕ್ಷಿಯಾಯ್ತು KBC ಶೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದೆಂದೂ ನಡೆದಿರದ ಘಟನೆಗೆ ಸಾಕ್ಷಿಯಾಯ್ತು KBC ಶೋ

ಹೆಸರಾಂತ ರಿಯಾಲಿಟಿ ಶೋ ಕೌನ್​ ಬನೇಗಾ ಕರೋಡ್​ ಪತಿ ಇದೀಗ ತನ್ನ 12ನೆ ಆವೃತ್ತಿಯನ್ನ ನಡೆಸುತ್ತಿದೆ. ಆದರೆ ಈ ಬಾರಿಯ ಶೋನಲ್ಲಿ ಪ್ರೇಕ್ಷಕರು ಹಿಂದೆಂದೂ ನೋಡಿರದ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ.

ಬಿಗ್​ ಬಿಯೊಂದಿಗೆ ಶೋನಲ್ಲಿ ಕುಳಿತಿದ್ದ ಸ್ಪರ್ಧಿ ರಾಜ್​ ಲಕ್ಷ್ಮೀ 12,50,000 ರೂ.ಗೆ ಆಟವನ್ನ ಸ್ಟಾಪ್​ ಮಾಡಿದ್ದಾರೆ. ಅವರಿಗೆ ಚೆಕ್​ ನೀಡಿ ಶೋದಿಂದ ವಿದಾಯ ಹೇಳಿದ ಅಮಿತಾಬ್​ ಮತ್ತೊಬ್ಬ ಸ್ಪರ್ಧಿ ಸ್ವಪ್ನಿಲ್​ ಎಂಬವರನ್ನ ವೇದಿಕೆಗೆ ಆಹ್ವಾನಿಸಿದ್ರು.

ಬಿಗ್​ ಬಿ ಕೇಳಿದ ಮೊದಲ ಪ್ರಶ್ನೆಗೆ ಉತ್ತರಿಸಿದ ಸ್ವಪ್ನಿಲ್​ ಎರಡನೇ ಪ್ರಶ್ನೆಗೆ ಉತ್ತರಿಸೋಕೆ ರೆಡಿಯಾಗಿದ್ರು. ಆದರೆ ಈ ವೇಳೆಗೆ ಬಿಗ್​ ಬಿ ಅವರ ಕಂಪ್ಯೂಟರ್​ 10 ಸೆಕೆಂಡ್​ಗಳ ಕಾಲ ಕೆಲಸ ಮಾಡೋದನ್ನೇ ನಿಲ್ಲಿಸಿಬಿಟ್ಟಿದೆ. ಇದನ್ನ ನೋಡಿದ ಅಮಿತಾಬ್​ ಕೂಡ ಶಾಕ್​ ಆಗಿದ್ದಾರೆ. ಅಯ್ಯೋ ಕಂಪ್ಯೂಟರ್​​ ಹಾಳಾಯ್ತು ಎಂದ ಬಿಗ್​ ಬಿ ಸಹಾಯಕ್ಕಾಗಿ ಟೀಂ ಸದಸ್ಯರನ್ನ ಕರೆದಿದ್ದಾರೆ. ಆದರೆ ಯಾರಾದರೂ ಸಹಾಯಕ್ಕೆ ಬರೋದಕ್ಕೂ ಮುನ್ನವೇ ಕಂಪ್ಯೂಟರ್​ ಪುನಃ ಕಾರ್ಯ ನಿರ್ವಹಿಸೋಕೆ ಶುರು ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...