alex Certify ರಾಜ್ಯ ರಾಜಧಾನಿ ಬೆಂಗಳೂರಿಗೆ ಅತಿಹೆಚ್ಚು ʼನಗೆಕೂಟʼ ಹೊಂದಿರುವ ನಗರವೆಂಬ ಹೆಗ್ಗಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ರಾಜಧಾನಿ ಬೆಂಗಳೂರಿಗೆ ಅತಿಹೆಚ್ಚು ʼನಗೆಕೂಟʼ ಹೊಂದಿರುವ ನಗರವೆಂಬ ಹೆಗ್ಗಳಿಕೆ

Bengaluru has most laughter clubs

ಅಖಿಲ ಕರ್ನಾಟಕ ಲಾಫ್ಟರ್ ಕ್ಲಬ್‌ಗಳ (ಎಕೆಎಲ್‌ಸಿ) ಪ್ರಕಾರ ದೇಶದಲ್ಲೇ ಬೆಂಗಳೂರು ಅತಿ ಹೆಚ್ಚು ನಗೆಕೂಟಗಳನ್ನು ಹೊಂದಿರುವ ನಗರವಾಗಿದೆ. ನಗರವು ಸುಮಾರು 220 ಕ್ಕೂ ಹೆಚ್ಚು ನಗೆಕೂಟಗಳನ್ನು ಹೊಂದಿದೆ. ಬೆಂಗಳೂರು ದೇಶದಲ್ಲಿ ಅತಿ ಹೆಚ್ಚು ಲಾಫ್ಟರ್ ಕ್ಲಬ್‌ಗಳನ್ನು ಹೊಂದಿದೆ ಎಂದು 1995 ರಲ್ಲಿ ಮುಂಬೈನಲ್ಲಿ ನಗೆಕೂಟ ಪರಿಕಲ್ಪನೆಯನ್ನು ಪ್ರಾರಂಭಿಸಿದ ವೈದ್ಯ ಡಾ ಮದನ್ ಕಟಾರಿಯಾ ಹೇಳಿದ್ದಾರೆ. ಬೆಂಗಳೂರು ನಂತರ ಪುಣೆ ಎರಡನೇ ಸ್ಥಾನದಲ್ಲಿದೆ.

ಉದ್ಯಾನವನಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ಜನರು ನಗೆ ಯೋಗ ಅಭ್ಯಾಸ ಮಾಡಲು, ಜೋಕ್‌ಗಳನ್ನು ಕೇಳಲು, ಚಪ್ಪಾಳೆ ತಟ್ಟಲು ಅಥವಾ ಹಾಡಲು ಪ್ರತಿದಿನ ಬೆಳಿಗ್ಗೆ ಮತ್ತು ಕೆಲವೊಮ್ಮೆ ಸಂಜೆ ಕೂಡ ಸೇರುತ್ತಾರೆ. ಇವುಗಳು ಉಚಿತ ಮತ್ತು ಎಲ್ಲರಿಗೂ ಮುಕ್ತವಾಗಿದ್ದರೂ, 50 ರಿಂದ 80 ವರ್ಷ ವಯಸ್ಸಿನವರು ಹೆಚ್ಚಾಗಿ ಭೇಟಿ ನೀಡುತ್ತಾರೆ. ಲಾಫ್ಟರ್ ಕ್ಲಬ್‌ಗಳಲ್ಲಿನ ಚಟುವಟಿಕೆಗಳು ಉತ್ತಮ ಆರೋಗ್ಯಕ್ಕೆ ಚಿಕಿತ್ಸಾ ಕ್ರಮಗಳೆಂದು ಹೇಳಲಾಗುತ್ತದೆ.

ಬೆಂಗಳೂರು ಅನೇಕ ಉದ್ಯಾನವನಗಳನ್ನು ಹೊಂದಿದೆ. ನಗರದಲ್ಲಿ ಒತ್ತಡದ ಪ್ರಮಾಣವೂ ಹೆಚ್ಚಿದೆ. ಅನೇಕ ಹಿರಿಯರು ತಮ್ಮ ಮಕ್ಕಳು ದೂರ ಉಳಿಯುವುದರಿಂದ ಒಂಟಿತನ ಅನುಭವಿಸುತ್ತಾರೆ. ಆದ್ದರಿಂದ ಲಾಫ್ಟರ್ ಕ್ಲಬ್‌ಗಳು ಆರೋಗ್ಯ ಪಡೆಯಲು ಮತ್ತು ಬೇಸರವನ್ನು ದೂರ ಮಾಡಲು ಹಿರಿಯರನ್ನು ಒಟ್ಟಿಗೆ ತರುತ್ತವೆ. 11 ಲಾಫ್ಟರ್ ಕ್ಲಬ್ ಹೊಂದಿರುವ ಜಯನಗರ ಬೆಂಗಳೂರಿನಲ್ಲಿ ಅತಿಹೆಚ್ಚು ಲಾಫ್ಟರ್ ಕ್ಲಬ್‌ಗಳನ್ನು ಹೊಂದಿದ್ದು 8 ಕ್ಲಬ್ ಗಳೊಂದಿಗೆ ಮಲ್ಲೇಶ್ವರಂ ನಂತರದ ಸ್ಥಾನದಲ್ಲಿದೆ.

ಬೆಂಗಳೂರಿನ ಮೊದಲ ಕ್ಲಬ್, ROMEO ((Retired Old Men Eating Out) ಜಯನಗರದ ಮಾಧವನ್ ಪಾರ್ಕ್‌ನಲ್ಲಿ ಬೇರೂರಿದೆ. 1998 ರಲ್ಲಿ ದಿವಂಗತ ಇಂಜಿನಿಯರ್ ಬಿ ಕೆ ಸತ್ಯನಾರಾಯಣ್ ಇದನ್ನು ಸ್ಥಾಪಿಸಿದರು. ಸತ್ಯನಾರಾಯಣ್ ಅವರು ಡಾ. ಕಟಾರಿಯಾ ಮತ್ತು ಅವರ ಪತ್ನಿ ಮಾಧುರಿ ಅವರ ಪ್ರೇರಣೆಯಿಂದ ROMEO ಪ್ರಾರಂಭಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...