alex Certify KBC ಸ್ಪರ್ಧಿ ತಂದೆಯ ಹಿನ್ನಲೆ ತಿಳಿದು ಅಚ್ಚರಿಗೊಳಗಾದ ʼಬಿಗ್‌ ಬಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

KBC ಸ್ಪರ್ಧಿ ತಂದೆಯ ಹಿನ್ನಲೆ ತಿಳಿದು ಅಚ್ಚರಿಗೊಳಗಾದ ʼಬಿಗ್‌ ಬಿʼ

ಬಿಗ್​ ಬಿ ಅಮಿತಾಬ್​ ಬಚ್ಚನ್​ ನಡೆಸಿಕೊಡುವ ʼಕೌನ್​ ಬನೇಗಾ ಕರೋಡ್​ಪತಿʼ ಕಾರ್ಯಕ್ರಮದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.

ಹಾಟ್​ಸೀಟ್​ನಲ್ಲಿ ಸ್ಥಾನ ಪಡೆದ ಸ್ಪರ್ಧಿಯು ಜಗತ್ತು ತುಂಬಾ ಚಿಕ್ಕದು ಎಂಬ ಮಾತನ್ನು ಅಮಿತಾಬ್​ ಬಚ್ಚನ್​ ಮುಂದೆ ಸಾಬೀತು ಪಡಿಸಿದ್ದಾರೆ. ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದ ಸ್ಪರ್ಧಿಯಾಗಿದ್ದ ರಶ್ಮಿ ಕದಮ್​ ತಂದೆ 1992ರಲ್ಲಿ ಅಮಿತಾಬ್​ ಬಚ್ಚನ್​ರಿಗೆ ಬಾಡಿಗಾರ್ಡ್​ ಆಗಿದ್ದರಂತೆ.

ಮನಃಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕಿಯಾಗಿರುವ ರಶ್ಮಿ ತಮ್ಮ ತಂದೆಯ ಬಗ್ಗೆ ಬಿಗ್​ ಬಿಗೆ ಮಾಹಿತಿ ನೀಡಿದ್ರು. ಅಮಿತಾಬ್ ಬಚ್ಛನ್​​ ನೀವು ಪೊಲೀಸ್​ ಅಧಿಕಾರಿಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಶ್ಮಿ ತಂದೆ ರಾಜೇಂದ್ರ ‘ಸರ್​​ ನಾನು 1992ರಲ್ಲಿ ನಿಮ್ಮ ಸೆಕ್ಯೂರಿಟಿ ಅಧಿಕಾರಿಯಾಗಿದ್ದೆ, ನಾನು ನಿಮ್ಮ ಬಾಡಿಗಾರ್ಡ್​ ಆಗಿ ಕೆಲಸ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

44 ಕೋಟಿ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ..! ನಾಳೆಯಿಂದ 3 ದಿನ ಈ ಸಮಯದಲ್ಲಿ ಹಣ ವರ್ಗಾವಣೆ ಸಾಧ್ಯವಿಲ್ಲ

ಇದನ್ನು ಕೇಳಿದ ಅಮಿತಾಬ್​ ಬಚ್ಛನ್​ ಶಾಕ್​ ಆಗಿದ್ದಾರೆ. ನಿಮ್ಮೊಂದಿಗೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂಬ ಆಸೆ ನನಗೆ ಬಹಳ ವರ್ಷಗಳಿಂದ ಇತ್ತು. ಆದರೆ ಆಗೆಲ್ಲ ಮೊಬೈಲ್​ನಲ್ಲಿ ಕ್ಯಾಮರಾ ಇರಲಿಲ್ಲ. ಆದರೆ ನಾನಿಂದು ಇಲ್ಲಿದ್ದೇನೆ. ನನ್ನ ಪುತ್ರಿಗೆ ಧನ್ಯವಾದ, ನನಗೆ ತುಂಬಾ ಖುಷಿಯಾಗಿದೆ ಎಂದು ರಾಜೇಂದ್ರ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...