alex Certify ’ಡ್ರೀಮ್‌ಗರ್ಲ್‌ ಸದಾ ’ತಮ್ಮೊಂದಿಗೆ ಒಯ್ಯುವ ಪರ್ಸ್ ನಲ್ಲಿ ಏನೇನಿರುತ್ತೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಡ್ರೀಮ್‌ಗರ್ಲ್‌ ಸದಾ ’ತಮ್ಮೊಂದಿಗೆ ಒಯ್ಯುವ ಪರ್ಸ್ ನಲ್ಲಿ ಏನೇನಿರುತ್ತೆ….?

ಈ ಬಾರಿಯ ಕೌನ್‌ ಬನೇಗಾ ಕರೋಡ್‌ಪತಿ(KBC – 13) ಸಂಚಿಕೆ ಬಹಳ ವಿಶೇಷವಾಗಿದೆ. ಏಕೆಂದರೆ ಸೂಪರ್‌ಹಿಟ್‌ ಹಿಂದಿ ಸಿನಿಮಾ ’ಶೋಲೆ’ಯ ಸೂಪರ್‌ಹಿಟ್‌ ಜೋಡಿಯಾದ ಅಮಿತಾಭ್‌ ಬಚ್ಚನ್‌ ಮತ್ತು ನಟಿ ಹೇಮಾ ಮಾಲಿನಿ ಅವರು ಮುಖಾಮುಖಿಯಾಗಲಿದ್ದಾರೆ. ಹೇಮಾ ಅವರೊಂದಿಗೆ ಸಿನಿಮಾದ ನಿರ್ದೇಶಕ ರಮೇಶ್‌ ಸಿಪ್ಪಿ ಅವರು ಕೂಡ ಇರಲಿದ್ದಾರೆ. ನಟ ಧರ್ಮೇಂದ್ರ ಅವರು ಆನ್‌ಲೈನ್‌ ಮೂಲಕ ಇವರೆಲ್ಲರೊಂದಿಗೆ ಸಂಭಾಷಣೆ ನಡೆಸಲಿದ್ದಾರೆ.

BIG NEWS: ಮುಖ ತೋರಿಸಲು ನನಗೆ ಮುಜುಗರವಾಗುತ್ತಿದೆ; ನಿನ್ನೆ ನಡೆದ ಘಟನೆಗೆ ಕ್ಷಮೆಯಾಚಿಸುವೆ ಎಂದ ಸಲೀಂ

ಇಂಥ ಅಪರೂಪದ ತಾರೆಗಳ ಮಿಲನದ ವೇಳೆ ನಟಿ ಹೇಮಾ ಮಾಲಿನ ಅವರ ಖಾಸಗಿ ಪರ್ಸ್‌ನಲ್ಲಿ ಏನಿರುತ್ತದೆ? ಎಂಬ ಬಹಳ ವರ್ಷಗಳ ಪ್ರಶ್ನೆಗೆ ಉತ್ತರ ಸಿಗಲಿದೆ. ಬಹಳ ಸಣ್ಣದಾದ ಪರ್ಸ್‌ ಅಥವಾ ಹ್ಯಾಂಡ್‌ಬ್ಯಾಗ್‌ಗೆ ’ಕ್ಲಚ್‌’ ಎನ್ನಲಾಗುತ್ತದೆ. ಇಷ್ಟು ಸಣ್ಣ ಕ್ಲಚ್‌ನಲ್ಲಿ ಹೇಮಾ ಅವರು ಅಂಥದ್ದೇನು ವಸ್ತುಗಳನ್ನು ಸದಾಕಾಲ ಜತೆಯಲ್ಲೇ ಕೊಂಡೊಯ್ಯುತ್ತಾರೆ ಎಂಬ ಅಭಿಮಾನಿಗಳ ಕುತೂಹಲವನ್ನು ಅಮಿತಾಭ್‌ ಬಚ್ಚನ್‌ ಅವರು ಖುದ್ದು ನಟಿಯ ಮುಂದೆ ಇರಿಸುತ್ತಾರೆ.

BIG NEWS: ಕಾಂಗ್ರೆಸ್ ನಲ್ಲಿ ಡಿ.ಕೆ.ಶಿ V/S ಸಿದ್ದರಾಮಯ್ಯ ನಡೆಯುತ್ತಿದೆ; ಮೈತ್ರಿ ಸರ್ಕಾರದ ಪತನ ಹೇಗಾಯಿತೆಂದು HDK ನೆನಪು ಮಾಡಿಕೊಳ್ಳಲಿ; ಕಾಂಗ್ರೆಸ್-ಜೆಡಿಎಸ್ ವಿರುದ್ಧ ಸಚಿವ ಸೋಮಶೇಖರ್ ವಾಗ್ದಾಳಿ

ಸ್ವಲ್ಪ ಮುಜುಗರದಿಂದಲೇ ಬಚ್ಚನ್‌ ಅವರು ಈ ಪ್ರಶ್ನೆಯನ್ನು ಹೇಮಾ ಅವರಿಗೆ ಕೇಳುತ್ತಾರೆ. ಇಷ್ಟು ಸಣ್ಣ ಕ್ಲಚ್‌ನಲ್ಲಿ ಅಂಥದ್ದೇನಿರುತ್ತದೆ ಹೇಮಾಜೀ ? ಎಂದು ಪ್ರಶ್ನಿಸುತ್ತಾರೆ.

ಅದಕ್ಕೆ ಥಟ್ಟನೆ ಉತ್ತರ ಕೊಡುವ ನಟಿ ಹೇಮಾ ಅವರು, ʼಸಣ್ಣ ಲಿಪ್‌ಸ್ಟಿಕ್‌ ಮತ್ತು ಬಹಳ ಕಡಿಮೆ ಮೊತ್ತದ ಹಣವನ್ನು ಇರಿಸಿಕೊಂಡಿರುತ್ತೇನೆ,’ ಎಂದು ಉತ್ತರಿಸಿದ್ದಾರೆ.

‘ಕೋಟಿಗೊಬ್ಬ’ನ ವಿರುದ್ಧ ಷಡ್ಯಂತ್ರ ಮಾಡಿದ್ಯಾರು ಗೊತ್ತಾ…?

ಅದಕ್ಕೆ ಬಚ್ಚನ್‌ ಅವರು ಮರುಪ್ರಶ್ನೆ ಹಾಕುತ್ತಾರೆ. ಮನೆಯಿಂದ ಹೊರಡುವಾಗಲೇ ಮೇಕಪ್‌ ಹಾಕಿ ಹೊರಡುವಾಗ ಮತ್ತೆ ಲಿಪ್‌ಸ್ಟಿಕ್‌ ಯಾಕೆ ಎನ್ನುತ್ತಾರೆ.

ಅದಕ್ಕೆ ಹೇಮಾ ಅವರು, ಟಚ್‌ ಅಪ್‌ ಬೇಕಲ್ಲವೇ ಎಂದು ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸುತ್ತಾರೆ.

ಈ ಶುಕ್ರವಾರದಂದು ವಿಶೇಷ ಸಂಚಿಕೆಯ ಪ್ರಸಾರವು ’ಸೆಟ್‌ ಇಂಡಿಯಾ’ ಚಾನೆಲ್‌ನಲ್ಲಿ ನೋಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...