alex Certify ‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದಲ್ಲಿ ಭಾವುಕರಾಗಿ ಕಣ್ಣೀರಿಟ್ಟ ಬಿಗ್​ ಬಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದಲ್ಲಿ ಭಾವುಕರಾಗಿ ಕಣ್ಣೀರಿಟ್ಟ ಬಿಗ್​ ಬಿ

ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಛನ್​ ‘ಕೌನ್​ ಬನೇಗಾ ಕರೋಡ್​ಪತಿ’ಯ 1000ನೇ ಕಂತನ್ನು ಪೂರೈಸಲಿದ್ದಾರೆ. ಶುಕ್ರವಾರದ ಸಂಚಿಕೆಯಲ್ಲಿ ಅಮಿತಾಭ್​​ ಪುತ್ರಿ ಶ್ವೇತಾ ಬಚ್ಛನ್​ ಹಾಗೂ ಮೊಮ್ಮಗಳು ನವ್ಯಾ ನವೇಲಿ ನಂದಾ ಹಾಟ್​ ಸೀಟ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಮಿತಾಬ್​ ಬಚ್ಚನ್​ 2000ನೇ ಇಸ್ವಿಯಲ್ಲಿ ಮೊದಲ ಬಾರಿಗೆ ʼಕೌನ್​ ಬನೇಗಾ ಕರೋಡ್​ಪತಿʼ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಇದು ಬ್ರಿಟಿಷ್​ ಟೆಲಿವಿಷನ್​​ನ ಪ್ರಸಿದ್ಧ ಗೇಮ್​ ಶೋ, ಹೂ ವಾಂಟ್ಸ್​​ ಟು ಬಿ ಆನ್ ಮಿಲಿಯೇನರ್​​..? ಎಂಬ ಕಾರ್ಯಕ್ರಮದ ಹಿಂದಿ ಆವೃತ್ತಿಯಾಗಿದೆ.

ಅಮಿತಾಬ್​ ಬಚ್ಚನ್​​ಗೆ ಅನಾರೋಗ್ಯವಾದ ಹಿನ್ನೆಲೆಯಲ್ಲಿ ಮೂರನೇ ಆವೃತ್ತಿಯನ್ನು ಶಾರೂಕ್​ ಖಾನ್​ ನಡೆಸಿಕೊಟ್ಟಿದ್ದರು. ಇದನ್ನು ಹೊರತುಪಡಿಸಿ ಕಳೆದ 21 ವರ್ಷಗಳಲ್ಲಿ ಮಿಕ್ಕೆಲ್ಲ ಕೆಬಿಸಿ ಆವೃತ್ತಿಯನ್ನು ಅಮಿತಾಬ್​ ನಡೆಸಿಕೊಟ್ಟಿದ್ದಾರೆ.

21 ವರ್ಷಗಳ ಜರ್ನಿಯ ಪ್ರೋಮೋದಲ್ಲಿ ಅಮಿತಾಬ್​ ಬಚ್ಛನ್​ ಭಾವುಕರಾಗಿದ್ದನ್ನು ಕಾಣಬಹುದಾಗಿದೆ. ಈ ವಿಡಿಯೋದಲ್ಲಿ ಈ ಹಿಂದಿನ ಎಲ್ಲಾ ಆವೃತ್ತಿಗಳ ಕೋಟ್ಯಾಧಿಪತಿಗಳನ್ನು ತೋರಿಸಲಾಗಿದೆ. 2000ನೇ ಇಸ್ವಿಯಲ್ಲಿ ಹರ್ಷವರ್ಧನ್​ ನವಥೆ, 2011ರಲ್ಲಿ 5 ಕೋಟಿ ಗೆದ್ದ ಸುಶೀಲ್​ ಕುಮಾರ್​ ಸೇರಿದಂತೆ ಹಾಟ್​ ಸೀಟ್​ನಲ್ಲಿ ಕೂತು ಕೋಟ್ಯಾಧಿಪತಿಗಳಾದ ಅನೇಕರ ಮುಖ ಈ ಪ್ರೋಮೋದಲ್ಲಿದೆ.

ಅಮಿತಾಬ್​ ಪುತ್ರಿ ಶ್ವೇತಾ ಹೇಗೆ ಅನಿಸುತ್ತೆ ನಿಮಗೆ ಎಂದು ಕೇಳಿದ್ದಕ್ಕೆ ಭಾವುಕರಾಗಿ ಉತ್ತರಿಸಿದ ಅಮಿತಾಬ್, ನನಗೆ ಜಗತ್ತೇ ಬದಲಾಗಿದೆ ಎಂದೆನಿಸುತ್ತಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...