alex Certify KBC ಕಾರ್ಯಕ್ರಮದ ವೇಳೆ ರೋಹಿತ್‌ ಶರ್ಮಾ ನೋಡುತ್ತಲೇ ಭಾವುಕನಾದ ಅಭಿಮಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

KBC ಕಾರ್ಯಕ್ರಮದ ವೇಳೆ ರೋಹಿತ್‌ ಶರ್ಮಾ ನೋಡುತ್ತಲೇ ಭಾವುಕನಾದ ಅಭಿಮಾನಿ

ಕೌನ್​ ಬನೇಗಾ ಕರೋಡ್​ಪತಿ ಆವೃತ್ತಿಯಲ್ಲಿ ಕ್ರಿಕೆಟಿಗರು ಪಾಲ್ಗೊಂಡಿರೋದನ್ನು ನಾವು ನೋಡಿದ್ದೇವೆ. ತಮ್ಮ ಕ್ರಿಕೆಟ್​ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾ ಟೀಂ ಇಂಡಿಯಾ ಅನೇಕ ಆಟಗಾರರು ಹಾಟ್​ಸೀಟ್​ನಲ್ಲಿ ಕುಳಿತಿದ್ದಾರೆ.

ಆದರೆ ಮಂಗಳವಾರದ ಕೌನ್​ ಬನೇಗಾ ಕರೋಡ್​ಪತಿ ಎಪಿಸೋಡ್​ ಮಾತ್ರ ಕೊಂಚ ಭಿನ್ನವಾಗಿತ್ತು. ಹಾಟ್​ಸೀಟ್​​ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ತನ್ನ ನೆಚ್ಚಿನ ಕ್ರಿಕೆಟಿಗ ರೋಹಿತ್​ ಶರ್ಮಾ ಜೊತೆ ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ವಿಡಿಯೋ ಕಾಲ್​ ಮೂಲಕ ಮಾತನಾಡಿದ್ದಾರೆ.

ಸೌರವ್​ ಗಂಗೂಲಿ – ವಿರೇಂದ್ರ ಸೆಹ್ವಾಗ್, ನೀರಜ್​ ಚೋಪ್ರಾ – ಪಿಆರ್​​ ಶ್ರೀಜೆಸ್​​ ಈಗಾಗಲೇ ಕೌನ್​ ಬನೇಗಾ ಕರೋಡ್​ ಪತಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಮಾತ್ರ ಅಭಿಮಾನಿಯಿಂದಾಗಿ ರೋಹಿತ್​ ಶರ್ಮಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತಾಯ್ತು. ಪ್ರಾಂಶು ಎಂಬ ಸ್ಪರ್ಧಿ ಕಾರ್ಯಕ್ರಮದಲ್ಲಿ ರೋಹಿತ್​ ಶರ್ಮಾ ಎಂದರೆ ತಮಗೆಷ್ಟು ಇಷ್ಟ ಎನ್ನೋದನ್ನು ಅಮಿತಾಬ್​ ಬಳಿ ಹೇಳಿಕೊಂಡಿದ್ದರು.

ಅಮಿತಾಬ್​ ಬಚ್ಚನ್​ ನಿಮ್ಮ ಗರ್ಲ್​ಫ್ರೆಂಡ್​ ಹಾಗೂ ರೋಹಿತ್​ ಶರ್ಮಾ ಇಬ್ಬರಲ್ಲಿ ಯಾವ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಪ್ರಾಂಶು 7 ಕೋಟಿಗೆ ಕೇಳಬಹುದಾದ ಪ್ರಶ್ನೆಗಿಂತಲೂ ಇದು ಹೆಚ್ಚು ಕಠಿಣವಾಗಿದೆ ಎಂದು ಉತ್ತರಿಸಿದ್ದರು.

ರೋಹಿತ್​ ಬಗ್ಗೆ ಇಷ್ಟೊಂದು ಅಪಾರ ಪ್ರೀತಿ ಹೊಂದಿರೋದನ್ನು ಗಮನಿಸಿದ ಬಿಗ್​ ಬಿ ಅಮಿತಾಭ್​​, ರೋಹಿತ್​ ಶರ್ಮಾಗೆ ವಿಡಿಯೋ ಕಾಲ್​ ಮಾಡಿ ಪ್ರಾಂಶು ಜೊತೆ ಮಾತನಾಡಿಸಿದ್ದಾರೆ.

ರೋಹಿತ್​​ರನ್ನು ಬಿಗ್​ ಸ್ಕ್ರೀನ್​ನಲ್ಲಿ ನೋಡಿ ನಂಬಲಾಗದ ಪ್ರಾಂಶು ಒಮ್ಮೆಲೆ ಭಾವುಕರಾದರು. ರೋಹಿತ್​ ಶರ್ಮಾ ತಮ್ಮ ಅಭಿಮಾನಿ ಪ್ರಾಂಶುಗೆ ತಮ್ಮ ಸಹಿ ಇರುವ ಗ್ಲೌಸ್​ಗಳನ್ನು ಉಡುಗೊರೆ ರೂಪದಲ್ಲಿ ನೀಡೋದಾಗಿ ಹೇಳಿದ್ದಾರೆ.

— ?︎?︎?︎?︎????? ?????™ ??❤️ (@CricCrazyMrigu) September 23, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...