alex Certify ಅಂಡರ್ ​ಟೇಕರ್​ ಫೇವರಿಟ್​ ಮ್ಯಾಚ್​​ ಯಾವುದು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಡರ್ ​ಟೇಕರ್​ ಫೇವರಿಟ್​ ಮ್ಯಾಚ್​​ ಯಾವುದು ಗೊತ್ತಾ…?

ಬಾಲ್ಯದಲ್ಲಿ ಡಬ್ಲು ಡಬ್ಲುಇ ನೋಡಿದವರು ನೀವಾಗಿದ್ರೆ ಅಂಡರ್​ಟೇಕರ್​ ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಡಬ್ಲುಡಬ್ಲುಇ ವೇದಿಕೆಯಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನ ಹೊಂದಿರುವ ಆಂಡ್ರ್ಯೂ ಡಬ್ಲುಡಬ್ಲುಇಗೆ ಕಾಲಿಟ್ಟ 30ನೇ ವರ್ಷಕ್ಕೆ ಫೀಲ್ಡಿಗೆ ಗುಡ್​ ಬೈ ಹೇಳಿದ್ದಾರೆ.

ರಿಂಗ್​​ಗೆ ವಿದಾಯ ಹೇಳುವ ಕೆಲವೇ ದಿನಗಳ ಮೊದಲು ಅಂಡರ್​ಟೇಕರ್​ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡ್ರು. ಈ ಸಂದರ್ಶನದಲ್ಲಿ ಮೂವತ್ತು ವರ್ಷಗಳ ಡಬ್ಲುಡಬ್ಲುಇ ಜೀವನದಲ್ಲಿ ಅವರ ನೆಚ್ಚಿನ ಪಂದ್ಯ ಯಾವುದಾಗಿತ್ತು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ನಾನು, ರಾಂಡಿ ಸಾವೇಜ್​ ಹಾಗೂ ರಿಕಿ ಸ್ಟೀಮ್​ ಬೋಟ್​ ಎಂದು ಟೇಕರ್​ ಹೇಳಿದ್ರು. ಮಾತ್ರವಲ್ಲದೇ ರಿಕ್​ಫ್ಲೇರ್​ ಹಾಗೂ ಹಾರ್ಲೆಸನ್​ ನಡುವಿನ ಯಾವುದೇ ಪಂದ್ಯ ನನಗೆ ಇಷ್ಟ ಎಂದಿದ್ದಾರೆ.

ಡಬ್ಲುಡಬ್ಲುಇನಿಂದ ಟೇಕರ್​ಗೆ ವಿದಾಯ ಹೇಳುವ ದಿನ ಅವರ 30 ವರ್ಷಗಳ ಪ್ರಯಾಣದ ವಿಡಿಯೋವನ್ನ ಪ್ಲೇ ಮಾಡಲಾಗಿತ್ತು. ಈ ವಿಡಿಯೋದಲ್ಲಿ ಟ್ರಿಪಲ್​ ಹೆಚ್​, ಸ್ಟೀವ್​ ಆಸ್ಟಿನ್​, ಜಾನ್​ ಸೇನಾ ಸೇರಿದಂತೆ ಇತರರು ಟೇಕರ್​ ಜೊತೆಗಿನ ಅನುಭವಗಳನ್ನ ಹಂಚಿಕೊಂಡ್ರು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...