alex Certify WWE ನ ಮತ್ತೊಂದು ಕರಾಳ ಮುಖ ಬಿಚ್ಚಿಟ್ಟ ಮಾಜಿ ವೈದ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WWE ನ ಮತ್ತೊಂದು ಕರಾಳ ಮುಖ ಬಿಚ್ಚಿಟ್ಟ ಮಾಜಿ ವೈದ್ಯ..!

ವರ್ಲ್ಡ್​ ವ್ರೆಸ್ಲಿಂಗ್​ ಎಂಟರ್​ಟೇನ್​ಮೆಂಟ್​​ನ ಬಗ್ಗೆ ಈಗಲೂ ಸಾಕಷ್ಟು ಪ್ರಶ್ನೆಗಳು ಅನೇಕರಲ್ಲಿದೆ. ಇದು ಟೆಲಿವಿಷನ್​ ಲೋಕದಲ್ಲಿ ಅಭಿಮಾನಿಗಳನ್ನ ಗಳಿಸಿದೆ ಆದರೂ ಸಹ ಇದು ನಿಜಕ್ಕೂ ಅಷ್ಟೊಂದು ಗಂಭೀರವಾದ ಹೊಡೆದಾಟವಾ ಅಲ್ಲವಾ ಅನ್ನೋ ಪ್ರಶ್ನೆಯೇ ಅನೇಕರದ್ದು. ಈಗಾಗಲೇ ಅನೇಕ ವಿವಾದಗಳನ್ನ ಹೊತ್ತುಕೊಂಡಿರುವ ಡಬ್ಲು ಡಬ್ಲು ಇ ಇದೀಗ ಇನ್ನೊಂದು ಕಾರಣದಿಂದ ಸುದ್ದಿಯಾಗಿದೆ.

ಡಬ್ಲು ಡಬ್ಲುಇ ಯ ನಿವೃತ್ತ ವೈದ್ಯ ಫ್ರ್ಯಾಂಕ್​​ ರೋಮಸ್ಕೇವೇಜ್​ ಎಂಬವರು ಇಲ್ಲಿ ಬಳಕೆ ಮಾಡಲ್ಪಡುವ ಸ್ಟಿರಾಯ್ಡ್​​ಗಳ ಬಗ್ಗೆ ಭಯಾನಕ ಗುಟ್ಟೊಂದನ್ನ ಬಿಚ್ಚಿಟ್ಟಿದ್ದಾರೆ. ಅನೇಕ ಕುಸ್ತಿಪಟುಗಳು ನನ್ನ ಬಳಿಯೇ ಸ್ಟಿರಾಯ್ಡ್​​ ಬಳಕೆ ಬಗ್ಗೆ ನನ್ನಲ್ಲಿಯೇ ಮಾಹಿತಿ ಕೇಳಿದ್ದರು ಎಂದು ಹೇಳಿದ್ದಾರೆ.

ತಾನೊಬ್ಬ ವೈದ್ಯನಾಗಿದ್ದು ಯಾವೊಬ್ಬ ಕುಸ್ತಿಪಟುವಿಗೆ ಇದನ್ನ ಬಳಕೆ ಮಾಡೋದಕ್ಕೆ ತಾವು ಪುಷ್ಠಿಯನ್ನ ನೀಡಿರಲಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ. ಅಲ್ಲದೇ ಕುಸ್ತಿ ಪಟುಗಳು ಮನವಿ ಮಾಡಿದ್ದರು ಸಹ ಈ ಸ್ಟಿರಾಯ್ಡ್​​ಗಳನ್ನ ಮಾರಾಟ ಮಾಡುವ ಜಾಲಕ್ಕೆ ತಾವು ಇಳಿದಿರಲಿಲ್ಲ ಎಂದು ಹೇಳಿದ್ದಾರೆ. ಫ್ರ್ಯಾಂಕ್​​​ 1993ರಿಂದ 2006ರವರೆಗೆ ಡಬ್ಲುಡಬ್ಲುಇ ನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...