alex Certify ನೆಟ್ಟಿಗರ ಹೃದಯ ಗೆದ್ದ ಪ್ಯಾರಾಲಿಂಪಿಕ್ ಚಾಂಪಿಯನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಹೃದಯ ಗೆದ್ದ ಪ್ಯಾರಾಲಿಂಪಿಕ್ ಚಾಂಪಿಯನ್

ಇದೇ ಮೊದಲ ಬಾರಿಗೆ ಕೃತಕ ಕಾಲುಗಳ ಮೇಲೆ ನಡೆಯುತ್ತಿರುವ ಎರಡು ವರ್ಷದ ಮಗುವೊಂದಕ್ಕೆ ಪ್ರೋತ್ಸಾಹ ನೀಡುತ್ತಿರುವ ಪ್ಯಾರಾಲಿಂಪಿಕ್ ಪಟು ಬ್ಲೇಕ್ ಲೀಪ್‌ರ ವಿಡಿಯೋವೊಂದು ನೆಟ್ಟಿಗರ ಹೃದಯ ಗೆದ್ದಿದೆ.

ಬ್ಯಾಸ್ಕೆಟ್‌ಬಾಲ್‌ ಮಾಜಿ ಆಟಗಾರ ರೆಕ್ಸ್‌ ಚಾಪ್‌ಮನ್ ಈ ವಿಡಿಯೋವನ್ನು ಟ್ವಿಟರ್‌ನಲ್ಲಿರುವ ತಮ್ಮ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. ಕೆ.ಜೆ. ಡೈಯೆರ್‌ ಹೆಸರಿನ ಈ ಎರಡರ ಪೋರನಿಗೆ ಪ್ಯಾರಾಲಿಂಪಿಕ್‌ನಲ್ಲಿ ಎಂಟು ಪದಕ ಗೆದ್ದಿರುವ ಚಾಂಪಿಯನ್ ಪ್ರೋತ್ಸಾಹ ನೀಡುತ್ತಿರುವುದನ್ನು ನೋಡಬಹುದಾಗಿದೆ.

ಈ ವಿಡಿಯೋ ಸಖತ್‌ ವೈರಲ್ ಆಗಿದ್ದು, 20 ಲಕ್ಷಕ್ಕೂ ಹೆಚ್ಚು ಬಾರಿ ವೀವ್‌ ಆಗಿದೆ. ಬ್ಲೇಕ್‌ರ ಹೃದಯ ಸಿರಿವಂತಿಕೆಯನ್ನು ನೆಟ್ಟಿಗರು ಮೆಚ್ಚಿ ಕೊಂಡಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...