alex Certify ನಮ್ಮ ನಡಿಗೆಯಿಂದಲೇ ಪತ್ತೆ ಮಾಡಬಹುದು ರಾತ್ರಿಯ ನಿದ್ದೆಯ ರಹಸ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಮ್ಮ ನಡಿಗೆಯಿಂದಲೇ ಪತ್ತೆ ಮಾಡಬಹುದು ರಾತ್ರಿಯ ನಿದ್ದೆಯ ರಹಸ್ಯ…!

ಹೊಸ ಅಧ್ಯಯನದ ಪ್ರಕಾರ ನಡಿಗೆ ನಮ್ಮ ನಿದ್ದೆಯ ರಹಸ್ಯವನ್ನು ಬಿಚ್ಚಿಡಬಲ್ಲದು. ಜಾರ್ಜ್ ಮೇಸನ್ ವಿಶ್ವವಿದ್ಯಾನಿಲಯದಲ್ಲಿ ಈ ಕುರಿತಂತೆ ಸಂಶೋಧನೆ ನಡೆದದೆ. ಅಧ್ಯಯನದ ಪ್ರಕಾರ ಬೆಳಗ್ಗೆ ತಾಜಾತನ ಮತ್ತು ಪ್ರಕಾಶಮಾನವಾದ ಮುಖದೊಂದಿಗೆ ನಾವು ನಡೆದಾಡುತ್ತಿದ್ದರೆ ರಾತ್ರಿ ಸಾಕಷ್ಟು ನಿದ್ರೆ ಪಡೆದಿದ್ದೇವೆ ಎಂದರ್ಥ. ಜನರ ನಡೆ-ನುಡಿಯು ಅವರ ಉತ್ತಮ ನಿದ್ರೆಯನ್ನು ಬಹಿರಂಗಪಡಿಸುತ್ತದೆ.

ನಡೆಯುವಾಗ ಸೊಂಟವು ತುಂಬಾ ಅಲುಗಾಡುತ್ತಿದ್ದರೆ ಮತ್ತು ವ್ಯಕ್ತಿಯು ಬಾಗುತ್ತಿರುವಂತೆ ತೋರುತ್ತಿದ್ದರೆ ಅಥವಾ ಹೆಜ್ಜೆಗಳನ್ನು ನೆಲಕ್ಕೆ ಸಮವಾಗಿ ಹಾಕುತ್ತಿಲ್ಲ ಎಂದಾದಲ್ಲಿ ರಾತ್ರಿ ಸಾಕಷ್ಟು ನಿದ್ರೆ ಬಂದಿಲ್ಲ ಎಂದು ಅರ್ಥಮಾಡಿಕೊಳ್ಳಿ.

ಸಂಶೋಧಕರು 123 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. 59 ಪ್ರತಿಶತ ಯುವಕರು ಚೆನ್ನಾಗಿ ನಿದ್ದೆ ಮಾಡುತ್ತಿದ್ದರೆ, 41 ಪ್ರತಿಶತದಷ್ಟು ಮಂದಿ ಕೆಲವು ಕಾರಣಗಳಿಂದ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗಿರಲಿಲ್ಲ. ಅವರ ದೇಹದಲ್ಲಿ ಚಲನೆಯ ಸಂವೇದಕಗಳನ್ನು ಅಳವಡಿಸಲಾಯಿತು ಮತ್ತು ಅವರನ್ನು ಎರಡು ನಿಮಿಷಗಳ ವಾಕಿಂಗ್‌ಗೆ ಕಳುಹಿಸಲಾಯಿತು. ಸಂವೇದಕದಿಂದ ಸಂಗ್ರಹಿಸಿದ ಡೇಟಾವನ್ನು AI ಕಲಿಕೆಯ ಅಲ್ಗಾರಿದಮ್‌ಗೆ ಕಳುಹಿಸಲಾಗಿದೆ.

ಭಾಗವಹಿಸುವವರ ಸಂಪೂರ್ಣ ವಾಕಿಂಗ್ ಮಾದರಿಯನ್ನು ಅವರು ತೆಗೆದುಕೊಂಡ ಮೊದಲ ಹೆಜ್ಜೆಯಿಂದಲೇ AI ವಿಶ್ಲೇಷಿಸಿದೆ. ಕಡಿಮೆ ನಿದ್ದೆ ಮಾಡಿರುವವರು ತಮ್ಮ ಕೆಳಗಿನ ಬೆನ್ನೆಲುಬುಗಳಲ್ಲಿ ಕಡಿಮೆ ವಕ್ರತೆಯನ್ನು ಹೊಂದಿರುತ್ತಾರೆ, ಇದರಿಂದಾಗಿ ಅವರು ಕುಣಿಯುತ್ತಾರೆ. ಸೊಂಟವು ಹೆಚ್ಚು ಚಲಿಸಲು ಪ್ರಾರಂಭಿಸಿದಾಗ ನಡಿಗೆಯೂ ಬದಲಾಗುತ್ತದೆ. ಒಟ್ಟಾರೆ ಅವರು ಒಂದೇ ವೇಗದಲ್ಲಿ ನಡೆಯಲು ಸಾಧ್ಯವಿಲ್ಲ.

ಈ ಅಧ್ಯಯನದ ಪ್ರಯೋಜನವೇನು?

ಈ ಅಧ್ಯಯನವನ್ನು ಬಳಸಿಕೊಂಡು ವ್ಯಕ್ತಿ ದಣಿದಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಗುರುತಿಸಬಹುದು. ವಿಶೇಷವಾಗಿ ಕ್ರೀಡೆಗಳಲ್ಲಿ ಅಥವಾ ಅಂತಹ ಇತರ ವೃತ್ತಿಗಳ ಮೇಲೆ ಇದು ಪ್ರಭಾವ ಬೀರುತ್ತದೆ.  ನಿದ್ರಾಹೀನ ಮತ್ತು ದಣಿದ ವ್ಯಕ್ತಿಯು ತಪ್ಪುಗಳನ್ನು, ಅಪಘಾತಗಳನ್ನು ಮಾಡುವ ಎಲ್ಲಾ ಸಾಧ್ಯತೆಗಳಿವೆ.

ಕಡಿಮೆ ನಿದ್ದೆ ಮಾಡುವ ಜನರ ಸಾಮಾನ್ಯ ನಡಿಗೆಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಅವರ ಹೆಜ್ಜೆಗಳು ಆರಂಭದಲ್ಲಿ ದಣಿದಿದ್ದವು ಮತ್ತು ಅವರ ಗತಿಯು ನಿಧಾನವಾಗಿತ್ತು.

ಮನುಷ್ಯರಿಗೆ ಎಷ್ಟು ನಿದ್ರೆ ಬೇಕು?

– ಮಗುವಿಗೆ 12 ರಿಂದ 15 ಗಂಟೆಗಳು

– ನವಜಾತ ಶಿಶುವಿಗೆ 11 ರಿಂದ 14 ಗಂಟೆಗಳು

– ಶಾಲಾಪೂರ್ವ ಮಕ್ಕಳಿಗೆ 10 ರಿಂದ 13 ಗಂಟೆಗಳು

– ಶಾಲೆಗೆ ಹೋಗುವ ಮಕ್ಕಳಿಗೆ ದಿನಕ್ಕೆ ಒಟ್ಟು 9 ರಿಂದ 11 ಗಂಟೆಗಳು

– ವಯಸ್ಸಾದವರಿಗೆ 10 ಗಂಟೆಗಳು

– ವಯಸ್ಕರು ಮತ್ತು ಹದಿಹರೆಯದವರಿಗೆ ಕನಿಷ್ಠ 8 ಗಂಟೆಗಳು

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...