alex Certify ಮುಟ್ಟು ಸಂಭವಿಸುವ ಮೊದಲೇ ಕಾಲು, ಸೊಂಟದಲ್ಲಿ ನೋವು ಕಾಣಿಸಿಕೊಳ್ಳುವುದೇಕೆ….? ಇದಕ್ಕೆ ಇದೆ ಸುಲಭದ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಟ್ಟು ಸಂಭವಿಸುವ ಮೊದಲೇ ಕಾಲು, ಸೊಂಟದಲ್ಲಿ ನೋವು ಕಾಣಿಸಿಕೊಳ್ಳುವುದೇಕೆ….? ಇದಕ್ಕೆ ಇದೆ ಸುಲಭದ ಪರಿಹಾರ

ಋತುಚಕ್ರದ ಸಮಯದಲ್ಲಿ ಯುವತಿಯರು ಮತ್ತು ಮಹಿಳೆಯರ ದೇಹದಲ್ಲಿ ವಿಭಿನ್ನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅನೇಕ ಹಾರ್ಮೋನ್‌ ಬದಲಾವಣೆಗಳಾಗುತ್ತವೆ. ಕೆಲವರಿಗೆ ಮುಟ್ಟು ಕಾಣಿಸಿಕೊಳ್ಳುವ ಮೊದಲೇ ದೇಹದಲ್ಲಿ ಸಾಕಷ್ಟು ನೋವಿರುತ್ತದೆ. ಬೆನ್ನು ನೋವು, ಕಾಲುಗಳಲ್ಲಿ ಸೆಳೆತ ಮತ್ತು ನೋವು, ಸೊಂಟದಲ್ಲಿ ನೋವು, ಕಿಬ್ಬೊಟ್ಟೆ ನೋವು ಈ ರೀತಿಯ ಅನೇಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣ ಮತ್ತು ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ.

ಹಾರ್ಮೋನ್‌ ಅಸಮತೋಲನ

ಋತುಚಕ್ರದ ಮೊದಲು ಮತ್ತು ಮುಟ್ಟಿನ ಸಮಯದಲ್ಲಿ ದೇಹದಲ್ಲಿ ಅನೇಕ ರೀತಿಯ ಹಾರ್ಮೋನ್ ಅಸಮತೋಲನಗಳು ಸಂಭವಿಸುತ್ತವೆ. ಮಹಿಳೆಯರ ದೇಹದಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್‌ಗಳಲ್ಲಿ ಏರುಪೇರಾಗುತ್ತದೆ. ಹಾರ್ಮೋನುಗಳ ಏರಿಳಿತಗಳು ನೀರಿನ ಪ್ರತಿರೋಧ ಮತ್ತು ಊತವನ್ನು ಉಂಟುಮಾಡುತ್ತವೆ. ಕಾಲುಗಳಲ್ಲಿ ನೋವು ಕೂಡ ಕಾಣಿಸಿಕೊಳ್ಳುತ್ತದೆ. ಪ್ರೀ ಮೆನ್‌ಸ್ಟ್ರುವಲ್‌ ಸಿಂಡ್ರೋಮ್

ಅನೇಕ ಮಹಿಳೆಯರು ಮುಟ್ಟಿನ ಮೊದಲು ಕಾಲು ನೋವಿನಿಂದ ಬಳಲುತ್ತಾರೆ. ಇದನ್ನು ಪ್ರೀ ಮೆನ್‌ಸ್ಟ್ರುವಲ್‌ ಸಿಂಡ್ರೋಮ್ (PMS) ಎಂದು ಕರೆಯಲಾಗುತ್ತದೆ. ದ್ರವವು ಪಾದಗಳಲ್ಲಿ ಸಂಗ್ರಹಗೊಳ್ಳುವುದರಿಂದ ಊತ ಮತ್ತು ನೋವು ಇರುತ್ತದೆ.

ರಕ್ತ ಪರಿಚಲನೆ ಸಮಸ್ಯೆ

ಹಾರ್ಮೋನುಗಳ ಬದಲಾವಣೆ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಕಾಲುಗಳು ಮತ್ತು ಇತರ ಅಂಗಗಳಲ್ಲಿ ರಕ್ತ ಪರಿಚಲನೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಕಾಲುಗಳಲ್ಲಿ ನೋವು, ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ ಬರಬಹುದು.

ದೇಹದಲ್ಲಿ ನೋವು ಮತ್ತು ಸೆಳೆತ

ಹಾರ್ಮೋನುಗಳ ಬದಲಾವಣೆಯಿಂದಾಗಿಯೇ ಮುಟ್ಟಿನ ಸಮಯದಲ್ಲಿ ಮಹಿಳೆಯರು ನೋವು ಮತ್ತು ಸೆಳೆತವನ್ನು ಅನುಭವಿಸುತ್ತಾರೆ.

ಈ ಅವಧಿಯಲ್ಲಿ, ಹಣ್ಣು, ತರಕಾರಿ ಮತ್ತು ಧಾನ್ಯಗಳನ್ನು ತಿನ್ನಬೇಕು. ಇವುಗಳ ಸೇವನೆಯಿಂದ ಹಾರ್ಮೋನ್ ಬದಲಾವಣೆಗಳು ಸಮತೋಲನದಲ್ಲಿರುತ್ತವೆ. ದೇಹದಲ್ಲಿ ನೀರಿನ ಪ್ರತಿರೋಧವನ್ನು ಕಡಿಮೆ ಮಾಡಲು ಋತುಚಕ್ರದ ಸಮಯದಲ್ಲಿ ಸಾಕಷ್ಟು ನೀರು ಕುಡಿಯಿರಿ. ಇದು ದೇಹದಲ್ಲಿನ ಊತವನ್ನು ಕಡಿಮೆ ಮಾಡುತ್ತದೆ.

ಮುಟ್ಟಿನ ಸಮಯದಲ್ಲಿ ಪ್ರತಿದಿನ ಲಘು ವ್ಯಾಯಾಮ ಮಾಡಬೇಕು. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಕಾಲು ನೋವು ಕಡಿಮೆಯಾಗುತ್ತದೆ. ಪ್ರತಿದಿನ ಯೋಗ, ಧ್ಯಾನ ಮತ್ತು ಉಸಿರಾಟದ ವ್ಯಾಯಾಮಗಳನ್ನು ಮಾಡಬೇಕಯ. ಇದು ಪಿರಿಯಡ್ಸ್ ಸಮಯದಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...