alex Certify ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ರನ್​ ಸಂಪಾದಿಸಿದ ಟೀಂ ಇಂಡಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ರನ್​ ಸಂಪಾದಿಸಿದ ಟೀಂ ಇಂಡಿಯಾ

88 ವರ್ಷಗಳ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಭಾರತ ಅತಿ ಕಡಿಮೆ ಅಂದರೆ 36 ರನ್​ಗಳಿಗೆ 9 ವಿಕೆಟ್​ಗಳನ್ನ ಕಳೆದುಕೊಂಡು ಡಿಕ್ಲೇರ್​ ಮಾಡಿಕೊಳ್ಳುವ ಮೂಲಕ ಕಳಪೆ ಪ್ರದರ್ಶನ ತೋರಿದೆ. 1974ರಲ್ಲಿ ಇಂಗ್ಲೆಂಡ್​ ವಿರುದ್ಧ 42 ರನ್​ ಗಳಿಸಿದ ಬಳಿಕ ಇದೇ ಭಾರತದ ಅತ್ಯಂತ ಕಡಿಮೆ ಸ್ಕೋರ್​ ಆಗಿದೆ.

ಅಡಿಲೇಡ್​ ಅಂಗಳದಲ್ಲಿ ಕಾಂಗರೂಗಳ ದಾಳಿಗೆ ಧೂಳೀಪಟವಾದ ಟೀಂ ಇಂಡಿಯಾ ಪಂದ್ಯ ಮುಕ್ತಾಯಕ್ಕೆ ಇನ್ನು ಮೂರು ದಿನ ಬಾಕಿ ಇದೆ ಅನ್ನೋವಾಗಲೇ ಆಸ್ಟ್ರೇಲಿಯಾ ವಿರುದ್ಧ ಶರಣಾಗಿದೆ. ಈ ಮೂಲಕ ಆಸ್ಟ್ರೇಲಿಯಾ ಟೆಸ್ಟ್​ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮೊದಲೇ ಆಸ್ಟ್ರೇಲಿಯಾ ದಾಳಿಯಿಂದ ಕಂಗೆಟ್ಟಿದ್ದ ಟೀಂ ಇಂಡಿಯಾಗೆ ಹೇಝಲ್​ವುಡ್​ ಐದು ವಿಕೆಟ್​ಗಳನ್ನ ಪಡೆಯುವಲ್ಲಿ ಯಶಸ್ವಿಯಾದ್ರು. ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ ಪ್ಯಾಟ್​ ಕಮಿನ್ಸ್ ಕೇವಲ 21 ರನ್​ಗಳನ್ನ ನೀಡಿ ನಾಲ್ಕು ವಿಕೆಟ್​ಗಳನ್ನ ಕಬಳಿಸಿದ್ರು.

90 ರನ್​ಗಳ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ಕೇವಲ 2 ವಿಕೆಟ್​ ನಷ್ಟಕ್ಕೆ 93 ರನ್​​ ಗಳಿಸಿ ಗೆಲುವಿನ ನಗೆ ಬೀರಿತು. 1947ರಲ್ಲಿ ಬ್ರಿಸ್ಬಾನೆಯಲ್ಲಿ ನಡೆದ ಪಂದ್ಯದಲ್ಲೂ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಕೇವಲ 58 ರನ್​ ಗಳಿಸುವಲ್ಲಿ ಯಶಸ್ವಿಯಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...