alex Certify 40 ದಿನಗಳ ಕಾಲ ಕೇವಲ ಕಿತ್ತಳೆ ಹಣ್ಣಿನ ಜ್ಯೂಸ್‌ ಮಾತ್ರ ಕುಡಿದಿದ್ದಾಳೆ ಮಹಿಳೆ, ಇಲ್ಲಿದೆ ಈ ಪ್ರಯೋಗದ ಎಫೆಕ್ಟ್‌ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

40 ದಿನಗಳ ಕಾಲ ಕೇವಲ ಕಿತ್ತಳೆ ಹಣ್ಣಿನ ಜ್ಯೂಸ್‌ ಮಾತ್ರ ಕುಡಿದಿದ್ದಾಳೆ ಮಹಿಳೆ, ಇಲ್ಲಿದೆ ಈ ಪ್ರಯೋಗದ ಎಫೆಕ್ಟ್‌ !

ಆಸ್ಟ್ರೇಲಿಯಾದ ಮಹಿಳೆಯೊಬ್ಬಳು ಹೊಸಬಗೆಯ ಡಯಟ್‌ ಮೂಲಕ ಸುದ್ದಿ ಮಾಡಿದ್ದಾಳೆ. ಕ್ವೀನ್ಸ್‌ಲ್ಯಾಂಡ್‌ನ ನಿವಾಸಿ ಅನ್ನೆ ಓಸ್ಬೋರ್ನ್ ಎಂಬಾಕೆ 40 ದಿನಗಳ ಕಾಲ ಕೇವಲ ಕಿತ್ತಳೆ ರಸವನ್ನು ಕುಡಿದಿದ್ದಾಳೆ. ಈ ಮಹಿಳೆ ಕ್ರಿಶ್ಚಿಯನ್ ಧರ್ಮದ ಪವಿತ್ರ ಸಮಯವಾದ ಲೆಂಟ್ ಸಮಯದಲ್ಲಿ ಅವರು ಈ ಪ್ರಯೋಗ ಮಾಡಿದಳು.

ಆನ್‌ಲೈನ್‌ನಲ್ಲಿ ಈ ಕುರಿತ ವಿಡಿಯೋ ಪೋಸ್ಟ್‌ ಮಾಡಿರುವ ಅನ್ನಿ ಓಸ್ಬೋರ್ನ್, ತನಗಾದ ಅನುಭವವನ್ನು ಅದ್ಭುತ ಎಂದು ವಿವರಿಸಿದ್ದಾರೆ. ಇದು ಅವರಿಗೆ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳನ್ನು ಒದಗಿಸಿದೆಯಂತೆ.

ಹಣ್ಣುಗಳನ್ನು ಮಾತ್ರ ತಿನ್ನುವುದು ಅವರ ದೀರ್ಘಕಾಲದ ಆಹಾರ ಕ್ರಮ, ಹಾಗಾಗಿ ಕೇವಲ ಕಿತ್ತಳೆ ರಸವನ್ನು ಕುಡಿಯುವುದು ಅದಕ್ಕೆ ಹೊಂದಿಕೆಯಾಗುತ್ತದೆ.ಈ ಅನುಭವವು ಹಣ್ಣುಗಳ ವೈವಿಧ್ಯತೆಯನ್ನು ಪ್ರಶಂಸಿಸಲು ಸಹಾಯ ಮಾಡಿದೆಯಂತೆ.

ಕಿತ್ತಳೆ ರಸವು ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ಕೆಲವು ಪ್ರಯೋಜನಗಳನ್ನು ಹೊಂದಿದೆ. ಆದರೆ 40 ದಿನಗಳ ಕಾಲ ಕೇವಲ ಕಿತ್ತಳೆ ರಸವನ್ನು ಮಾತ್ರ ಸೇವನೆ ಮಾಡುವುದು ಅಪಾಯಕಾರಿ. ವೈದ್ಯರು ಮತ್ತು ಆಹಾರ ತಜ್ಞರ ಪ್ರಕಾರ ಹಣ್ಣುಗಳನ್ನು ಮಾತ್ರ ಸೇವಿಸುವುದರಿಂದ ದೀರ್ಘಾವಧಿಯಲ್ಲಿ ಆರೋಗ್ಯಕರವಾಗಿರಲು ಅಗತ್ಯವಾದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.

ಹಣ್ಣುಗಳು ನೈಸರ್ಗಿಕ ಸಕ್ಕರೆ, ವಿಟಮಿನ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುತ್ತವೆ. ಆದ್ದರಿಂದ ಸೀಮಿತ ಪ್ರಮಾಣದಲ್ಲಿ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಹಣ್ಣುಗಳನ್ನು ಮಾತ್ರ ತಿನ್ನುವುದು ಅಥವಾ ಹೆಚ್ಚು ಹಣ್ಣುಗಳನ್ನು ತಿನ್ನುವುದು ಸರಿಯಲ್ಲ. ಇದರಿಂದ ತೂಕ ಹೆಚ್ಚಾಗುತ್ತದೆ. ಮಧುಮೇಹದ ಅಪಾಯ ಮತ್ತು ದೇಹದಲ್ಲಿ ವಿಟಮಿನ್ ಬಿ 12, ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಕೊರತೆ ಕೂಡ ಆಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...