alex Certify ಭಾರತದಲ್ಲಿ ನಿಷೇಧವಾಗುತ್ತಾ ಕ್ರಿಪ್ಟೋ ಕರೆನ್ಸಿ…? ಇಲ್ಲಿದೆ ಒಂದಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ನಿಷೇಧವಾಗುತ್ತಾ ಕ್ರಿಪ್ಟೋ ಕರೆನ್ಸಿ…? ಇಲ್ಲಿದೆ ಒಂದಷ್ಟು ಮಾಹಿತಿ

ಕ್ರಿಪ್ಟೋ ಕರೆನ್ಸಿ ವಿಷಯ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಸರ್ಕಾರದ ನಿಯಂತ್ರಣದಲ್ಲಿ ಇಲ್ಲದಂತೆ ನಡೆಯುತ್ತಿರುವ ಕ್ರಿಪ್ಟೋ ಕರೆನ್ಸಿಯ ಬಗ್ಗೆ ನಿಯಂತ್ರಣ ಹಾಕುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.

ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಕ್ರಿಪ್ಟೋ ಫೈನಾನ್ಸ್: ಅವಕಾಶಗಳು, ಸವಾಲುಗಳು ಎಂಬ ವಿಷಯದ ಕುರಿತು ಉದ್ಯಮ ತಜ್ಞರೊಂದಿಗೆ ಸಭೆ ನಡೆಸಿದೆ.

ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಜಯಂತ್ ಸಿನ್ಹಾ ನೇತೃತ್ವದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಸಭೆ ನಡೆದಿದೆ. ಮೂಲಗಳ ಪ್ರಕಾರ ದಾರಿತಪ್ಪಿಸುವ ಜಾಹೀರಾತುಗಳ ಬಗ್ಗೆ ಕಳವಳ ವ್ಯಕ್ತವಾಗಿದೆ ಮತ್ತು ಇದನ್ನು ನಿಲ್ಲಿಸಬೇಕಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ಕೇಳಿಬಂದಿದೆ.

ನಿಮ್ಮ ಮೊಬೈಲ್ ನಲ್ಲೂ ಇದ್ಯಾ ಈ ಅಪ್ಲಿಕೇಷನ್……? ಖಾತೆ ಖಾಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳಿ

ಬಿಟ್‌ಕಾಯಿನ್ ಅಥವಾ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಸಾಧ್ಯವಿಲ್ಲ, ಆದರೆ ಅದನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬ ಅಂಶದ ಪರವಾಗಿ ಸರ್ಕಾರವಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಅಭಿಪ್ರಾಯ ನೀಡಿದ ಸಂಸದರು ಮುಂದಿನ ಸಭೆಯಲ್ಲಿ ಹಣಕಾಸು ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ನಿಯಂತ್ರಕರನ್ನು ಕರೆಸಬೇಕು. ಹೂಡಿಕೆದಾರರು ಅಥವಾ ಖರೀದಿದಾರರ ಹಿತಾಸಕ್ತಿಯನ್ನು ರಕ್ಷಿಸಲು ಪ್ರಯತ್ನ ಮಾಡಬೇಕೆಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕ್ರಿಪ್ಟೋಕರೆನ್ಸಿಯ ಮುಂದಿನ ಹಾದಿ ಮತ್ತು ಸಂಬಂಧಿತ ವಿಷಯ ಕುರಿತು ಸಭೆಯ ಅಧ್ಯಕ್ಷತೆ ವಹಿಸಿದ್ದರು, ಇದರಲ್ಲಿ ಅನಿಯಂತ್ರಿತ ಕ್ರಿಪ್ಟೋವನ್ನು ಮನಿ ಲಾಂಡರಿಂಗ್ ಮತ್ತು ಭಯೋತ್ಪಾದಕ ಚಟುವಟಿಕೆಗೆ ಬಳಕೆಯಾಗದಂತೆ ತಡೆಯುವ ಬಗ್ಗೆ ಚರ್ಚಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...