alex Certify ನಿಮ್ಮ ಮೊಬೈಲ್ ನಲ್ಲೂ ಇದ್ಯಾ ಈ ಅಪ್ಲಿಕೇಷನ್……? ಖಾತೆ ಖಾಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮೊಬೈಲ್ ನಲ್ಲೂ ಇದ್ಯಾ ಈ ಅಪ್ಲಿಕೇಷನ್……? ಖಾತೆ ಖಾಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳಿ

ಆನ್ಲೈನ್ ವ್ಯವಹಾರ ಹೆಚ್ಚಾಗ್ತಿದ್ದಂತೆ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅನೇಕ ಅಪ್ಲಿಕೇಷನ್ ಗಳು, ಬಳಕೆದಾರರ ಮೊಬೈಲ್ ನಲ್ಲಿರುವ ಡೇಟಾ ಕಳ್ಳತನ ಮಾಡ್ತಿವೆ. ಈ ವರ್ಷ ಗೂಗಲ್ ಹಲವು ಆ್ಯಪ್‌ಗಳನ್ನು ಬ್ಯಾನ್ ಮಾಡಿದೆ. ಇದೀಗ ಅತ್ಯಂತ ಅಪಾಯಕಾರಿ ಎಂದು ಬಣ್ಣಿಸಲಾದ ಆಪ್ ಗಳನ್ನು ಗೂಗಲ್ ಮತ್ತೆ ಬ್ಯಾನ್ ಮಾಡಿದೆ.

ಮಾಲ್‌ವೇರ್‌ಗಳನ್ನು ಒಳಗೊಂಡಿರುವ ಏಳು ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ಗೂಗಲ್ ತೆಗೆದು ಹಾಕಿದೆ. ಕ್ಯಾಸ್ಪರ್ಸ್ಕಿಯ ಟಟ್ಯಾನಾ ಶಿಶ್ಕೋವಾ, ಜೋಕರ್ ಮಾಲ್ವೇರ್ ಹೈಲೈಟ್ ಮಾಡಿದೆ. ಈ ಏಳು ಅಪ್ಲಿಕೇಶನ್‌ಗಳು ಟ್ರೋಜನ್ ಜೋಕರ್‌ನಂತಹ ಮಾಲ್‌ವೇರ್‌ನಿಂದ ಪ್ರಭಾವಿತವಾಗಿವೆ ಎಂದು ಟಟ್ಯಾನಾ ಕಂಡುಹಿಡಿದಿದೆ.

ವಿಭಿನ್ನ ಉಡುಪು ಧರಿಸಿದ್ದ ಅಮೀರ್ ಕಾಲೆಳೆದ ನೆಟ್ಟಿಗರು: ರಣವೀರ್ ಸಿಂಗ್ ಜೊತೆ ದೋಸ್ತಿಯಾಗಿದೆಯಾ ಎಂದು ಲೇವಡಿ

ಗೂಗಲ್ ಪ್ಲೇ ಸ್ಟೋರ್ ನಿಂದ ಈ ಅಪ್ಲಿಕೇಷನ್ ತೆಗೆದು ಹಾಕಲಾಗಿದೆ. ಆದ್ರೆ ಈಗಾಗಲೇ ಲಕ್ಷಾಂತರ ಜನರು ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಅನೇಕರು ನಿರಂತರವಾಗಿ ಇದನ್ನು ಬಳಕೆ ಮಾಡ್ತಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ನಿಮ್ಮ ಮೊಬೈಲ್ ನಲ್ಲಿ ಈ ಅಪ್ಲಿಕೇಷನ್ ಇದ್ರೆ ಈಗ್ಲೇ ಡಿಲಿಟ್ ಮಾಡಿ.

ಬ್ಯಾನ್ ಆದ ಅಪ್ಲಿಕೇಷನ್ ಗಳು :

Now QRcode Scan  (10,000 ಕ್ಕಿಂತಲೂ ಹೆಚ್ಚು ಬಾರಿ ಇನ್ಸ್ಟಾಲ್ ಆಗಿದೆ.)

EmojiOne Keyboard  (50,000 ಕ್ಕೂ ಹೆಚ್ಚು ಬಾರಿ ಇನ್ಸ್ಟಾಲ್ ಆಗಿದೆ.)

Battery Charging Animations Battery Wallpaper  (1,000 ಕ್ಕಿಂತ ಹೆಚ್ಚು ಬಾರಿ ಡೌನ್ಲೋಡ್ ಆಗಿದೆ.)

Dazzling Keyboard (10 ಕ್ಕಿಂತ ಹೆಚ್ಚು ಡೌನ್ಲೋಡ್ ಆಗಿದೆ.)

Volume Booster Louder Sound Equalizer (100 ಕ್ಕಿಂತ ಹೆಚ್ಚು ಇನ್ಸ್ಟಾಲ್ ಆಗಿದೆ.)

Super Hero-Effect (5,000 ಕ್ಕೂ ಹೆಚ್ಚು ಡೌನ್ಲೋಡ್)

Classic Emoji Keyboard (5,000 ಕ್ಕೂ ಹೆಚ್ಚು ಡೌನ್ಲೋಡ್)

ವಿಡಿಯೋ ಚಾಟ್‌ ವೇಳೆ ಜನರಿಂದ ಹೆಚ್ಚು ಸುಳ್ಳು: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ನಕಲಿ ಚಂದಾದಾರಿಕೆ ಹೆಸರಲ್ಲಿ ಈ ಅಪ್ಲಿಕೇಷನ್ ಗಳು ಗ್ರಾಹಕರನ್ನು ಸೆಳೆಯುತ್ತಿವೆ. ಫೋನ್ ಗೆ ಬರುವ ಯಾವುದೇ ಸಂದೇಶವನ್ನು ನಂಬಬೇಡಿ. ಕೆಲ ಆಮಿಷದ ಸಂದೇಶದೊಂದಿಗೆ ಲಿಂಕ್ ಹಾಕಲಾಗಿರುತ್ತದೆ. ಅದನ್ನು ಕ್ಲಿಕ್ ಮಾಡಿ, ಡೌನ್ಲೋಡ್ ಮಾಡ್ತಿದ್ದಂತೆ ಖಾತೆ ಹಣ ಖಾಲಿಯಾಗುತ್ತದೆ. ಹಾಗಾಗಿ ಬಳಕೆದಾರರು ಹೆಚ್ಚು ಎಚ್ಚರಿಕೆಯಿಂದರಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...