alex Certify ಸಿದ್ಧಾರ್ಥ್​ ಶುಕ್ಲಾ ಸಾವಿನ ಬಳಿಕ ಮೊದಲ ಬಾರಿಗೆ ಕ್ಯಾಮರಾ ಮುಂದೆ ಕಾಣಿಸಿಕೊಂಡ ಶೆಹನಾಜ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ಧಾರ್ಥ್​ ಶುಕ್ಲಾ ಸಾವಿನ ಬಳಿಕ ಮೊದಲ ಬಾರಿಗೆ ಕ್ಯಾಮರಾ ಮುಂದೆ ಕಾಣಿಸಿಕೊಂಡ ಶೆಹನಾಜ್​

ಸಿದ್ಧಾರ್ಥ್​ ಶುಕ್ಲಾ ಸಾವಿನ ಬಳಿಕ ಸಾರ್ವಜನಿಕ ಜೀವನದಿಂದ ದೂರವೇ ಉಳಿದಿದ್ದ ನಟಿ ಶೆಹನಾಜ್​ ಗಿಲ್​​ ತಮ್ಮ ಮುಂಬರುವ ಸಿನಿಮಾ ಹೊಸ್ಲಾ ರಖ್​​​ಗಾಗಿ ಮೊದಲ ಬಾರಿಗೆ ಸೋಶಿಯಲ್​​ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್​ಸ್ಟಾಗ್ರಾಂ ರೀಲ್​ನಲ್ಲಿ ಶೆಹನಾಜ್​ ಗಿಲ್​​ ಸಹನಟ ದಿಲ್ಜಿತ್​​ ಡೋಸಾಂಜ್​ ಹಾಗೂ ಸೋನಮ್​ ಬಜ್ವಾ ಜೊತೆ ಮಸ್ತಿ ಮಾಡಿದ್ದಾರೆ.

ಎದೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಗೆ ಕಾದಿತ್ತು ಶಾಕ್​…..!

ಈ ವಿಡಿಯೋವನ್ನು ದಿಲ್ಜಿತ್​ ತಮ್ಮ ಇನ್​ಸ್ಟಾಗ್ರಾಂನ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಸಿನಿಮಾದ ಟ್ರೇಲರ್​ನ ಸಾಲಿಗೆ ಇವರು ರೀಲ್ಸ್​ ಮಾಡಿದ್ದಾರೆ.
ಎಕ್ಸ್​ಕ್ಯೂಸ್​ ಮಿ ಸರ್​, ನಿಮ್ಮ ಮಗುವನ್ನು ಸುಮ್ಮನಿರಿಸಿ. ನಿಮ್ಮ ಮಗುವಿನಿಂದಾಗಿ ನಮ್ಮ ಮಗುವಿನ ರೊಮ್ಯಾನ್ಸ್​​ ಹಾಳಾಗುತ್ತಿದೆ ಎಂದು ದಿಲ್ಜಿತ್​ ಪಂಜಾಬಿ ಭಾಷೆಯಲ್ಲಿ ಹೇಳುತ್ತಾರೆ. ಸೋನಮ್​ ಜೊತೆಯಲ್ಲಿ ಕುಳಿತು ದಿಲ್ಜೀತ್​ ಈ ಡೈಲಾಗ್​ನ್ನು ಹೇಳಿದ್ದಾರೆ. ಈ ವೇಳೆಗೆ ಆಟಿಕೆ ಗೊಂಬೆಯನ್ನು ಕೈಯಲ್ಲಿ ಹಿಡಿದು ಬಂದ ಶೆಹನಾಜ್​, ನಾನು ಅವನನ್ನು ಪ್ರೀತಿಸುತ್ತೇನೆ ಆದರೆ ಆತ ನನಗೆ ಹೀಗೆ ಮಾಡಿದ ಎಂದು ಹೇಳಿದ್ದಾರೆ.

ಬಳಿಕ ಸೋನಮ್​ ಹಾಗೂ ಶೆಹನಾಜ್​ ಇಬ್ಬರೂ ಸೇರಿ ದಿಲ್ಜಿತ್​​ಗೆ ಹೊಡೆಯುತ್ತಾರೆ, ಈ ವಿಡಿಯೋ ಮಾಡುವ ಭರದಲ್ಲಿ ಶೆಹನಾಜ್​ ಆಯತಪ್ಪುವುದನ್ನೂ ನೀವು ಕಾಣಬಹುದಾಗಿದೆ.

ನಟ ಸೋನು ಸೂದ್ ​ಗಾಗಿ ಮತ್ತೊಂದು ದೇಗುಲ ನಿರ್ಮಾಣ

ಈ ವಿಡಿಯೋ ನೋಡಿದ ನೆಟ್ಟಿಗರು ಶೆಹನಾಜ್​​ ಗಿಲ್​​ಗೆ ಪ್ರೀತಿಪೂರ್ವಕವಾಗಿ ಕಮೆಂಟ್​ ಮಾಡಿದ್ದಾರೆ. ಇಷ್ಟು ದಿನಗಳ ಬಳಿಕ ಮತ್ತೆ ನಿಮ್ಮನ್ನು ನೋಡ್ತಿರೋದಕ್ಕೆ ಖುಷಿಯಾಗ್ತಿದೆ ಎಂದು ಅನೇಕರು ಹೇಳಿದ್ದರೆ ಇನ್ನು ಕೆಲವರು ನೋವನ್ನು ಮನಸ್ಸಿನೊಳಗೆ ಇಟ್ಟು ನಮ್ಮ ಖುಷಿಪಡಲು ಯತ್ನಿಸುತ್ತಿದ್ದೀರಾ ಎಂದು ಹೇಳಿದ್ದಾರೆ.

https://www.instagram.com/reel/CUwC6oTgttO/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...