alex Certify ಗೆದ್ದ ಪ್ರಶಸ್ತಿಯನ್ನು ದಿವಂಗತ ಗೆಳೆಯನಿಗೆ ಅರ್ಪಿಸಿದ ನಟಿ ಶೆಹನಾಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆದ್ದ ಪ್ರಶಸ್ತಿಯನ್ನು ದಿವಂಗತ ಗೆಳೆಯನಿಗೆ ಅರ್ಪಿಸಿದ ನಟಿ ಶೆಹನಾಜ್

ಕಾರ್ಯಕ್ರಮವೊಂದರಲ್ಲಿ ಗೆದ್ದ ಪ್ರಶಸ್ತಿಯನ್ನು ನಟಿ ಶೆಹನಾಜ್ ಗಿಲ್ ತನ್ನ ಗೆಳೆಯ ಮತ್ತು ದಿವಂಗತ ನಟ ಸಿದ್ಧಾರ್ಥ್ ಶುಕ್ಲಾ ಅವರಿಗೆ ಅರ್ಪಿಸಿದ್ದಾರೆ. ಶನಿವಾರ ದುಬೈನಲ್ಲಿ ನಡೆದ ಫಿಲ್ಮ್‌ಫೇರ್ ಮಿಡಲ್ ಈಸ್ಟ್ ಅಚೀವರ್ಸ್ ನೈಟ್‌ನಲ್ಲಿ ಶೆಹನಾಜ್ ಭಾಗವಹಿಸಿದ್ದರು. ರೈಸಿಂಗ್ ಸ್ಟಾರ್ ಆಫ್ ಬಾಲಿವುಡ್ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ನಟಿ ಶೆಹನಾಜ್ ಗಿಲ್ ದಿವಂಗತ ನಟ ಸಿದ್ಧಾರ್ಥ್ ಶುಕ್ಲಾಗೆ ಅರ್ಪಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವೈರಲ್ ಕ್ಲಿಪ್‌ನಲ್ಲಿ, ಶೆಹನಾಜ್ ನಾನು ಈ ಪ್ರಶಸ್ತಿಯನ್ನು ನನ್ನ ಕುಟುಂಬಕ್ಕಾಗಲೀ, ಸ್ನೇಹಿತರು ಅಥವಾ ತಂಡಕ್ಕೆ ಅರ್ಪಿಸುವುದಿಲ್ಲ. ಏಕೆಂದರೆ ಇದು ನನ್ನ ಕಠಿಣ ಕೆಲಸ. ಇನ್ನೊಂದು ವಿಷಯ, ನಾನು ಒಬ್ಬರಿಗೆ ಧನ್ಯವಾದ ಹೇಳಬೇಕು. ನನ್ನ ಜೀವನದಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು. ನೀವು ನನಗಾಗಿ ತುಂಬಾ ಮಾಡಿದ್ದೀರಿ. ಇಂದು ನಾನು ಇಲ್ಲಿಗೆ ತಲುಪಿದ್ದೇನೆ. ಸಿದ್ಧಾರ್ಥ್ ಶುಕ್ಲಾ, ಇದು ನಿಮಗಾಗಿ .” ಎಂದು ಪ್ರಶಸ್ತಿಯನ್ನು ಸಿದ್ಧಾರ್ಥ್ ಶುಕ್ಲಾಗೆ ಅರ್ಪಿಸುತ್ತಿದ್ದಂತೆ ವೇದಿಕೆಯ ಸುತ್ತ ದೊಡ್ಡ ಹರ್ಷೋದ್ಗಾರ ಕೇಳಿಬಂತು.

ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ತಕ್ಷಣ, ಅಭಿಮಾನಿಗಳು ತುಂಬಾ ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ.

40 ವರ್ಷದ ಸಿದ್ಧಾರ್ಥ್ ಶುಕ್ಲಾ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಸಿದ್ಧಾರ್ಥ್ ಮತ್ತು ಶೆಹನಾಜ್ ಗಿಲ್ ಬಿಗ್ ಬಾಸ್ 13 ರಲ್ಲಿದ್ದಾಗ ತುಂಬಾ ಆಪ್ತರಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...