alex Certify ಪಾಕ್ ಜೈಲಿನಲ್ಲಿ 12 ವರ್ಷ ಕಳೆದು ತವರಿಗೆ ಮರಳಿದ ಉತ್ತರ ಪ್ರದೇಶ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್ ಜೈಲಿನಲ್ಲಿ 12 ವರ್ಷ ಕಳೆದು ತವರಿಗೆ ಮರಳಿದ ಉತ್ತರ ಪ್ರದೇಶ ಯುವಕ

ಪಾಕಿಸ್ತಾನದ ಲಾಹೋರ್‌ ಜೈಲೊಂದರಲ್ಲಿ 12 ವರ್ಷ ಕಳೆದಿದ್ದ ಉತ್ತರ ಪ್ರದೇಶದ ರಾಮ್ ಬಹದ್ದೂರ್‌ ಎಂಬ ವ್ಯಕ್ತಿ ಕೊನೆಗೂ ತಮ್ಮ ಮನೆಗೆ ಮರಳಿದ್ದಾರೆ.

ಗಿಲ್ಲಾ ಪ್ರಜಾಪತಿ ಹಾಗೂ ಕುಸುಮಾ ದೇವಿ ದಂಪತಿಗಳ ಮಗನಾದ ರಾಮ್ ಬಹದ್ದೂರ್‌ 12 ವರ್ಷಗಳ ಹಿಂದೆ ಕೆಲಸ ಅರಸಿ ಮನೆ ಬಿಟ್ಟಿದ್ದಾರೆ. ಕೆಲ ದಿನಗಳ ಬಳಿಕ ರಾಮ್ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡುತ್ತಾ ಕಾಶ್ಮೀರದಲ್ಲಿರುವುದು ಆತನ ಹೆತ್ತವರಿಗೆ ತಿಳಿದುಬಂದಿದೆ. ಮನೆ ಬಿಟ್ಟಾಗ ರಾಮ್‌ಗೆ ಬರೀ 15 ವರ್ಷ ವಯಸ್ಸಾಗಿತ್ತು.

ಇದಾದ ಬಳಿಕ ರಾಮ್‌ ಬಗ್ಗೆ ಆತನ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ತಮ್ಮ ಪುತ್ರ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಬಹಳ ದಿನಗಳ ಬಳಿಕವೂ ಆತನ ಸುಳಿವೇ ಸಿಗದಿದ್ದಾಗ, ರಾಮ್ ಅಪಘಾತದಲ್ಲಿ ಮೃತಪಟ್ಟಿರಬೇಕೆಂದುಕೊಂಡು ಆತನ ಆಸೆಯನ್ನೇ ಕೈಬಿಟ್ಟಿತ್ತು ಕುಟುಂಬ.

ಸುಳ್ಳು ಹೇಳಿ ಮೂವರನ್ನು ಮದುವೆಯಾಗಿದ್ದ ಪತಿ ಅಂದರ್…!

ಆದರೆ ಈ ವರ್ಷದ ಏಪ್ರಿಲ್‌ನಲ್ಲಿ ರಾಮ್ ಮನೆಗೆ ಆಗಮಿಸಿದ್ದ ಪೊಲೀಸ್ ತಂಡ ಹಾಗೂ ಗುಪ್ತಚರ ಅಧಿಕಾರಿಗಳು ಆತ ಪಾಕಿಸ್ತಾನದ ಜೈಲೊಂದರಲ್ಲಿ ಇರುವುದಾಗಿ ತಿಳಿಸಿದ್ದು, ಆತನ ಮನೆಯ ಬಗ್ಗೆ ಖಾತ್ರಿ ಮಾಡಿಕೊಳ್ಳಲು ಆಗಮಿಸಿದ್ದಾಗಿ ತಿಳಿಸಿದ್ದಾರೆ. ಅಮೃತಸರ ಜಿಲ್ಲಾಡಳಿತದಿಂದ ಈ ವಿಚಾರ ಅರಿತ ಅಧಿಕಾರಿಗಳು ರಾಮ್ ಮನೆಗೆ ಪರಿಶೀಲನೆಗಾಗಿ ಬಂದಿದ್ದರು.

ಆಗಸ್ಟ್‌ 30ರಂದು ಪಾಕಿಸ್ತಾನಿ ಅಧಿಕಾರಿಗಳು ರಾಮ್‌ನನ್ನು ಬಂಧಮುಕ್ತಗೊಳಿಸಿದ್ದಾರೆ. ಈತನನ್ನು ಸ್ವೀಕರಿಸಿದ ಅಮೃತಸರ ಜಿಲ್ಲಾಡಳಿತ ಆತನನ್ನು ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿತ್ತು. ರಾಮ್ ಬಹದ್ದೂರ್‌ನ ನಿವಾಸದ ವಿವರಗಳನ್ನು ಖಾತ್ರಿ ಪಡಿಸಿಕೊಂಡ ಬಳಿಕ ಆತನನ್ನು ತನ್ನ ಮನೆಗೆ ತೆರಳಲು ಬಿಡಲಾಗಿದೆ.

ವಿಡಿಯೋ ಕರೆ ಮೂಲಕ ರಾಮ್‌ನನ್ನು ಕುಟುಂಬಸ್ಥರು ಗುರುತಿಸಿದ ಬಳಿಕ ಆತನನ್ನು ಅಮೃತಸರದಿಂದ ಕರೆದೊಯ್ಯಲು ಬಂದಾ ಪ್ರದೇಶದ ಅಧಿಕಾರಿಗಳು ಅಲ್ಲಿಗೆ ಹೋಗಿದ್ದರು.

ಸದ್ಯಕ್ಕೆ ರಾಮ್ ಸ್ಥಿಮಿತತೆ ಕಳೆದುಕೊಂಡಿದ್ದು, ಆತ ಪಾಕಿಸ್ತಾನಕ್ಕೆ ಹೋಗಿದ್ದು ಹೇಗೆ ಎಂಬುದು ತಿಳಿಯದಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...