alex Certify ತಿಳಿದುಕೊಳ್ಳಿ “ದೇವರ ಮನೆ ಮತ್ತು ಪೂಜೆ” ಯ ನಿಯಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿಳಿದುಕೊಳ್ಳಿ “ದೇವರ ಮನೆ ಮತ್ತು ಪೂಜೆ” ಯ ನಿಯಮಗಳು

೧. ದೇವರ ಮನೆ, ದೀಪಗಳು , ದೇವರ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತದೋ ಅಷ್ಟೂ ಶುಭಫಲವಿರುತ್ತದೆ.

೨. ದೇವರ ಮನೆಯಲ್ಲಿ ಒಡೆದಿರುವ, ಭಿನ್ನವಾಗಿರುವ, ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬೇಡಿ..

೩. ದೇವರ ಮನೆಯಲ್ಲಿ ಗುಡಿಸೋ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು.

೪. ದೇವರ ಮನೆಯನ್ನು ಅರಿಸಿನ ಅಥವಾ ಗೋಮಯ ಹಾಕಿದ ನೀರಿನಿಂದ ಶುದ್ಧ ಮಾಡಿ,
ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ..

೫. ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಬೇಡ, ವಿಗ್ರಹಗಳು ಜಾಸ್ತಿಯಾದರೆ “ನೈವೇದ್ಯ “ದ ಪ್ರಮಾಣವೂ ಜಾಸ್ತಿ ಮಾಡಬೇಕಾಗುವುದು..

೬. ತುಂಬಾ ಎತ್ತರದ ಪಂಚ ಲೋಹದ ಅಥವ ಶಿಲಾ ವಿಗ್ರಹಗಳು ಬೇಡ, ಅಕಸ್ಮಾತ್ತಾಗಿ ಇದ್ದರೆ ಪ್ರತಿದಿನ ನೈವೇದ್ಯ ಮಾಡಬೇಕಾಗುವುದು..

೭. ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ , ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ..
(ಅನಿವಾರ್ಯ ಪರಿಸ್ಥತಿಗಳಲ್ಲಿ, ಗ್ರಹಣ ಕಾಲದಲ್ಲಿ, ಇತ್ಯಾದಿ ಸಮಯದಲ್ಲಿ ಮಾಡಬಹುದು)

೮. ತಿಂಗಳಿಗೊಮ್ಮೆ (ಅಮಾವಾಸ್ಯೆ ಮತ್ತು ಪೌರ್ಣಾಮಿಯ ಮರುದಿನ) ದೇವರ ವಿಗ್ರಹಗಳನ್ನು ” ನೀರಿನಿಂದ (ಅರಿಸಿನ) ಶುದ್ಧ ಮಾಡಿ..

೯. ದೇವರ ಪೂಜೆಗೆ ವಿಷ್ಣು ಸಹಸ್ರನಾಮ; ರಾಮರಕ್ಷಾ ಇತ್ಯಾದಿ ಸ್ತೋತ್ರ ಪಠಣ ಮಾಡುವುದು ಉತ್ತಮ

೧೦. ದೇವರ ಪೂಜೆ ಮಾಡೋವಾಗ ಆಕಳಿಕೆ ,ಕೋಪ, ಇವೆಲ್ಲದರಿಂದ ದೂರ ಇರಿ, ಅನಗತ್ಯ ಚಟುವಟಿಕೆಗಳು ಬೇಡ..

೧೧. ಆಗಾಗೆ ಕುಲದೇವರ; ಇಷ್ಟದೇವರ;ಆರಾಧಿಸಿಕೊಂಡು ಬಂದಿರುವ(ಗ್ರಾಮದೇವರ);ದೈವಗಳ ಸ್ಮರಣೆ; ಸಂದರ್ಶಿಸುವುದು ಉತ್ತಮ.

೧೨. ದೇವರ ಪೂಜೆಯ ಸಮಯದಲ್ಲಿ ಪುರುಷರು ಮೇಲುಹೊದಿಕೆ ಅಂದರೆ ಶಲ್ಯವನ್ನು ಧರಿಸಿರಲೇಬೇಕು..
ಬರೀ ಮೈಯಲ್ಲಿ ಕುಳಿತು ಪೂಜೆ ಮಾಡುವುದು, ಊಟ ಮಾಡುವುದು ಒಳಿತಲ್ಲ..

೧೩. ಹಣೆಯಲ್ಲಿ ಕುಂಕುಮ, ಗಂಧ, ಗೋಪಿಚಂದನ ಇತ್ಯಾದಿ ಯಾವುದದಾರೂ ಧರಿಸದೇ ಪೂಜೆ ಮಾಡಬಾರದು..
ಧರಿಸಿಯೇ ಪೂಜೆ ಮಾಡಬೇಕು,

೧೪. ದೇವರ ನೈವೇದ್ಯ ಮಾಡೋವಾಗ ವೀಳ್ಯದೆಲೆ, ಅಡಿಕೆ ತಾಂಬೂಲ,
ತುಳಸೀಪತ್ರೆಯನ್ನು ಬಳಸಬೇಕು..

೧೫. ದೇವರ ಪೂಜೆಗಳು ಸಂಕಲ್ಪ ಇಲ್ಲದೇ ಮಾಡಬೇಡಿ, ಸಂಕಲ್ಪ ಇದ್ದರೆ ನಿಮ್ಮ ಪ್ರಾರ್ಥನೆಗಳು ಬೇಗ ಈಡೇರುತ್ತವೆ..

೧೬. ಮನೆಯ ಹೊಸ್ತಿಲನ್ನು ಪೊರಕೆಯಿಂದ ಗುಡಿಸಬೇಡಿ, ಹೊಸ್ತಿಲಲ್ಲಿ “ಮಹಾಲಕ್ಷ್ಮೀ” ಸಾನಿಧ್ಯ ಇರುತ್ತದೆ..

೧೭.”ಶ್ರೀ ಚಕ್ರ” , ಬಲಮುರಿ ಶಂಖ, ಬಲಮುರಿ ಗಣೇಶ, ಸಾಲಿಗ್ರಾಮಗಳು, .. ಇತ್ಯಾದಿಗಳ ಪೂಜೆಗೆ ತುಂಬಾ ವಿಶೇಷ ನಿಯಮವಿರುತ್ತದೆ..ಇವುಗಳನ್ನು ತಿಳಿದುಕೊಂಡು ಮಾಡುವುದು ಒಳ್ಳೆಯದು.

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕ ಚಿಂತಕರು, ಜೋತಿಷ್ಯ ಸಲಹೆಗಾರರು
ಮೊಬೈಲ್:‌ 85489 98564

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...