alex Certify ಸುಳ್ಳು ಹೇಳಿ ಮೂವರನ್ನು ಮದುವೆಯಾಗಿದ್ದ ಪತಿ ಅಂದರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಳ್ಳು ಹೇಳಿ ಮೂವರನ್ನು ಮದುವೆಯಾಗಿದ್ದ ಪತಿ ಅಂದರ್…!

ಉತ್ತರ ಪ್ರದೇಶದ ಮೀರತ್​ ಕಂಟೋನ್ಮೆಂಟ್​​ಗೆ ನೇಮಕವಾಗಿದ್ದ ಯೋಧ ಮೂವರನ್ನು ಮದುವೆಯಾಗಿದ್ದ ಕಾರಣಕ್ಕೆ ಜೈಲುಪಾಲಾಗಿದ್ದಾರೆ. ಬಂಧಿತ ಯೋಧನನ್ನು ಮನೀಶ್​ ಕುಮಾರ್​ ಎಂದು ಗುರುತಿಸಲಾಗಿದೆ.

ಮೊದಲನೇ ಪತ್ನಿ ಜೀವಂತ ಇರುವಾಗಲೇ ಮನೀಶ್​ ಮೋಸದಿಂದ ಇನ್ನಿಬ್ಬರನ್ನು ಮದುವೆ ಆಗಿದ್ದರು. ಆದರೆ ಇವರ ಕಳ್ಳಾಟ ಆಗಸ್ಟ್​ 27ರಂದು ಬೆಳಕಿಗೆ ಬಂದಿದೆ.

ಹೀಗಾಗಿ ಮೂವರು ಪತ್ನಿಯರು ಪೊಲೀಸ್​ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ.

ಮನೀಶ್​ ಕುಮಾರ್​ 2ನೇ ಪತ್ನಿ ದೂರು ದಾಖಲಿಸಿದ ಬಳಿಕ ಪೊಲೀಸರು ಮನೀಶ್​ರನ್ನು ಬಂಧಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಮನೀಶ್​ರ ಮೂರನೇ ಪತ್ನಿ ಕೂಡ ಗರ್ಭಿಣಿಯಾಗಿದ್ದರು ಎನ್ನಲಾಗಿದೆ.

ಹರಿಯಾಣದ ಕುರುಕ್ಷೇತ್ರ ನಿವಾಸಿಯಾಗಿದ್ದ ಮನೀಶ್​ ಕುಮಾರ್​​ ಭಾರತೀಯ ಸೇನೆಯಲ್ಲಿ ಹವಾಲ್ದಾರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲ ಪತ್ನಿ ತಮ್ಮ ಮಕ್ಕಳ ಜೊತೆ ಪತಿಯ ಮನೆಯಲ್ಲಿ ವಾಸವಿದ್ದಾರೆ.

ಶೀಲಾ ಸಿಂಗ್​​ ಎಂಬವರು ಕಂಕಾರ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಪ್ರಕಾರ ನಾನು ಮನೀಶ್​ರನ್ನು ಹೈದರಾಬಾದ್​ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದೆ. 2014ರಲ್ಲಿ ನಾನು ಹಾಗೂ ಮನೀಶ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೆವು. 2016ರಲ್ಲಿ ನಾನು ಗರ್ಭ ಧರಿಸಿದ್ದೆ ಆದರೆ ಮನೀಶ್​ ಕೆಟ್ಟದಾಗಿ ವರ್ತಿಸಿದ್ದರಿಂದ ತಾವು ಗರ್ಭಪಾತ ಮಾಡಿಸಿಕೊಂಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

2018ರಲ್ಲಿ ಮನೀಶ್​ ತಾನು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನೆಪವೊಡ್ಡಿ ಭೂಗತನಾಗಿದ್ದ. ಆದರೆ ಶೀಲಾ 2019ರಲ್ಲಿ ಮೀರತ್​ನಲ್ಲಿ ಮನೀಶ್​ರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆಗ ಮನೀಶ್​ 510 ಆರ್ಮಿ ಬೇಸ್​​ ಕಾರ್ಯಾಗಾರದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಇದಾದ ಬಳಿಕ ಶೀಲಾ ಹಾಗೂ ಮನೀಶ್​ ಬಾಡಿಗೆ ಮನೆಯಲ್ಲಿ ವಾಸಿಸಲು ಆರಂಭಿಸಿದರು. ಈ ವೇಳೆ ಶೀಲಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದಾದ ಬಳಿಕ ಶೀಲಾಗೆ ಮನೀಶ್, ಚಾಂದನಿ ಅನ್ಸಾರಿ ಎಂಬವರ ಜೊತೆ ವಿವಾಹವಾಗಿ ಶ್ರದ್ಧಾಪುರಿಯಲ್ಲಿ ಸಂಸಾರ ಮಾಡುತ್ತಿದ್ದಾರೆ ಎಂಬ ವಿಚಾರ ತಿಳಿದಿದೆ.

ಆಗಸ್ಟ್​ 26ರಂದು ಅನ್ಸಾರಿ ಮನೆಗೆ ತೆರಳಿದ ಶೀಲಾ, ಪತಿ ಮನೀಶ್​ ಕಳ್ಳಾಟ ಬಯಲು ಮಾಡಿದ್ದಾರೆ. ಇದಾದ ಬಳಿಕ ಮೂವರೂ ಪೊಲೀಸ್​ ಠಾಣೆಗೆ ತೆರಳಿದ್ದಾರೆ.

ಇವರಲ್ಲಿ ಶೀಲಾ, ಪತಿ ಮನೀಶ್​ ವಿರುದ್ಧ ದೂರನ್ನು ನೀಡಿದ್ದಾರೆ. ಮನೀಶ್​ರನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...