alex Certify ʼಸ್ಪೈಡರ್​ ಮ್ಯಾನ್ʼ​ ಕೈ ಕುಲುಕಿದ ಪೋಪ್​​ ಫ್ರಾನ್ಸಿಸ್.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸ್ಪೈಡರ್​ ಮ್ಯಾನ್ʼ​ ಕೈ ಕುಲುಕಿದ ಪೋಪ್​​ ಫ್ರಾನ್ಸಿಸ್.​..!

ಪೋಪ್​ ಫ್ರಾನ್ಸಿಸ್ ಯುರೋಪ್​ನ ವ್ಯಾಟಿಕನ್​ನಲ್ಲಿ ​​ ಸ್ಪೈಡರ್​ ಮ್ಯಾನ್​ ಉಡುಗೆ ಧರಿಸಿದ ವ್ಯಕ್ತಿಗೆ ಕೈ ಕುಲುಕಿದ್ರು. ಈ ಅದ್ಭುತ ಕ್ಷಣವು ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

ವ್ಯಾಟಿಕನ್​ನಲ್ಲಿ ನಡೆಯುವ ಕೂಟಗಳಲ್ಲಿ ಸಾಮಾನ್ಯವಾಗಿ ಪೋಪ್​ ಫ್ರಾನ್ಸಿಸ್​ ಒಂದಲ್ಲ ಒಂದು ವಿಚಾರದಲ್ಲಿ ಸೋಶಿಯಲ್ ಮೀಡಿಯಾ ಗಮನ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗುತ್ತಾರೆ.

ಆದರೆ ಕೆಲ ಸಮಯದ ಹಿಂದೆ ಪ್ರಸಿದ್ಧ ಮಾವರ್ಲ್​ ಕಾಮಿಕ್ಸ್​ನ ವೆಬ್​ ಸ್ಲಿಂಗರ್​ ಸೂಪರ್ ​ಹಿರೋನಂತೆ ವೇಷ ಧರಿಸಿ ಪಾಂಟಿಫ್ಸ್​ ಸಾಪ್ತಾಹಿಕ ಸಭೆಯಲ್ಲಿ ಸರದಿಯಲ್ಲಿ ನಿಂತು ಕಾಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದರು.

28 ವರ್ಷದ ಮ್ಯಾಟ್ಟೋ ವಿಲ್ಲಾರ್ಡಿಟಾ ಎಂಬಾತ ಪ್ರಸಿದ್ಧ ಸೂಪರ್​ ಹಿರೋ ಉಡುಗೆಯನ್ನ ಧರಿಸಿದ್ದರು. ಅಂದಹಾಗೆ ಈ ಧಿರಿಸನ್ನ ಮ್ಯಾಟೋ ಪೋಪ್​ರನ್ನ ಸ್ವಾಗತಿಸಲು ಧರಿಸಿದ್ದಲ್ಲ ಬದಲಾಗಿ ವ್ಯಾಟಿಕನ್‌ ನ ಪೆಡಿಯಾಟ್ರಿಕ್​ ಆಸ್ಪತ್ರೆಯಲ್ಲಿ ದಾಖಲಾದ ಮಕ್ಕಳನ್ನ ಹುರುದುಂಬಿಸಲು ಧರಿಸಿದ್ದರು.

ಪೋಪ್​ ಫ್ರಾನ್ಸಿಸ್​​ರನ್ನ ಭೇಟಿಯಾದ ಮ್ಯಾಟೋ ಅವರ ಕೈ ಕುಲುಕಿದ್ದಾರೆ. ಮಾತ್ರವಲ್ಲದೇ ಮಕ್ಕಳು ಹಾಗೂ ಅವರ ಕುಟುಂಬಸ್ಥರಿಗಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...