alex Certify ಬಾಲಕನ ಜನ್ಮದಿನದಂದು ಸರ್ಪ್ರೈಸ್ ಎಂಟ್ರಿ ಕೊಟ್ಟ ಸ್ಪೈಡರ್ ಮ್ಯಾನ್..! ಮುದ್ದಾದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕನ ಜನ್ಮದಿನದಂದು ಸರ್ಪ್ರೈಸ್ ಎಂಟ್ರಿ ಕೊಟ್ಟ ಸ್ಪೈಡರ್ ಮ್ಯಾನ್..! ಮುದ್ದಾದ ವಿಡಿಯೋ ವೈರಲ್

ಮಕ್ಕಳಿಗೆ ಸ್ಪೈಡರ್ ಮ್ಯಾನ್ ಯಾವಾಗಲೂ ಅತ್ಯುತ್ತಮ ಸೂಪರ್ ಹೀರೋ ಎಂದು ಹೇಳಬೇಕಾಗಿಲ್ಲ ಅಲ್ವಾ..? ಚಿಕ್ಕ ಮಕ್ಕಳು ವಿಶೇಷವಾಗಿ, ಸ್ಪೈಡರ್ ಮ್ಯಾನ್ ಅನ್ನು ಆರಾಧಿಸುತ್ತಾರೆ ಮತ್ತು ಅವನಂತೆಯೇ ಇರಲು ಪ್ರಯತ್ನಿಸುತ್ತಾರೆ. ಅಲ್ಲದೆ ಅವರಿಗೆ ಸ್ಪೈಡರ್ ಮ್ಯಾನ್ ನನ್ನು ಭೇಟಿ ಮಾಡಬೇಕೆಂಬ ಆಸೆ ಕೂಡ ಇರುತ್ತದೆ.

ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೋವು ಪುಟ್ಟ ಬಾಲಕ ತನ್ನ ನೆಚ್ಚಿನ ಸೂಪರ್ ಹೀರೋನನ್ನು ಭೇಟಿಯಾದಾಗ ಏನಾಯಿತು ಎಂಬುದನ್ನು ತೋರಿಸುತ್ತದೆ. ಮಗುವಿನ ಹುಟ್ಟುಹಬ್ಬದ ಪಾರ್ಟಿಯಲ್ಲಿ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಸ್ಪೈಡರ್ ಮ್ಯಾನ್ ಸೂಟ್‌ ಧರಿಸಿರುವ ವ್ಯಕ್ತಿಯೊಬ್ಬರು ಬಾಲಕನ ಮನೆ ಬಾಗಿಲಿನಲ್ಲಿ ಕಾಣಿಸಿಕೊಂಡಾಗ ಆತನಿಗೆ ಅಚ್ಚರಿ ತಂದಿದೆ.

ಸ್ಪೈಡರ್ ಮ್ಯಾನ್ ಅನ್ನು ತನ್ನ ಮನೆ ಬಾಗಿಲಲ್ಲಿ ನೋಡಿದಾಗ ಕನಸೋ, ನನಸೋ ಎಂಬಂತೆ ಪುಟ್ಟ ಬಾಲಕ ನಿಧಾನಕ್ಕೆ ಆತನ ಬಳಿ ಹೆಜ್ಜೆ ಹಾಕಿದ್ದಾನೆ. ನಂತರ ಆತನ ಬಳಿ ನಡೆದು ತನ್ನನ್ನು ಎತ್ತಿಕೊಳ್ಳುವಂತೆ ಕೈ ಚಾಚಿದ್ದಾನೆ. ಸ್ಪೈಡರ್ ಮ್ಯಾನ್ ವೇಷಧಾರಿ ಬಾಲಕನನ್ನು ಎತ್ತಿಕೊಂಡು ಅಪ್ಪುಗೆಯನ್ನು ನೀಡಿದ್ದಾನೆ. ಬಾಲಕನ ಮುಗ್ಧತೆಯು ನಿಮ್ಮನ್ನು ಭಾವುಕರನ್ನಾಗಿಸದೆ ಇರಲಾರದು.

ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಪುಟ ವರ್ತ್ ಫೀಡ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅವನು ತನ್ನ ಕಣ್ಣುಗಳನ್ನು ನಂಬಲು ಸಾಧ್ಯವಾಗಿಲ್ಲ. ಅವನು ಇದನ್ನು ತನ್ನ ಜೀವನದುದ್ದಕ್ಕೂ ನೆನಪಿಸಿಕೊಳ್ಳುತ್ತಾನೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಬಾಲಕನ ಮುಗ್ಧತೆಯನ್ನು ಮೆಚ್ಚಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...