alex Certify ಪುಟ್ಟ ಪೋರನ ಅದ್ಭುತ ಸ್ಟೆಪ್ಸ್ ಗೆ ನೆಟ್ಟಿಗರು ಫಿದಾ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಪೋರನ ಅದ್ಭುತ ಸ್ಟೆಪ್ಸ್ ಗೆ ನೆಟ್ಟಿಗರು ಫಿದಾ…..!

ಮಾರ್ವೆಲ್‌ನ ಸೂಪರ್‌ಹೀರೋ ಸ್ಪೈಡರ್ ಮ್ಯಾನ್‌ನ (ಚಲನಚಿತ್ರ) ವರ್ತನೆಗಳು ವಯಸ್ಕರಿಂದ ಮಕ್ಕಳವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಜನಸಾಮಾನ್ಯರಲ್ಲಿ ಇವನು ಬಹಳ ಜನಪ್ರಿಯನಾಗಿದ್ದಾನೆ. ಚಿತ್ರದಲ್ಲಿನ ಪೀಟರ್ ಪಾರ್ಕರ್ ರೀತಿಯಲ್ಲಿ ಪುಟ್ಟ ಬಾಲಕನೊಬ್ಬ ಡಾನ್ಸ್ ಮಾಡುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ. 2007 ರ ಚಲನಚಿತ್ರ ಸ್ಪೈಡರ್ ಮ್ಯಾನ್ 3 ರ ಟೋಬೆ ಮ್ಯಾಗೈರ್ ಪಾತ್ರದಂತೆ ಬಾಲಕ ನೃತ್ಯ ಮಾಡಿದ್ದು, ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಮ್ಯಾಕ್ಸ್ ಎಂಬ ಬಾಲಕ ಪಾರ್ಟಿಯೊಂದರಲ್ಲಿ ಆಕರ್ಷಕ ಹಾಡಿಗೆ ಉತ್ಸಾಹದಿಂದ ಸ್ಟೆಪ್ಸ್ ಹಾಕಿದ್ದಾನೆ. ಬಾಲಕ ಲವಲವಿಕೆಯಿಂದ ಮಾಡಿರೋ ನೃತ್ಯ ಟೋಬೆ ಮ್ಯಾಗೈರ್ ಪ್ರದರ್ಶಿಸಿದ ಹೆಜ್ಜೆಗಳಿಗೆ ಹೋಲುತ್ತವೆ. ಇದನ್ನು ಅಭಿಮಾನಿಗಳು ಬುಲ್ಲಿ ಮ್ಯಾಗೈರ್ ಎಂದು ಕರೆಯುತ್ತಾರೆ.

ವೈರಲ್ ಕ್ಲಿಪ್ ವಿಡಿಯೋವನ್ನು ಅಲ್ಲಾಡಿನ್ಸ್ ಕೇವ್ ಎಂಟರ್‌ಟೈನ್‌ಮೆಂಟ್ಸ್ ಹಂಚಿಕೊಂಡಿದೆ. ಅಮೆರಿಕನ್ ನಟಿ ವಿಯೋಲಾ ಡೇವಿಸ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಮರುಹಂಚಿಕೊಂಡಿದ್ದಾರೆ. ಅಲ್ಲದೆ ಬಾಲಕನ ಅದ್ಭುತ ನೃತ್ಯ ಕೌಶಲ್ಯವನ್ನು ಅವರು ಹಾಡಿ ಹೊಗಳಿದ್ದಾರೆ. ನೆಟ್ಟಿಗರು ಕೂಡ ಬಾಲಕನ ನೃತ್ಯವನ್ನು ಇಷ್ಟಪಟ್ಟಿದ್ದು, ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...