alex Certify ನಾಳೆಯಿಂದ ಜೇಬು ಸುಡಲಿದೆ ಪೇಂಟ್​ ದರ….! ಪ್ರಸಿದ್ಧ ಪೇಂಟಿಂಗ್​​ ಬ್ರ್ಯಾಂಡ್​​ಗಳ ದರದಲ್ಲಿ ಗಣನೀಯ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆಯಿಂದ ಜೇಬು ಸುಡಲಿದೆ ಪೇಂಟ್​ ದರ….! ಪ್ರಸಿದ್ಧ ಪೇಂಟಿಂಗ್​​ ಬ್ರ್ಯಾಂಡ್​​ಗಳ ದರದಲ್ಲಿ ಗಣನೀಯ ಏರಿಕೆ

ಮನೆಗೆ ಪೇಂಟ್​ ಮಾಡಿಸಬೇಕು ಎಂದು ಯೋಚನೆ ಮಾಡ್ತಾ ಇದ್ದರೆ ನಾಳೆಯಿಂದ ನಿಮಗೆ ಜೇಬು ಕೊಂಚ ಜಾಸ್ತಿಯೇ ಸುಡಲಿದೆ. ಏಕೆಂದರೆ ಪ್ರಸಿದ್ಧ ಪೇಂಟ್​ ತಯಾರಕರು ಬಣ್ಣಗಳ ದರದಲ್ಲಿ 5 – 10 ಪ್ರತಿಶತ ಏರಿಕೆ ಮಾಡಿದ್ದಾರೆ. ಹಣದುಬ್ಬರವನ್ನು ಎದುರಿಸುತ್ತಿರುವ ಏಷ್ಯನ್​ ಪೇಂಟ್ಸ್​, ಬರ್ಗರ್​ ಪೇಂಟ್ಸ್​​ ಹಾಗೂ ಇಂಡಿಗೋ ಪೇಂಟ್ಸ್​ ಸೇರಿದಂತೆ ಪ್ರಸಿದ್ಧ ಪೇಂಟ್​ ಕಂಪನಿಗಳು ಬೆಲೆ ಏರಿಕೆ ಮಾಡಿವೆ. ನಾಳೆಯಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ಪೇಂಟಿಂಗ್​ ಕ್ಷೇತ್ರದ ದಿಗ್ಗಜ ಏಷಿಯನ್​ ಪೇಂಟ್ಸ್​ ಬೆಲೆಯನ್ನು 7 – 10 ಪ್ರತಿಶತಕ್ಕೆ ಏರಿಕೆ ಮಾಡಲಿದೆ. ಕಳೆದ 20 ವರ್ಷಗಳಲ್ಲಿ ಕಂಪನಿಯು ವಾರ್ಷಿಕವಾಗಿ ತನ್ನ ಉತ್ಪನ್ನಗಳ ಬೆಲೆಯಲ್ಲಿ ವಾರ್ಷಿಕವಾಗಿ 3 ಪ್ರತಿಶತಕ್ಕಿಂತ ಅಧಿಕ ದರ ಏರಿಕೆ ಮಾಡಿರಲಿಲ್ಲ. ಇನ್ನು ಬರ್ಗರ್ ಪೇಂಟ್ಸ್​ ತನ್ನ ಉತ್ಪನ್ನಗಳ ಬೆಲೆಯನ್ನು 10 ಪ್ರತಿಶತ ಏರಿಕೆ ಮಾಡಲಿದೆ. ಇಂಡಿಗೋ ಪೇಂಟ್ಸ್​ ದರ 8-9 ಪ್ರತಿಶತ ಏರಿಕೆ ಕಾಣಲಿದೆ.

ಜಾಗತಿಕವಾಗಿ ಪೇಂಟ್​ಗಳ ದರದಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ಡುಲ್ಯಕ್ಸ್​ ಬ್ರ್ಯಾಂಡ್​ ಈಗಾಗಲೇ 9 ಪ್ರತಿಶತ ದರ ಏರಿಕೆ ಮಾಡಿತ್ತು. ಇದೀಗ ಮತ್ತೆ 5-6 ಪ್ರತಿಶತ ದರ ಏರಿಕೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...