alex Certify ಮಾಸ್ಟರ್ ಬೆಡ್ ರೂಮ್ ‘ಇಂಟೀರಿಯರ್’ ಡಿಸೈನ್ ಹೀಗೆ ಮಾಡಿ ಅಂದ ಹೆಚ್ಚಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಟರ್ ಬೆಡ್ ರೂಮ್ ‘ಇಂಟೀರಿಯರ್’ ಡಿಸೈನ್ ಹೀಗೆ ಮಾಡಿ ಅಂದ ಹೆಚ್ಚಿಸಿ

ಮನೆಯಲ್ಲಿ ಸಂಪೂರ್ಣ ವೈಯುಕ್ತಿಕವಾದ ಜಾಗವೆಂದರೆ ಮಾಸ್ಟರ್ ಬೆಡ್ ರೂಮ್. ಹೀಗಾಗಿ ಅದರ ಅಲಂಕಾರ ಇತರ ಕೋಣೆಗಿಂತ ಭಿನ್ನವಾಗಿರಬೇಕು. ಇನ್ನೊಬ್ಬರ ಮನ ಮೆಚ್ಚಿಸುವ ಅಲಂಕಾರದ ಅಗತ್ಯವಿಲ್ಲ. ನಮ್ಮದೇ ಸ್ವಂತ ಶೈಲಿಯ ಅಲಂಕಾರ ಮಾಡಿಕೊಂಡು ಅಂದವನ್ನು ಹೆಚ್ಚಿಸಿಕೊಳ್ಳಬಹುದು.

ಬಣ್ಣದ ಆಯ್ಕೆ ಹೇಗಿರಬೇಕು?

ಹಿತವೆನಿಸುವ ಬಣ್ಣಗಳು ಮಾಸ್ಟರ್ ಬೆಡ್ ರೂಮ್ ಗೆ ಅತ್ಯಂತ ಸುಂದರವಾಗಿ ಹೊಂದಿಕೊಳ್ಳುತ್ತದೆ. ಡೆಕೋರೇಷನ್ ಗೆ ಬ್ರೈಟ್ ಕಲರ್ ಇರಲಿ. ಆದರೆ ತೀರಾ ಗಾಢ ಆಗದಂತೆ ನೋಡಿಕೊಳ್ಳಬೇಕು. ಬ್ರೈಟ್ ಕಲರ್ ಬೇಡ ಎನಿಸಿದರೆ ಪಾಸ್ಟೆಲ್ ಶೇಡ್ ಅಂದರೆ ನೀಲಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು.

ಪೀಠೋಪಕರಣಗಳ ಡಿಸೈನ್ ಹೇಗಿರಬೇಕು?

ಫರ್ನಿಚರ್ ಆಯ್ಕೆ ಮಾಡುವಾಗ ಸಮಗ್ರವಾಗಿರುವ ಥೀಮ್ ಬಳಕೆ ಮಾಡಬೇಕು. ಡ್ರೆಸ್ ಏರಿಯ ಮತ್ತು ವಾರ್ಡ್ರೋಬ್ ಯಾವ ರೀತಿ ಇರಬೇಕು ಎಂಬುದಕ್ಕೆ ಮಹತ್ವ ನೀಡಲೇಬೇಕು. ಇದನ್ನು ವೈಯಕ್ತಿಕ ಅಭಿವೃದ್ಧಿಯನ್ನು ಆಧರಿಸಿ ಮಾಡಬೇಕು. ಸಾಂಪ್ರದಾಯಿಕ ವಾರ್ಡ್ರೋಬ್ ಬದಲು ವಾಕ್ ಇನ್ ಕ್ಲೋಸೆಟ್ ಚೆನ್ನಾಗಿ ಒಪ್ಪುತ್ತದೆ. ಇದು ಬಟ್ಟೆಗಳನ್ನು ಆಯ್ಕೆ ಮಾಡಲು ಸುಲಭವಾಗುವಂತೆ ಮಾಡುತ್ತದೆ. ಡ್ರೆಸ್ಸರ್ ಮತ್ತು ಟೆಸ್ಟ್ ಆಫ್ ಡ್ರಾವರ್ ಆಯ್ಕೆ ಮಾಡುವಾಗ ಅದರ ಮೇಲೆ ಟಿವಿ ಇಡಲು ಅವಕಾಶ ಇರುವಂತೆ ನೋಡಿಕೊಳ್ಳಬೇಕು. ವರ್ಟಿಕಲ್ ಕಬೋರ್ಡ್ ಯಾವಾಗಲೂ ಮಾಸ್ಟರ್ ಬೆಡ್ ರೂಂಗೆ ಉತ್ತಮ. ಇದರಿಂದ ಜಾಗವು ಸಾಕಷ್ಟು ಉಳಿಯುತ್ತದೆ.

ಈ ರೀತಿ ಇರಲಿ ಲೈಟಿಂಗ್ ವ್ಯವಸ್ಥೆ 

ಮಾಸ್ಟರ್ ಬೆಡ್ ರೂಮ್ ಲೈಟಿಂಗ್ ಆಹ್ಲಾದಕರವಾಗಿರಬೇಕು. ಡಿಮ್ಮರ್ ಯಾವಾಗಲೂ ಮೂಡ್ ಇನ್ನಷ್ಟು ಉತ್ತಮವಾಗುವಂತೆ ಮಾಡುತ್ತದೆ. ಚಿಕ್ಕ ಚಿಕ್ಕ ಪೇಂಟಿಂಗ್ ಗಳನ್ನು ಬೆಡ್ ಮೇಲ್ಭಾಗದ ಗೋಡೆಯಲ್ಲಿ ಹಾಕಿ ಅದಕ್ಕೆ ಚಿಕ್ಕ ಲೈಟ್ ನ ಅಲಂಕಾರ ಮಾಡಬೇಕು. ಪೇಂಟಿಂಗ್ ಬದಲು ಕುಟುಂಬದ ದೊಡ್ಡದೊಂದು ಫೋಟೋ ಇದ್ದರೆ ಅದಕ್ಕೆ ಬೆಳಕಿನ ಶೇಡ್ ನೀಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...