alex Certify ವಿರಾಟ್ ಕೊಹ್ಲಿಯ ಸುಂದರ ಪೇಂಟಿಂಗ್​ ಮಾಡಿದ ಕಲಾವಿದ: ಮೆಚ್ಚುಗೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರಾಟ್ ಕೊಹ್ಲಿಯ ಸುಂದರ ಪೇಂಟಿಂಗ್​ ಮಾಡಿದ ಕಲಾವಿದ: ಮೆಚ್ಚುಗೆಗಳ ಮಹಾಪೂರ

Masterpiece" :Fan Makes Virat Kohli's Portrait, Internet Amazed

ವಿರಾಟ್ ಕೊಹ್ಲಿ ನಿಸ್ಸಂದೇಹವಾಗಿ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಕ್ರೀಡಾಪಟುಗಳಲ್ಲಿ ಒಬ್ಬರು. ಇವರ ಮೇಣದ ಪ್ರತಿಮೆಯಿಂದ ಹಿಡಿದು ಹಲವಾರು ಬಗೆಯಲ್ಲಿ ಕ್ರೀಡಾಪ್ರೇಮಿಗಳು ಅಭಿಮಾನ ಮೆರೆದಿದ್ದಾರೆ. ಈಗ ಇವರ ಅಭಿಮಾನಿಯೊಬ್ಬ ಪೇಂಟಿಂಗ್​ ಮಾಡಿದ್ದು, ಅದೀಗ ಗಮನ ಸೆಳೆದಿದೆ.

ಮೊದಲ ನೋಟದಲ್ಲಿ, ಇದು ಕ್ರಿಕೆಟಿಗನ ಛಾಯಾಚಿತ್ರದಂತೆ ಕಾಣುತ್ತದೆ. ಇದರಲ್ಲಿ ವಿರಾಟ್ ಕೊಹ್ಲಿ ಬಿಳಿ ಶರ್ಟ್ ಧರಿಸಿ ಕಪ್ಪು ಹಿನ್ನೆಲೆಯಲ್ಲಿ ನಿಂತಿದ್ದಾರೆ. ಅವರ ಕೂದಲು ಮತ್ತು ಮುಖದ ವೈಶಿಷ್ಟ್ಯಗಳನ್ನು ಸುಂದರವಾಗಿ ಚಿತ್ರದಲ್ಲಿ ವಿವರಿಸಲಾಗಿದೆ.

ಈ ಪೇಂಟಿಂಗ್ ಅನ್ನು ಬಳಕೆದಾರ WG RumblePants ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಂಚಿಕೊಂಡ ನಂತರ, ಪೋಸ್ಟ್ 1.9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಎರಡು ಸಾವಿರ ಇಷ್ಟಗಳನ್ನು ಸಂಗ್ರಹಿಸಿದೆ. ಖುದ್ದು ವಿರಾಟ್​ ಕೊಹ್ಲಿ ಅವರೂ ಶೇರ್​ ಮಾಡಿಕೊಂಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...