alex Certify ಬೆರಗಾಗಿಸುವಂತಿದೆ 5 ಕೆಜಿ ತೂಕದ ಸಿಹಿ ಕುಂಬಳಕಾಯಿಗೆ ಸಿಕ್ಕಿರುವ ಬೆಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುವಂತಿದೆ 5 ಕೆಜಿ ತೂಕದ ಸಿಹಿ ಕುಂಬಳಕಾಯಿಗೆ ಸಿಕ್ಕಿರುವ ಬೆಲೆ….!

ಮಾರುಕಟ್ಟೆಯಲ್ಲಿ 1 ಕೆಜಿ ಸಿಹಿ ಕುಂಬಳ ಕಾಯಿಗೆ ಅಂದಾಜು 40 ರಿಂದ 50 ರೂಪಾಯಿಗಳು ಇರುತ್ತದೆ. ಆದರೆ 5 ಕೆಜಿ ತೂಕದ ಸಿಹಿ ಕುಂಬಳಕಾಯಿ ಒಂದು ದಾಖಲೆ ಮೊತ್ತಕ್ಕೆ ಹರಾಜು ಆಗುವ ಮೂಲಕ ಅಚ್ಚರಿ ಮೂಡಿಸಿದೆ.

ಹೌದು, ಇಂಥದೊಂದು ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದ್ದು, ಚೆಮ್ಮನ್ನಾರ್ ನಲ್ಲಿ ಓಣಂ ಆಚರಣೆ ವೇಳೆ ಐದು ಕೆಜಿ ತೂಕದ ಸಿಹಿ ಕುಂಬಳಕಾಯಿ ಒಂದನ್ನು ಹರಾಜಿಗೆ ಹಾಕಲಾಗಿದೆ.

ಇದನ್ನು ವ್ಯಕ್ತಿಯೊಬ್ಬರು ಬರೋಬ್ಬರಿ 47 ಸಾವಿರ ರೂಪಾಯಿಗಳಿಗೆ ಖರೀದಿಸಿದ್ದಾರೆ. ಸಾಮಾನ್ಯವಾಗಿ ಇಲ್ಲಿ ನಡೆಯುವ ಹರಾಜಿನಲ್ಲಿ ಆಡು ಮತ್ತು ಹುಂಜ ಮೊದಲಾದವುಗಳು 10000 ರೂ. ಆಸುಪಾಸಿನಲ್ಲಿ ಹರಾಜಾಗುತ್ತಿದ್ದು, ಇದೇ ಮೊದಲ ಬಾರಿಗೆ ಸಿಹಿ ಕುಂಬಳಕಾಯಿ ದಾಖಲೆ ಮೊತ್ತಕ್ಕೆ ಹರಾಜಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...