alex Certify ಪ್ರವಾಸಿಗರ ಪಾಲಿಗೆ ಸ್ವರ್ಗದಂತಿದೆ ರಾಹುಲ್‌ ಗಾಂಧಿ ಸ್ಪರ್ಧಿಸುತ್ತಿರುವ ವಯನಾಡ್‌ ಕ್ಷೇತ್ರ…….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಿಗರ ಪಾಲಿಗೆ ಸ್ವರ್ಗದಂತಿದೆ ರಾಹುಲ್‌ ಗಾಂಧಿ ಸ್ಪರ್ಧಿಸುತ್ತಿರುವ ವಯನಾಡ್‌ ಕ್ಷೇತ್ರ…….!

ಭಾರತದ ದಕ್ಷಿಣ ರಾಜ್ಯವಾದ ಕೇರಳದ ವಯನಾಡ್ ಜಿಲ್ಲೆ ರಾಜಕೀಯ ಕಾರಣಗಳಿಗಾಗಿ ಸದ್ಯ ಸುದ್ದಿಯಲ್ಲಿದೆ. ರಾಹುಲ್ ಗಾಂಧಿ ಅವರ ಸಂಸದೀಯ ಕ್ಷೇತ್ರ ಇದು. 2024ರ ಲೋಕಸಭೆ ಚುನಾವಣೆಯಲ್ಲಿ ವಯನಾಡ್‌ನಿಂದಲೇ ರಾಹುಲ್‌ ಸ್ಪರ್ಧಿಸುತ್ತಿದ್ದಾರೆ. ಈ ಜಿಲ್ಲೆ ನಿಜಕ್ಕೂ ಪ್ರವಾಸಿಗರ ಸ್ವರ್ಗ. ಕೋಝಿಕ್ಕೋಡ್ ರೈಲು ನಿಲ್ದಾಣ ಅಥವಾ ಕೋಝಿಕ್ಕೋಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಸ್ತೆ ಮಾರ್ಗವಾಗಿ ಇಲ್ಲಿಗೆ ಬರಬಹುದು. ವಯನಾಡ್‌ನಲ್ಲಿ ಪ್ರವಾಸಿಗರು ನೋಡಲೇಬೇಕಾದ ಅನೇಕ ಸ್ಥಳಗಳಿವೆ.

ಬಾಣಾಸುರ ಸಾಗರ ಅಣೆಕಟ್ಟು

ಬಾಣಾಸುರ ಸಾಗರ ಅಣೆಕಟ್ಟನ್ನು ಕಬಿನಿ ನದಿಯ ಉಪನದಿಯಾದ ಕರಮಂತೋಡು ಮೇಲೆ ನಿರ್ಮಿಸಲಾಗಿದೆ. 1979 ರಲ್ಲಿ ಇದು ನಿರ್ಮಾಣವಾಯಿತು. ರಾಕ್ಷಸರ ರಾಜ ಮಹಾಬಲಿಯ ಮಗ ಬಾಣಾಸುರನ ಹೆಸರನ್ನು ಇದಕ್ಕೆ ಇಡಲಾಗಿದೆ. ಸಾಹಸ ಪ್ರಿಯರಿಗೆ ಇದು ಹೇಳಿಮಾಡಿಸಿದಂತಹ ತಾಣ.

ಎಡಕ್ಕಲ್ ಗುಹೆಗಳು

ಎಡಕ್ಕಲ್ ಗುಹೆಗಳು ಸಮುದ್ರ ಮಟ್ಟದಿಂದ 1,200 ಮೀಟರ್ ಎತ್ತರದಲ್ಲಿ ಅಂಬುಕುತಿ ಬೆಟ್ಟಗಳ ಮೇಲೆ ನೆಲೆಗೊಂಡಿವೆ. ಟ್ರೆಕ್ಕಿಂಗ್ ಮೂಲಕ ಇಲ್ಲಿಗೆ ಪ್ರವೇಶಿಸಬಹುದು.  ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಲಾದ ಗುಹೆಗಳ ಕಲ್ಲಿನ ಕೆತ್ತನೆಗಳು ಅದ್ಭುತವಾಗಿವೆ.

ಸೂಚಿಪಾರಾ ಜಲಪಾತ

ಸೂಚಿಪಾರ ಜಲಪಾತವು ನೈಸರ್ಗಿಕ ವಿಸ್ಮಯಕ್ಕಿಂತ ಕಡಿಮೆಯಿಲ್ಲ.  ಇಲ್ಲಿನ ಅದ್ಭುತ ನೋಟವು ನಮ್ಮನ್ನು ಆಕರ್ಷಿಸುತ್ತದೆ. ಪಿಕ್ನಿಕ್ ಮಾಡಲು ಮತ್ತು ಪ್ರಕೃತಿಯನ್ನು ಆನಂದಿಸಲು ಜನರು ದೂರದ ಪ್ರದೇಶಗಳಿಂದ ಈ ಸ್ಥಳಕ್ಕೆ ಬರುತ್ತಾರೆ.

ವಯನಾಡ್ ವನ್ಯಜೀವಿ ಅಭಯಾರಣ್ಯ

ವನ್ಯಜೀವಿ ಅಭಯಾರಣ್ಯ ಸರಿಸುಮಾರು 344.44 ಚದರ ಕಿಲೋಮೀಟರ್‌ಗಳಷ್ಟಿದೆ. ಆನೆ, ಜಿಂಕೆ, ಬೆಂಗಾಲ್ ಟೈಟರ್ ಸೇರಿದಂತೆ ಅನೇಕ ರೀತಿಯ ಕಾಡು ಪ್ರಾಣಿಗಳನ್ನು ಇಲ್ಲಿ ಕಾಣಬಹುದು. ಇದಲ್ಲದೇ ನವಿಲು ಸೇರಿದಂತೆ ಹಲವು ಸುಂದರ ಪಕ್ಷಿಗಳಿಗೂ ಇದು ನೆಲೆಯಾಗಿದೆ.

ಚಹಾ ತೋಟಗಳು

ಸಾಮಾನ್ಯವಾಗಿ ಕೇರಳದ ಮುನ್ನಾರ್‌ನಲ್ಲಿ ಚಹಾ ತೋಟಗಳನ್ನು ನೋಡಲು ಜನರು ಬರುತ್ತಾರೆ. ಆದರೆ ವಯನಾಡಿನಲ್ಲೂ ಟೀ ಎಸ್ಟೇಟ್‌ಗಳನ್ನು ವೀಕ್ಷಿಸಬಹುದು. ಇದಕ್ಕಾಗಿ ಟೀ ಟೌನ್‌ಗೆ ಹೋಗಬೇಕು. ಛಾಯಾಗ್ರಹಣವನ್ನು ಇಷ್ಟಪಡುವವರಿಗೆ ಇದು ಸೂಕ್ತ ತಾಣವಾಗಿದೆ.

ಸುಲ್ತಾನ್ ಬತ್ತೇರಿ

ಸುಲ್ತಾನ್ ಬತ್ತೇರಿಯು ವಯನಾಡು ಜಿಲ್ಲೆಯ ಒಂದು ಸಣ್ಣ ಪಟ್ಟಣ. ಇದರ ಗಡಿಯು ತಮಿಳುನಾಡು ಮತ್ತು ಕರ್ನಾಟಕವನ್ನು ಮುಟ್ಟುತ್ತದೆ. ಇಲ್ಲಿನ ಜೈನ ದೇವಾಲಯಗಳು ಮತ್ತು ಸೂರ್ಯಕಾಂತಿ ಕ್ಷೇತ್ರಗಳು ಪ್ರತಿವರ್ಷ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...