alex Certify ‘ಒಮಿಕ್ರಾನ್‌’ ನ ಈ ಐದು ರೋಗ ಲಕ್ಷಣಗಳ ಬಗ್ಗೆ ಅರಿವಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಒಮಿಕ್ರಾನ್‌’ ನ ಈ ಐದು ರೋಗ ಲಕ್ಷಣಗಳ ಬಗ್ಗೆ ಅರಿವಿರಲಿ

ಕೋವಿಡ್‌-19ನ ಹೊಸ ಅವತಾರಿ ಒಮಿಕ್ರಾನ್‌ ರೋಗ ಲಕ್ಷಣಗಳ ಬಗ್ಗೆ ಅದಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಒಮಿಕ್ರಾನ್‌ ವ್ಯಾಪಕವಾಗಿ ಹಬ್ಬಬಲ್ಲ ಸೋಂಕಾಗಿದ್ದು, ಈ ಬಗ್ಗೆ ಅನೇಕ ಸಂಸ್ಥೆಗಳು ಅದಾಗಲೇ ಎಚ್ಚರಿಕೆ ನೀಡಿವೆ.

ಕೋವಿಡ್‌ನ ಡೆಲ್ಟಾವತಾರಿಯು ಜಗತ್ತಿನಾದ್ಯಂತ ಭಾರೀ ಪ್ರಮಾಣದಲ್ಲಿ ಜನರು ಆಸ್ಪತ್ರೆ ಸೇರುವಂತೆ ಮಾಡಿದ್ದಲ್ಲದೇ ಬಹಳಷ್ಟು ಮಂದಿಯ ಸಾವಿಗೆ ಕಾರಣವಾಗಿತ್ತು. ಈ ಸೋಂಕು ತೀವ್ರವಾಗಿ ಹಬ್ಬುವ ಸಾಧ್ಯತೆ ಇರುವುದಲ್ಲದೇ, ಲಘುವಾದ ರೋಗಲಕ್ಷಣಗಳಾದ ತೀವ್ರ ಜ್ವರ, ಕೆಮ್ಮು/ನೆಗಡಿ, ಎದೆ ನೋವು ಹಾಗೂ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ತಗ್ಗುವಂತೆ ಮಾಡುತ್ತದೆ.

ಐಷಾರಾಮಿ ಕಾರು ಮಾರಾಟಕ್ಕಿಟ್ಟ ಶಾರುಖ್‌ ಖಾನ್…!‌

ಒಮಿಕ್ರಾನ್‌ನ ಈ ಐದು ರೋಗ ಲಕ್ಷಣಗಳ ಬಗ್ಗೆ ನಿಮಗೆ ಗೊತ್ತಿರಲಿ:

1.ಸುಸ್ತು, ಆಯಾಸ

2. ಗಂಟಲು ಕೆರೆತ

3. ಲಘು ಜ್ವರ

4. ಇರುಳಿನ ವೇಳೆ ಬೆವರುವುದು ಹಾಗೂ ಮೈಕೈ ನೋವು

5. ಒಣಕೆಮ್ಮು

ಕೋವಿಡ್‌ನ ಹಿಂದಿನ ಅವತಾರಿಗಳಂತೆ ಒಮಿಕ್ರಾನ್‌ನಿಂದ ಮೂಗು ಕಟ್ಟಿಕೊಳ್ಳುವುದು, ವಾಸನಾ ಕ್ಷಮತೆ, ರುಚಿ ಗ್ರಹಿಕೆ ಕಳೆದುಕೊಂಡಂಥ ಲಕ್ಷಣಗಳು ಕಂಡು ಬಂದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...