alex Certify ಒಂದೇ ಕಡೆ ಕೂತು ಕೆಲಸ ಮಾಡಿದರೆ ಕಾಡುತ್ತೆ ಈ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಕಡೆ ಕೂತು ಕೆಲಸ ಮಾಡಿದರೆ ಕಾಡುತ್ತೆ ಈ ಸಮಸ್ಯೆ

Work From Home May Cause 'Irreversible' Damage to Spinal Cord, Warn Doctors ಮನೆಗಳಿಂದಲೇ ಕೆಲಸ ಮಾಡುವದಕ್ಕೆ ಒಗ್ಗಿಕೊಂಡಿರುವ ಜನರಲ್ಲಿ ಹೊಸ ರೀತಿಯ ಜೀವನಶೈಲಿ ಸಮಸ್ಯೆ ಅಂಟಿಕೊಳ್ಳಲಿದೆ ಎಂದು ಬೆನ್ನು ಹುರಿ ತಜ್ಞ ವೈದ್ಯರು ತಿಳಿಸುತ್ತಾರೆ.

ಈ ಮುನ್ನ ಮನೆಯಿಂದ ಕಚೇರಿಗಳಿಗೆ ಪ್ರಯಾಣ ಮಾಡಿಕೊಂಡು ಹೋಗಿ, ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಮಂದಿ ಮನೆಗಳಿಂದ ಕೆಲಸ ಮಾಡುವ ಅವಧಿಯಲ್ಲಿ ಯಾವಾಗಲೂ ’ಲಾಗಿನ್ ಆಗಿರುತ್ತಾರೆ.’  “ಸುದೀರ್ಘಾವಧಿಗೆ ಕುಳಿತುಕೊಂಡೇ ಇರುವ ಕಾರಣದಿಂದ ಬೆನ್ನು ಹುರಿ ಹಾಗೂ ಬಟ್ಟುಗಳ ಮೇಲೆ ಅಧಿಕ ಒತ್ತಡ ಬೀಳುವ ಕಾರಣ ದೇಹದ ಚಲನೆಗೆ ಅಗತ್ಯವಿರುವ ಕ್ಷಮತೆ ಕ್ಷೀಣಿಸುವ ಸಾಧ್ಯತೆ ಇದೆ.

ಹೀಗೆ ಒಂದೇ ಕಡೆ ಕುಳಿತುಬಿಡುವ ಕಾರಣ ದೇಹಕ್ಕೆ ಸೀಮಿತ ಚಲನೆ ಸಿಗುವ ಕಾರಣ ಬಟ್ಟುಗಳ ಮೇಲೆ ಅಧಿಕ ಒತ್ತಡ ಬೀಳಲಿದೆ. ಬಹಳಷ್ಟು ಜನ ಸರಿಯಾಗಿ ನೀರು ಕುಡಿಯುವುದು ಅಥವಾ ಪೋಷಕಾಂಶಗಳ ಸೇವನೆ ಮೇಲೆ ಗಮನ ಕೊಡುವುದಿಲ್ಲ. ಇದರಿಂದ ಡಿಸ್ಕ್‌‌ಗಳಲ್ಲಿ ನೀರಿನಂಶ ಕಡಿಮೆಯಾಗಿ ದುರ್ಬಲವಾಗಲಿವೆ,” ಎಂದು ಎಚ್ಚರಿಕೆ ನೀಡಿದ್ದಾರೆ.

ಕೆಲಸ ಮಾಡುವ ವೇಳೆ ಒಂದೇ ಕಡೆ ಕೂರದೇ, ಅಥವಾ ಬೆಡ್‌ ಮೇಲೆ ಮಲಗಿಕೊಂಡೇ ಕೆಲಸ ಮಾಡದೇ, ಮನೆಯ ಒಳಗೆಲ್ಲಾ ಓಡಾಡಿಕೊಂಡು, ಆಗಾಗ ಪುಟ್ಟ ಬೇಕ್‌ ತೆಗೆದುಕೊಂಡು ದೇಹಕ್ಕೊಂದು ರಿಲ್ಯಾಕ್ಸ್‌ ಕೊಡುತ್ತಾ ಇರಲು ಅನೇಕ ತಜ್ಞ ವೈದ್ಯರು ಸಲಹೆಗಳನ್ನು ಕೊಡುತ್ತಾ ಬಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...