alex Certify ಐಷಾರಾಮಿ ಕಾರು ಮಾರಾಟಕ್ಕಿಟ್ಟ ಶಾರುಖ್‌ ಖಾನ್…!‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಷಾರಾಮಿ ಕಾರು ಮಾರಾಟಕ್ಕಿಟ್ಟ ಶಾರುಖ್‌ ಖಾನ್…!‌

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೂಲಕ ಹೊರಗೆ ಬಂದಿದ್ದಾರೆ. ಈ ಘಟನೆಯಿಂದ ಸಾಕಷ್ಟು ನೊಂದಿರುವ ಶಾರುಖ್ ಖಾನ್, ತಮ್ಮ ಐಷಾರಾಮಿ ಕಾರು ಮಾರಾಟಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ನಟ ಶಾರುಖ್ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿವೆ. ಈ ಪೈಕಿ ಬಿಎಂಡಬ್ಲ್ಯೂ 7 ಸೀರಿಸ್ ನ ಕಾರು ಮಾರಾಟ ಮಾಡಲು ಮುಂದಾಗಿದ್ದಾರೆ. ಈ ಸೀರಿಸ್ ಕಾರಿನ ನಿರ್ಮಾಣವನ್ನು ಕಂಪನಿ ಬಂದ್ ಮಾಡಿದ್ದು, ಹೊಸ ಮಾಡೆಲ್ 7 ಸೀರಿಸ್ ಕಾರು ಮಾರುಕಟ್ಟೆಗೆ ಬಂದಿದೆ. ಈ ಕಾರಿನ ಸದ್ಯದ ಮಾರುಕಟ್ಟೆ ಬೆಲೆ 1.39 ಕೋಟಿ ರೂ. ನಿಂದ 2.46 ಕೋಟಿ ರೂಪಾಯಿವರೆಗೆ ಇದೆ.

ಬಿಎಂಡಬ್ಲ್ಯೂ ಕಾರಿನ ನಿರ್ವಹಣೆ ಕೂಡ ತುಂಬಾ ದುಬಾರಿಯೇ ಆಗಿರುತ್ತದೆ. ಪ್ರತಿ 10 ಸಾವಿರ ಕಿ.ಮೀಗೆ ಒಂದು ಬಾರಿ ಜನರಲ್ ಸರ್ವೀಸ್ ಮಾಡಿಸಬೇಕು. ಇದರ ಒಂದು ಟೈಯರ್ ಬೆಲೆ 30 ಸಾವಿರ ರೂಪಾಯಿವರೆಗೆ ಇರುತ್ತದೆ. ಇನ್ನುಳಿದಂತೆ ಇದರ ಸಣ್ಣ ಪುಟ್ಟ ವಸ್ತುಗಳಿಗೆ ಕೂಡ ಸಾಕಷ್ಟು ಮೊತ್ತ ತೆತ್ತಲೇಬೇಕು. ಸಾಮಾನ್ಯವಾಗಿ ನಗರದ ರಸ್ತೆಗಳಲ್ಲಿ ಇದು ಒಂದು ಲೀಟರ್ ಪೆಟ್ರೋಲ್ ಗೆ 6 ಕಿ.ಮೀನಷ್ಟು ಸಂಚರಿಸಿದರೆ, ಹೈವೇಗಳಲ್ಲಿ 10 ಕಿ.ಮೀವರೆಗೆ ಸಂಚರಿಸಲಿದೆ.

ಇದೇ ಕಾರ್‌ ನ ಮಾರಾಟಕ್ಕೆ ಶಾರೂಖ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈ ಕಾರು ಅಲ್ಲದೇ, ಶಾರುಖ್ ಬಳಿ ಇನ್ನೂ ದುಬಾರಿ ಬೆಲೆಯ ಕಾರುಗಳಿವೆ. 12 ಕೋಟಿ ರೂಪಾಯಿ ಮೌಲ್ಯದ ಬುಗಾಟಿ ವೈಯ್ರಾನ್ ಕಾರು ಕೂಡ ಇದೆ. 7 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕೂಪ್ ಸೇರಿದಂತೆ ಕೋಟಿಗೂ ಅಧಿಕ ಬೆಲೆಯ ಕಾರುಗಳಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...