alex Certify ತುರ್ತು ಪರಿಸ್ಥಿತಿಯಲ್ಲಿ ಮನುಷ್ಯರು ಇಲ್ಲಿಂದ ಉಸಿರಾಡಬಹುದು..! ನಡೆಯುತ್ತಿದೆ ಪ್ರಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುರ್ತು ಪರಿಸ್ಥಿತಿಯಲ್ಲಿ ಮನುಷ್ಯರು ಇಲ್ಲಿಂದ ಉಸಿರಾಡಬಹುದು..! ನಡೆಯುತ್ತಿದೆ ಪ್ರಯೋಗ

ಉಸಿರಾಟಕ್ಕೆ ಸಂಬಂಧಿಸಿದಂತೆ ಜಪಾನ್  ವಿಜ್ಞಾನಿಗಳು ವಿಚಿತ್ರವಾದ, ಆದ್ರೆ ಅತ್ಯಂತ ಪ್ರಯೋಜನಕಾರಿ ವಿಷ್ಯವೊಂದನ್ನು ಹೇಳಿದ್ದಾರೆ. ಸಸ್ತನಿಗಳು ಗುದದ್ವಾರದಿಂದ ಆಮ್ಲಜನಕವನ್ನು ತೆಗೆದುಕೊಳ್ಳಲು ಸಾಧ್ಯವಿದೆ. ಇದನ್ನು ತುರ್ತು ಪರಿಸ್ಥಿತಿಯಲ್ಲಿ ಮನುಷ್ಯರಿಗೂ ಅನ್ವಯಿಸಬಹುದು ಎಂದು ವಿಜ್ಞಾನಿಗಳ ಸಂಶೋಧನಾ ತಂಡ ಹೇಳಿದೆ.

ಕೆಲವು ಸಮುದ್ರ ಜೀವಿಗಳು ತುರ್ತು ಪರಿಸ್ಥಿತಿಯಲ್ಲಿ ತಮ್ಮ ಕರುಳಿನ ಮೂಲಕ ಉಸಿರಾಡುತ್ತವೆ ಎಂದು ಸಂಶೋಧನಾ ವರದಿಗಳು ಹೇಳುತ್ತದೆ. ಟೋಕಿಯೊ ವೈದ್ಯಕೀಯ ಮತ್ತು ದಂತ ವಿಶ್ವವಿದ್ಯಾಲಯದ ಸಂಶೋಧಕರು ಇಲಿಗಳು ಮತ್ತು ಹಂದಿಗಳ ಬಗ್ಗೆ  ಪ್ರಯೋಗಗಳನ್ನು ನಡೆಸಿದ್ದು, ಫಲಿತಾಂಶಗಳು ಸಕಾರಾತ್ಮಕವಾಗಿವೆ.

ಸಸ್ತನಿಗಳಂತೆ ಉಸಿರಾಟದ ವ್ಯವಸ್ಥೆಯಲ್ಲಿ ತೊಂದರೆ ಇರುವ ಮತ್ತು ಕಡಿಮೆ ವೆಂಟಿಲೇಟರ್ ಹೊಂದಿರುವ ಪರಿಸ್ಥಿತಿಯಲ್ಲಿ ಮನುಷ್ಯರಿಗೂ ಇದನ್ನು ಅನ್ವಯಿಸಬಹುದು ಎನ್ನಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಗುದದ್ವಾರದಿಂದ ಆಮ್ಲಜನಕವನ್ನು ತೆಗೆದುಕೊಳ್ಳಬಹುದು ಎಂದು ವಿಜ್ಞಾನಿಗಳು ವರದಿ ಮಾಡಿದ್ದಾರೆ. ಇದನ್ನು ಎನಾಸ್ ಅಥವಾ ಇವಿಎ ಎಂದು ಕರೆಯಲಾಗುತ್ತದೆ.

ಸಂಶೋಧನೆಯ ಪ್ರಮುಖ ಲೇಖಕ ರಿಯೊ ಒಕಾಬೆ, ಗುದದ್ವಾರದಲ್ಲಿ ಒಳಪದರದ ಮೇಲ್ಮೈಯಲ್ಲಿ ರಕ್ತನಾಳಗಳಿವೆ. ಅಂದರೆ ಗುದದ್ವಾರದ ಮೂಲಕ ಮಾತ್ರೆ ನೀಡಿದ್ರೆ ಅದು ನೇರವಾಗಿ ರಕ್ತಪ್ರವಾಹವನ್ನು ತಲುಪುತ್ತದೆ. ಇದನ್ನು ನೋಡಿದ ನಮ್ಮ ತಂಡಕ್ಕೆ ರಕ್ತಕ್ಕೆ ಆಮ್ಲಜನಕವನ್ನು ಸಾಗಿಸಬಹುದೇ ಎಂಬ ಕುತೂಹಲವಿತ್ತು. ಇದ್ರ ಪ್ರಯೋಗ ಮಾಡಲಾಯಿತು. ಇಲಿ ಮತ್ತು ಹಂದಿಗಳಿಗೆ ಗುದದ ಮೂಲಕ ಆಮ್ಲಜನಕ ನೀಡಲಾಯಿತು. ಆಮ್ಲಜನಕ ತುಂಬಿದ ಎನಿಮಾಗಳನ್ನು ನೀಡಲಾಯಿತು.

ಸಂಶೋಧಕರು ರಕ್ತದ ಹರಿವನ್ನು ಹೆಚ್ಚಿಸಲು ಗುದನಾಳದ ಒಳಪದರವನ್ನು ಉಜ್ಜುವ ಮೂಲಕ ಉರಿಯೂತವನ್ನು ಸೃಷ್ಟಿಸಿದರು. ಇದು ಆಮ್ಲಜನಕದ ಪೂರೈಕೆ ಮಾಡಲು ಯಶಸ್ವಿಯಾಗಿತ್ತು. ಆದ್ರೆ ಇದು ಮನುಷ್ಯರಿಗೆ ಸ್ವೀಕಾರಾರ್ಹವಲ್ಲ. ಆದ್ದರಿಂದ ವಿಜ್ಞಾನಿಗಳು ಆಮ್ಲಜನಕವನ್ನು ಹೊಂದಿರುವ ಪರ್ಫ್ಲೋರೋಡೆಕಾಲಿನ್ ಅನ್ನು ಬಳಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...