alex Certify ಜಪಾನ್‌ನಲ್ಲಿ ಕ್ರ್ಯಾಶ್‌ ಟೆಸ್ಟ್‌ ವೇಳೆ ಕಮಾಲ್‌ ಮಾಡಿದೆ ಮಾರುತಿಯ ಹೊಸ ಸ್ವಿಫ್ಟ್‌…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಪಾನ್‌ನಲ್ಲಿ ಕ್ರ್ಯಾಶ್‌ ಟೆಸ್ಟ್‌ ವೇಳೆ ಕಮಾಲ್‌ ಮಾಡಿದೆ ಮಾರುತಿಯ ಹೊಸ ಸ್ವಿಫ್ಟ್‌…..!

ನಾಲ್ಕನೇ ತಲೆಮಾರಿನ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ಇತ್ತೀಚೆಗೆ ಜಪಾನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಮಾಡಿದೆ. ಇದರಲ್ಲಿ ಕಾರು 99 ಪ್ರತಿಶತ ಸ್ಕೋರ್‌ನೊಂದಿಗೆ 4 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಘರ್ಷಣೆ ಸುರಕ್ಷತೆಯ ಕಾರ್ಯಕ್ಷಮತೆಯಲ್ಲಿ ಹ್ಯಾಚ್‌ಬ್ಯಾಕ್ 81 ಪ್ರತಿಶತ ಅಂಕ ಗಳಿಸಿತು.

ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳ ಪ್ರಕಾರ, ಇದು ಮುಂಭಾಗದ ಮತ್ತು ಅಡ್ಡ ಘರ್ಷಣೆಯಲ್ಲಿ ಪ್ರಯಾಣಿಕರಿಗೆ ಬಲವಾದ ರಕ್ಷಣೆ ನೀಡುತ್ತದೆ. ಪ್ರಿವೆಂಟಿವ್ ಸೇಫ್ಟಿ ಪರ್ಫಾರ್ಮೆನ್ಸ್ ಮತ್ತು ಆಟೋಮ್ಯಾಟಿಕ್ ಆಕ್ಸಿಡೆಂಟ್ ಎಮರ್ಜೆನ್ಸಿ ಕಾಲ್ ಸಿಸ್ಟಂನಲ್ಲಿ ಕ್ರಮವಾಗಿ ಶೇ.99 ಮತ್ತು ಶೇ.100ರಷ್ಟು ಸ್ಕೋರ್ ಮಾಡುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಹೊಸ 2024 ಸುಜುಕಿ ಸ್ವಿಫ್ಟ್‌ನ ಒಟ್ಟು ಸ್ಕೋರ್ 197 ರಲ್ಲಿ 177.80 ಆಗಿದೆ. ಇದು 90 ಪ್ರತಿಶತಕ್ಕೆ ಸಮ.

ಜಪಾನ್‌ನಲ್ಲಿ ಮಾರಾಟವಾಗುವ ಸುಜುಕಿ ಸ್ವಿಫ್ಟ್ ADAS ಸೂಟ್‌ನೊಂದಿಗೆ ಬರುತ್ತದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಡ್ರೈವರ್ ಮಾನಿಟರಿಂಗ್ ಸಿಸ್ಟಮ್, ಅಡಾಪ್ಟಿವ್ ಹೈ ಬೀಮ್ ಅಸಿಸ್ಟ್, ಲೇನ್ ಕೀಪ್ ಸಪೋರ್ಟಿಂಗ್ ಫಂಕ್ಷನ್, ಡ್ಯುಯಲ್ ಸೆನ್ಸರ್ ಬ್ರೇಕ್ ಸಪೋರ್ಟ್ ಮತ್ತು ರೋಡ್ ಸೈನ್ ರೆಕಗ್ನಿಷನ್ ಫಂಕ್ಷನ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳು ಈ ಕಾರಿನಲ್ಲಿವೆ.

ಇದರ ಹೊರತಾಗಿ ಹಿಂಭಾಗದ ಕ್ರಾಸ್ ಟ್ರಾಫಿಕ್ ಅಲರ್ಟ್, ಬ್ಲೈಂಡ್ ಸ್ಪಾಟ್ ಮಾನಿಟರ್, 360 ಡಿಗ್ರಿ ಕ್ಯಾಮೆರಾ ಮತ್ತು ಸ್ಟಾರ್ಟ್ ನೋಟಿಫಿಕೇಶನ್ ಸೌಂಡ್‌ನಂತಹ ಹಲವು ಫೀಚರ್‌ಗಳು ಕಾರಿನಲ್ಲಿವೆ. ಮೇ ಎರಡನೇ ವಾರದಲ್ಲಿ ಭಾರತದಲ್ಲಿ ಹೊಸ 2024 ಮಾರುತಿ ಸ್ವಿಫ್ಟ್‌ ಬಿಡುಗಡೆಯಾಗಲಿದೆ. ಆದರೆ ಈ ವೈಶಿಷ್ಟ್ಯಗಳು ಲಭ್ಯವಿರುವುದಿಲ್ಲ. ಇದು ಜಪಾನ್-ಸ್ಪೆಕ್ ಸ್ವಿಫ್ಟ್‌ಗಿಂತ ಸ್ವಲ್ಪ ಭಿನ್ನವಾಗಿರುತ್ತದೆ.

ಇದರ ಸುರಕ್ಷತೆಯ ರೇಟಿಂಗ್ ಕೂಡ ಜಪಾನೀಸ್ ಮಾದರಿಗಿಂತ ಭಿನ್ನವಾಗಿರಬಹುದು. ಭಾರತ-ಸ್ಪೆಕ್ ಸ್ವಿಫ್ಟ್ ಜಾಗತಿಕ ಮಾದರಿಯಲ್ಲಿ ಲಭ್ಯವಿರುವ ಬಲವಾದ ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಪಡೆಯದಿರಬಹುದು.

ಹೊಸ ಮಾರುತಿ ಸ್ವಿಫ್ಟ್ ಸುಜುಕಿ ಕಾರು 1.2 ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಬಹುದು. ಇದರ ಶಕ್ತಿ ಮತ್ತು ಟಾರ್ಕ್ ಅಂಕಿಅಂಶಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದಾಗ್ಯೂ ಸುಜುಕಿಯ ಹೊಸ Z-ಸರಣಿಯ ಪೆಟ್ರೋಲ್ ಎಂಜಿನ್ ಪ್ರಸ್ತುತ ಸ್ವಿಫ್ಟ್ ಎಂಜಿನ್‌ಗಿಂತ ಉತ್ತಮ ಇಂಧನ ದಕ್ಷತೆಯನ್ನು ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...